ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ 148 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಗೊಳಿಸಿದ್ದು, ಕೆಲ ಪ್ರಮುಖ ಅಭ್ಯರ್ಥಿಗಳಿಗೆ ಮಣೆ ಹಾಕಿದೆ.
ಪಟ್ಟಿಯಲ್ಲಿ ಪ್ರಮುಖವಾಗಿ ಕೃಷ್ಣನಗರದಿಂದ ಮುಕುಲ್ ರಾಯ್, ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಹಾಗೂ ರಾಹುಲ್ ಸಿನ್ಹಾಗೆ ಅವಕಾಶ ನೀಡಿದೆ. ಇದರ ಜತೆಗೆ ಜಾನಪದ ಕಲಾವಿದ ಅಶಿಮ್ ಸರ್ಕಾರ್ ಹಾಗೂ ವಿಜ್ಞಾನಿ ಗೋಭರ್ಧನ್ ದಾಸ್ಗೂ ಮಣೆ ಹಾಕಿದೆ. ಪ್ರಮುಖವಾಗಿ 11 ಶಾಸಕರು ಹಾಗೂ ಓರ್ವ ಶಾಸಕರು ಪಟ್ಟಿಯಲ್ಲಿದ್ದಾರೆ.
-
Bharatiya Janata Party (BJP) releases a list of candidates for the fifth, sixth, seventh and eighth phases of #WestBengalElections2021 pic.twitter.com/rY19q3Drb8
— ANI (@ANI) March 18, 2021 " class="align-text-top noRightClick twitterSection" data="
">Bharatiya Janata Party (BJP) releases a list of candidates for the fifth, sixth, seventh and eighth phases of #WestBengalElections2021 pic.twitter.com/rY19q3Drb8
— ANI (@ANI) March 18, 2021Bharatiya Janata Party (BJP) releases a list of candidates for the fifth, sixth, seventh and eighth phases of #WestBengalElections2021 pic.twitter.com/rY19q3Drb8
— ANI (@ANI) March 18, 2021
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ನಮೋ ಅಬ್ಬರ: ಮಮತಾ ವಿರುದ್ಧ ವಾಗ್ದಾಳಿ
294 ಕ್ಷೇತ್ರಗಳ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 8 ಹಂತಗಳಲ್ಲಿ ನಡೆಯಲಿದ್ದು, ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ನಿನ್ನೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ 148 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಇದು 5,6,7 ಹಾಗೂ 8ನೇ ಹಂತದ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಾಗಿದೆ. ಇನ್ನು ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದು, ಹೀಗಾಗಿ ಅವರಿಗೆ ಮಣೆ ಹಾಕಿಲ್ಲ.ಪ್ರಮುಖವಾಗಿ ಸಂಸದರಾದ ಬಾಬುಲ್ ಸುಪ್ರಿಯೋ, ಲಾಕೆಟ್ ಚಟರ್ಜಿ, ಸ್ವಪನ್ ದಾಸ್ಗುಪ್ತಾ ಮತ್ತು ನಿತೀಶ್ ಪ್ರಾಮಾಣಿಕ್ಗೆ ಅವಕಾಶ ನೀಡಲಾಗಿದೆ.