ETV Bharat / bharat

ಪಶ್ಚಿಮ ಬಂಗಾಳ ಹಿಂಸಾಚಾರ: ಗಾಯಾಳು ಬಿಜೆಪಿ ಕಾರ್ಯಕರ್ತರ ಭೇಟಿಯಾದ ವಿಶೇಷ ನಿಯೋಗ - ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ

ಪಶ್ಚಿಮ ಬಂಗಾಳದ ಹಿಂಸಾಚಾರದಲ್ಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತರನ್ನು ಬಿಜೆಪಿ ನಿಯೋಗ ಭೇಟಿ ಮಾಡಿದೆ.

bjp-delegation-team-meet-injured-bjp-workers-in-kolkata
ಪಶ್ಚಿಮ ಬಂಗಾಳದ ಹಿಂಸಾಚಾರ: ಗಾಯಾಳು ಬಿಜೆಪಿ ಕಾರ್ಯಕರ್ತರ ಭೇಟಿಯಾದ ವಿಶೇಷ ನಿಯೋಗ
author img

By

Published : Sep 17, 2022, 5:38 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಹಿಂಸಾಚಾರದ ಬಗ್ಗೆ ಬಿಜೆಪಿಯು ವಿಶೇಷ ನಿಯೋಗ ನೇಮಿಸಿದ್ದು, ಇಂದು ರಾಜಧಾನಿ ಕೋಲ್ಕತ್ತಾಕ್ಕೆ ನಿಯೋಗ ಭೇಟಿ ನೀಡಿದೆ.

ಸೆಪ್ಟೆಂಬರ್ 13ರಂದು ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಸಚಿವಾಲಯ ಚಲೋ ರ‍್ಯಾಲಿ ಹಮ್ಮಿಕೊಂಡಿತ್ತು. ಈ ವೇಳೆ ಕೋಲ್ಕತ್ತಾ, ಸಂತ್ರಗಚಿ ಮತ್ತು ಹೌರಾ ಸೇರಿದಂತೆ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಸಿತ್ತು. ಇದರಿಂದ ಕೋಲ್ಕತ್ತಾ ರಣರಂಗವಾಗಿ ಮಾರ್ಪಟ್ಟು ರಾಜ್ಯಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಯಿತು.

ಈ ಘರ್ಷಣೆಯಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ಪುರುಷರು, ಮಹಿಳೆಯರು ಎಂಬುವುದನ್ನು ಲೆಕ್ಕಿಸದೇ ಪೊಲೀಸರು ದಾಳಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೇ, ಬಿಜೆಪಿ ಕೌನ್ಸಿಲರ್ ಮೀನಾದೇವಿ ಪುರೋಹಿತ್ ತಲೆಗೆ ಪೆಟ್ಟಾಗಿದ್ದು, ಹಲವು ಕಾರ್ಯಕರ್ತರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಅಲ್ಲದೇ. ಪೊಲೀಸರ ಕ್ರಮವನ್ನು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಹಿಂಸಾಚಾರದ ತನಿಖೆ ನಡೆಸಿ ವರದಿ ಸಲ್ಲಿಸಲು ಐವರು ಸದಸ್ಯರ ವಿಶೇಷ ತಂಡವನ್ನು ನೇಮಿಸಿದ್ದಾರೆ. ಇಂದು ಬೆಳಗ್ಗೆ ಈ ಸತ್ಯಶೋಧನಾ ತಂಡದ ಸದಸ್ಯರು ಕೋಲ್ಕತ್ತಾಕ್ಕೆ ಆಗಮಿಸಿದ್ದಾರೆ. ಬಿಜೆಪಿ ಕೌನ್ಸಿಲರ್ ಮೀನಾದೇವಿ ಪುರೋಹಿತ್ ದಾಖಲಾಗಿರುವ ವೈದ್ಯಕೀಯ ಕಾಲೇಜಿಗೆ ತೆರಳಿ ಅವರಿಂದ ಮಾಹಿತಿ ಸಂಗ್ರಹಿಸಿದರು. ಇತರ ಗಾಯಾಳು ಬಿಜೆಪಿ ಕಾರ್ಯಕರ್ತರನ್ನೂ ನಿಯೋಗದ ಸದಸ್ಯರು ಭೇಟಿ ಮಾಡಿದರು.

ಇದನ್ನೂ ಓದಿ: ಬೀದಿ ನಾಯಿ ದಾಳಿ ಮಾಡಿದರೆ ಕೊಂದೇ ಬಿಡುವೆ.. ಏರ್​ಗನ್​ ಪ್ರದರ್ಶಿಸಿದ ವ್ಯಕ್ತಿ ವಿರುದ್ಧ ಕೇಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.