ತಮಿಳುನಾಡು: ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯು ಮೂರನೇ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟ್ವೀಟ್ಮಾಡಿದ್ದಾರೆ.
-
.@BJP4TamilNadu today has won in areas where we haven’t had a public representative before. We are officially the 3rd largest party after DMK & AIADMK in TN. Sincerely thank our brave & hardworking Karyakarta’s for their ground work and all of our leaders for their inspiration.
— K.Annamalai (@annamalai_k) February 22, 2022 " class="align-text-top noRightClick twitterSection" data="
">.@BJP4TamilNadu today has won in areas where we haven’t had a public representative before. We are officially the 3rd largest party after DMK & AIADMK in TN. Sincerely thank our brave & hardworking Karyakarta’s for their ground work and all of our leaders for their inspiration.
— K.Annamalai (@annamalai_k) February 22, 2022.@BJP4TamilNadu today has won in areas where we haven’t had a public representative before. We are officially the 3rd largest party after DMK & AIADMK in TN. Sincerely thank our brave & hardworking Karyakarta’s for their ground work and all of our leaders for their inspiration.
— K.Annamalai (@annamalai_k) February 22, 2022
"@ಬಿಜೆಪಿ 4 ತಮಿಳುನಾಡು ಈ ಹಿಂದೆ ಜನಪ್ರತಿನಿಧಿಗಳಿಲ್ಲದ ಕ್ಷೇತ್ರಗಳಲ್ಲಿ ಇಂದು ಗೆಲುವು ಸಾಧಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಂತರ ನಾವು ಅಧಿಕೃತವಾಗಿ 3ನೇ ದೊಡ್ಡ ಪಕ್ಷವಾಗಿದ್ದೇವೆ. ನಮ್ಮ ಕೆಚ್ಚೆದೆಯ ಮತ್ತು ಶ್ರಮಜೀವಿಗಳ ಕಾರ್ಯಕರ್ತರಿಗೆ ಅವರ ನೆಲದ ಕೆಲಸಕ್ಕಾಗಿ ಮತ್ತು ಅವರ ಸ್ಫೂರ್ತಿಗಾಗಿ ನಮ್ಮ ಎಲ್ಲ ನಾಯಕರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳು" ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
-
The unprecedented victory for @BJP4TamilNadu in today’s urban local body elections show us the love Tamil makkal have for our Hon PM Shri @narendramodi avl
— K.Annamalai (@annamalai_k) February 22, 2022 " class="align-text-top noRightClick twitterSection" data="
We dedicate our people’s love to him!
Sincerely thank our @BJP4India National President Shri @JPNadda avl for his guidance!
">The unprecedented victory for @BJP4TamilNadu in today’s urban local body elections show us the love Tamil makkal have for our Hon PM Shri @narendramodi avl
— K.Annamalai (@annamalai_k) February 22, 2022
We dedicate our people’s love to him!
Sincerely thank our @BJP4India National President Shri @JPNadda avl for his guidance!The unprecedented victory for @BJP4TamilNadu in today’s urban local body elections show us the love Tamil makkal have for our Hon PM Shri @narendramodi avl
— K.Annamalai (@annamalai_k) February 22, 2022
We dedicate our people’s love to him!
Sincerely thank our @BJP4India National President Shri @JPNadda avl for his guidance!
ಚೆನ್ನೈನಲ್ಲಿ ಬಿಜೆಪಿ ಒಂದು ವಾರ್ಡ್ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಉಮಾ ಆನಂದನ್ ವಾರ್ಡ್ 134 ರಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೊದಲು, ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಇದುವರೆಗೆ ಮೂರು ವಾರ್ಡ್‌ಗಳನ್ನು ಗೆದ್ದಿದೆ. ಇದರಲ್ಲಿ ತಿರುಪ್ಪೂರ್‌ನ ವಾರ್ಡ್ 9 ಸೇರಿದ್ದು, ಬಿಜೆಪಿ ಅಭ್ಯರ್ಥಿ 230 ಮತಗಳನ್ನು ಪಡೆದರೆ, ಡಿಎಂಕೆ ಅಭ್ಯರ್ಥಿ ಕೇವಲ 30 ಮತಗಳನ್ನು ಪಡೆಯುವ ಮೂಲಕ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಕರೂರು ಜಿಲ್ಲೆಯಲ್ಲಿ ವಾರ್ಡ್ 3ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಅಭೂತಪೂರ್ವ ಗೆಲುವಿಗೆ ಕಾರಣರಾದ ತಮಿಳುನಾಡಿನ ಜನತೆಗೆ ಅಣ್ಣಾಮಲೈ ಧನ್ಯವಾದ ತಿಳಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವು ಪ್ರಧಾನಿ ನರೇಂದ್ರ ಮೋದಿ ಮೇಲೆ ಜನತೆ ಇಟ್ಟಿರುವ ನಂಬಿಕೆ ಮತ್ತು ಪ್ರೀತಿ ತೋರಿಸುತ್ತಿದೆ ಎಂದಿದ್ದಾರೆ.
1373 ಮುನ್ಸಿಪಲ್ ಕಾರ್ಪೊರೇಷನ್ ಸ್ಥಾನಗಳಲ್ಲಿ, ಇದುವರೆಗೆ 1,347 ಸ್ಥಾನಗಳಿಗೆ ಫಲಿತಾಂಶ ಹೊರಬಿದ್ದಿದ್ದು, ಡಿಎಂಕೆ ಪ್ಲಸ್ - 1,090 ಸ್ಥಾನಗಳು, ಎಐಎಡಿಎಂಕೆ-ಪ್ಲಸ್ -158, ಬಿಜೆಪಿ 22, ಪಿಎಂಕೆ 5 ಮತ್ತು 72 ವಾರ್ಡ್‌ಗಳಲ್ಲಿ ಸ್ವತಂತ್ರ ಮತ್ತು ಇತರರು ಗೆದ್ದಿದ್ದಾರೆ.
3842 ಮುನ್ಸಿಪಲ್ ಕೌನ್ಸಿಲ್ ಸ್ಥಾನಗಳ ಪೈಕಿ 3,832 ಸ್ಥಾನಗಳಿಗೆ ಫಲಿತಾಂಶ ಹೊರಬಿದ್ದಿದೆ. ಡಿಎಂಕೆ-ಪ್ಲಸ್ ಇದುವರೆಗೆ 2,638, ಎಐಎಡಿಎಂಕೆ-ಪ್ಲಸ್ 641, ಬಿಜೆಪಿ 58, ಪಿಎಂಕೆ 43 ಮತ್ತು ಸ್ವತಂತ್ರ ಮತ್ತು ಇತರರು 452 ವಾರ್ಡ್‌ಗಳನ್ನು ಗೆದ್ದಿದ್ದಾರೆ.
7621 ಪಟ್ಟಣ ಪಂಚಾಯಿತಿ ಸ್ಥಾನಗಳ ಪೈಕಿ 7,603 ಸ್ಥಾನಗಳಿಗೆ ಫಲಿತಾಂಶ ಹೊರಬಿದ್ದಿದೆ. ಡಿಎಂಕೆ-ಪ್ಲಸ್ ಇದುವರೆಗೆ 4,960, ಎಐಎಡಿಎಂಕೆ-ಪ್ಲಸ್ 1,214, ಬಿಜೆಪಿ 233, ಪಿಎಂಕೆ 63 ಮತ್ತು ಸ್ವತಂತ್ರ ಮತ್ತು ಇತರರು 1133 ವಾರ್ಡ್‌ಗಳನ್ನು ಗೆದ್ದಿದ್ದಾರೆ.
15 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದುಕೊಂಡಿರುವ ಈರೇನಿಯಲ್ ಪಟ್ಟಣ ಪಂಚಾಯಿತಿಯನ್ನು ಬಿಜೆಪಿ ವಶಪಡಿಸಿಕೊಳ್ಳುವ ಮೂಲಕ ಇತರ ಪಕ್ಷಗಳಿಗೆ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಸ್ಟ್ರಾಂಗ್ ರೂಂ ಕೀ ನಾಪತ್ತೆ: ಕಡಲೂರಿನಲ್ಲಿ ಮತ ಎಣಿಕೆ ವಿಳಂಬ