ETV Bharat / bharat

ಜಿ.ಪಂ. ಚುನಾವಣೆ: 851 ರಲ್ಲಿ 766 ಕ್ಷೇತ್ರ ಗೆದ್ದು ಬೀಗಿದ ಪಟ್ನಾಯಕ್​ ಪಡೆ.. ಬಿಜೆಪಿಗೆ ದೊಡ್ಡ ಮುಖಭಂಗ - ಬಿಜೆಪಿಗೆ ಏಕಪಕ್ಷೀಯ ಗೆಲುವು

ರಾಜ್ಯದ 851 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜು ಜನತಾದಳ ಪಕ್ಷ(ಬಿಜೆಡಿ) ಏಕಸ್ವಾಮ್ಯವಾಗಿ 766 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಇದು ಹಿಂದೆಂದಿಗಿಂತಲೂ ದಾಖಲೆಯ ವಿಜಯವಾಗಿರುವುದು ವಿಶೇಷವಾಗಿದೆ.

Panchayat Polls
ಜಿ ಪಂ ಚುನಾವಣೆ
author img

By

Published : Mar 2, 2022, 12:33 PM IST

ಭುವನೇಶ್ವರ(ಒಡಿಶಾ): ಉತ್ತಮ ಆಡಳಿತ ನೀಡಿದರೆ ಜನ ಕೈ ಬಿಡಲ್ಲ ಎಂಬುದಕ್ಕೆ ಒಡಿಶಾದ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ರೇ ಸಾಕ್ಷಿ. ಪಟ್ನಾಯಕ್​ರ ಅಭಿವೃದ್ಧಿ ಆಡಳಿತಕ್ಕೆ ಫಿದಾ ಆಗಿರುವ ಅಲ್ಲಿಯ ಜನರು ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್​ ಚುನಾವಣೆಯಲ್ಲಿ ದಾಖಲೆಯ ಜಯ ತಂದುಕೊಟ್ಟಿದ್ದಾರೆ. ರಾಜ್ಯದ 851 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜು ಜನತಾದಳ ಪಕ್ಷ(ಬಿಜೆಡಿ) ಏಕಸ್ವಾಮ್ಯವಾಗಿ 766 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಇದು ಹಿಂದೆಂದಿಗಿಂತಲೂ ದಾಖಲೆಯ ವಿಜಯವಾಗಿರುವುದು ವಿಶೇಷವಾಗಿದೆ.

ರಾಜ್ಯ ಚುನಾವಣಾ ಆಯೋಗ ಇಂದು ಫಲಿತಾಂಶ ಪ್ರಕಟಿಸಿದ್ದು, ಬಿಜೆಡಿ ಕಳೆದ ಬಾರಿಗಿಂತಲೂ ಅತ್ಯಧಿಕ ಸ್ಥಾನಗಳಲ್ಲಿ ಜಯ ಸಾಧಿಸಿದೆ. 2017 ರಲ್ಲಿ 473 ಸ್ಥಾನಗಳಲ್ಲಿ ಗೆದ್ದಿದ್ದ ಪಕ್ಷ, ಈ ಬಾರಿ 290 ಸ್ಥಾನಗಳಲ್ಲಿ ಹೆಚ್ಚುವರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನದೇ ದಾಖಲೆಯನ್ನು ಮುರಿದಿದೆ.

ಗ್ರಾಮೀಣರ ಜೈಕಾರ: ಗ್ರಾಮೀಣ ಭಾಗದಲ್ಲಿ ಬಿಜೆಡಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಚಲಾವಣೆಗೊಂಡ 2.10 ಕೋಟಿ ಮತಗಳಲ್ಲಿ ಬಿಜೆಡಿಗೆ ಶೇ.52.73 ರಷ್ಟು ಮತಗಳು ಬಿದ್ದಿವೆ. ಇದು ಪಕ್ಷದ ಖ್ಯಾತಿಯ ಸಂಕೇತವಾಗಿದೆ.

ಮುದುಡಿದ ಕಮಲ: ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಇಡೀ ರಾಜ್ಯದಲ್ಲಿ ಕೇವಲ 42 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದೆ. ಕಳೆದ ಬಾರಿ(2017) 297 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಮುಖಭಂಗ ಅನುಭವಿಸಿ ಎರಡನೇ ಸ್ಥಾನ ಪಡೆದಿದೆ.

ಭಾರಿ ಕಸರತ್ತಿನ ಮಧ್ಯೆಯೂ ಕಾಂಗ್ರೆಸ್​ ಪಕ್ಷ 37 ಸ್ಥಾನಗಳಲ್ಲಿ ಮಾತ್ರ ವಿರಾಜಮಾನವಾಗಿದೆ. ಕಳೆದ ಬಾರಿ ಇದು 60 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಮತದಾರ ಅದರ ಅರ್ಧದಷ್ಟು ಸ್ಥಾನಗಳಲ್ಲಿ ಮಾತ್ರ ಬೆಂಬಲಿಸಿದ್ದಾನೆ. ರಾಜ್ಯದ 30 ಜಿಲ್ಲೆಗಳಲ್ಲಿ ಬಿಜೆಡಿ ಅಭ್ಯರ್ಥಿಗಳು ಗರಿಷ್ಠ ಗೆಲುವು ಸಾಧಿಸಿದ್ದರಿಂದ ಎಲ್ಲಾ ಜಿಲ್ಲಾ ಪಂಚಾಯತ್​ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ಓದಿ: ಉಕ್ರೇನ್‌ ಮೇಲೆ ರಷ್ಯಾ ಯುದ್ಧದ ತಲ್ಲಣ; ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 900 ಅಂಕಗಳ ಭಾರಿ ಕುಸಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.