ETV Bharat / bharat

ಕೇರಳದಲ್ಲಿ ಇದ್ದ 1 ಸ್ಥಾನವನ್ನೂ ಕಳೆದುಕೊಂಡ ಬಿಜೆಪಿ: ನೆಮೊಮ್​ ಕ್ಷೇತ್ರ ಸಿಪಿಎಂ ಪಾಲು - kerala politics

12ಕ್ಕೂ ಹೆಚ್ಚು ಸ್ಟಾರ್ ಪ್ರಚಾರಕರು, ಪ್ರಧಾನ ಮಂತ್ರಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇರಳದಲ್ಲಿ ಕೇಂದ್ರ ಸಚಿವರ ಕ್ಯಾಂಪೇನ್​ , ರೋಡ್ ಶೋ ಮತ್ತು ಹೈ ವೋಲ್ಟೇಜ್ ಪ್ರಚಾರ ಸಭೆಗಳನ್ನು ನಡೆಸಿದ್ದರೂ, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದೆ.

kerala
kerala
author img

By

Published : May 3, 2021, 10:39 PM IST

ತಿರುವನಂತಪುರ/ಕೇರಳ:ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕತ್ವವು 2021 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಆಘಾತದಿಂದ ಇನ್ನು ಆಚೆ ಬರಲು ಸಾಧ್ಯವಾಗಿಲ್ಲ.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ನೆಮೊಮ್‌ನಲ್ಲಿ ಹೊಂದಿದ್ದ ಏಕೈಕ ಸ್ಥಾನವನ್ನು ಈ ಬಾರಿಯ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಇತರ ಸ್ಥಾನಗಳನ್ನು ಗೆಲ್ಲುವುದಿರಲಿ, ಪಕ್ಷದ ಮತಗಳ ಪಾಲು ಸಹ ಕುಸಿದಿದೆ. 2016 ರ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿಗೆ 15000ಕ್ಕೂ ಹೆಚ್ಚು ಮತಗಳನ್ನು ಸಿಕ್ಕಿದ್ದವು. 2021 ಚುನಾವಣೆಯಲ್ಲಿ, ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳು 10000 ಕ್ಕಿಂತ ಕಡಿಮೆಯಿದ್ದವು. ಪಕ್ಷದ ಸಾವಿರಾರು ಬಿಜೆಪಿ ಮತಗಳು ಎಲ್ಲಿಗೆ ಹೋಗಿವೆ ಎಂಬುದು ಸದ್ಯ ಪಕ್ಷದ ನಾಯಕರನ್ನು ಕಾಡುತ್ತಿರುವ ಪ್ರಶ್ನೆ.

ಕಳೆದ ಬಾರಿ ಕೇರಳದಲ್ಲಿ ಕೇಸರಿ ಪಕ್ಷವು ಖಾತೆ ತೆರೆದ ಏಕೈಕ ಸ್ಥಾನವಾದ ನೆಮೊಮ್‌ನಲ್ಲಿ ಸೋಲನುಭವಿಸುವುದರ ಜೊತೆಗೆ, ನೆಮೊಮ್‌ನಲ್ಲೂ ಈ ಬಾರಿ ಮತಗಳು ಕಡಿಮೆಯಾಗಿವೆ. 2016 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜಗೋಪಾಲ್ 67,813 ಮತಗಳನ್ನು ಗಳಿಸಿದ್ದರೆ, 2021 ರಲ್ಲಿ ನೆಮೊಮ್‌ನಲ್ಲಿ ಬಿಜೆಪಿಗೆ ಬಂದ ಮತಗಳು ಕೇವಲ 51,888 ಮಾತ್ರ. ಹಿಂದಿನ ರಾಜ್ಯ ಚುನಾವಣೆಗೆ ಹೋಲಿಸಿದರೆ ಬಿಜೆಪಿಯಿಂದ 15925 ಮತಗಳು ಕೈತಪ್ಪಿವೆ ಎಂದು ಇದು ಸೂಚಿಸುತ್ತದೆ. ಈ ಮಧ್ಯೆ 2016 ರಲ್ಲಿ ಕೇವಲ 13,200 ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಈ ಬಾರಿ 36,524 ಮತಗಳನ್ನು ಪಡೆದಿದೆ.

ಹೇಗಾದರೂ ಮಾಡಿ ವಿಧಾನಸಭೆಗೆ ಪ್ರವೇಶಿಸಲು ಒಂದೇ ಸಮಯದಲ್ಲಿ ಎರಡು ಕ್ಷೇತ್ರಗಳಲ್ಲಿ ತಮ್ಮ ಅದೃಷ್ಟಕ್ಕೆ ಪ್ರಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಎರಡೂ ಕ್ಷೇತ್ರಗಳಲ್ಲಿಯೂ ಸೋಲನ್ನು ಅಣುಭವಿಸಿದ್ದಾರೆ. 2016 ರ ಚುನಾವಣೆಯಲ್ಲಿ ಕೇವಲ 89 ಮತಗಳಿಂದ ಮಂಜೇಶ್ವರಂ ಸ್ಥಾನವನ್ನು ಕಳೆದುಕೊಂಡ ಸುರೇಂದ್ರನ್ ಈ ಬಾರಿ 745 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಇನ್ನು ಎಣಿಕೆಯ ಸಮಯದಲ್ಲಿ ಹಲವು ಸುತ್ತುಗಳ ಮುನ್ನಡೆ ಕಾಯ್ದುಕೊಂಡ ನಂತರ ಪಾಲಕ್ಕಾಡ್‌ನಲ್ಲಿ ಮೆಟ್ರೋಮ್ಯಾನ್​ ಇ ಶ್ರೀಧರನ್ ಅವರ ಸೋಲು ಬಿಜೆಪಿಗೆ ತೀವ್ರ ಆಘಾತ ಉಂಟು ಮಾಡಿದೆ. ನಟ ಮತ್ತು ರಾಜ್ಯಸಭಾ ಸದಸ್ಯರಾದ ಸುರೇಶ್ ಗೋಪಿ ಅವರನ್ನು ಕಣಕ್ಕಿಳಿಸುವ ಮೂಲಕ ತ್ರಿಶೂರ್ ಗೆಲ್ಲುವ ಬಿಜೆಪಿಯ ಆಸೆಯೂ ಭಗ್ನಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.