ETV Bharat / bharat

ಯುಪಿಗೆ ಯೋಗಿ, ಮಣಿಪುರಕ್ಕೆ ಬಿರೇನ್​ ಸಿಂಗ್: ಗೋವಾ-ಉತ್ತರಾಖಂಡ್​ ಸಿಎಂ ಯಾರು? - ಉತ್ತರಾಖಂಡ್​ ಮುಖ್ಯಮಂತ್ರಿ ಆಯ್ಕೆ

ಗೋವಾ ಮತ್ತು ಉತ್ತರಾಖಂಡ್​ನಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗೆ ಕೇಸರಿ ಪಡೆ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಲೇ ಇದ್ದು, ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಹೆಸರು ಕೆಲ ಹೊತ್ತಿನಲ್ಲೇ ಘೋಷಣೆಯಾಗುವ ನಿರೀಕ್ಷೆ ಇದೆ.

bjp
bjp
author img

By

Published : Mar 21, 2022, 5:25 PM IST

ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಈಗ ಅಧಿಕಾರ ರಚಿಸುವ ಕಸರತ್ತು ನಡೆಸುತ್ತಲೇ ಇದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರಿಗೆ ಮುಖ್ಯಮಂತ್ರಿ ಪಟ್ಟ ಖಾತ್ರಿಯಾಗಿದ್ದರೆ, ಮಣಿಪುರ ಮುಖ್ಯಮಂತ್ರಿಯಾಗಿ ಕೆ.ಬಿರೇನ್​ ಸಿಂಗ್​ ಸಿಎಂ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ, ಗೋವಾ ಮತ್ತು ಉತ್ತರಾಖಂಡ್​ನಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗೆ ಕೇಸರಿ ಪಡೆ ಸಭೆಗಳ ಮೇಲೆ ಸಭೆ ನಡೆಸುತ್ತಲೇ ಇದ್ದು, ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಹೆಸರುಗಳು ಕೆಲ ಹೊತ್ತಿನಲ್ಲೇ ಹೊರ ಬೀಳುವ ಸಾಧ್ಯತೆ ಇದೆ.

ಉತ್ತರಾಖಂಡ್‌ಗೆ ಹೊಸ ಮುಖದ ಹುಡುಕಾಟ?: ಉತ್ತರಾಖಂಡ್​ ಹಾಗೂ ಗೋವಾದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ಬಿಜೆಪಿಗೆ ಒಂದು ರೀತಿಯಲ್ಲಿ ಕಗ್ಗಂಟಾಗಿದೆ. ಯಾಕೆಂದರೆ, ಉತ್ತರಾಖಂಡ್​ನಲ್ಲಿ ಸ್ವತಃ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಹೀಗಾಗಿಯೇ ಹೊಸ ಮುಖದ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್​ ಮಗ್ನವಾಗಿದೆ. ಇದೇ ವೇಳೆ ಐದಾರು ಜನರ ಹೆಸರುಗಳು ಮುಖ್ಯಮಂತ್ರಿ ಗಾದಿಗೆ ಕೇಳಿ ಬರುತ್ತಿವೆ. ಇದರಲ್ಲಿ ಪ್ರಮುಖವಾಗಿ ಶಾಸಕರಾದ ಸತ್​ಪಾಲ್ ಮಹಾರಾಜ್, ಧನ್​ಸಿಂಗ್ ರಾವತ್, ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಅವರ ಹೆಸರುಗಳು ಸಿಎಂ ರೇಸ್​ನಲ್ಲಿವೆ.

ಅಲ್ಲದೇ, ಉತ್ತರಾಖಂಡ್​ಗೆ ಈಗಾಗಲೇ ಪಕ್ಷದ ಕೇಂದ್ರದ ವೀಕ್ಷಕರಾದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ವಿದೇಶಾಂಗ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಭೇಟಿ ನೀಡಿದ್ದು, ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಹೊಸ ಮುಖ್ಯಮಂತ್ರಿಯನ್ನು ಅಂತಿಮಗೊಳಿಸಲಾಗುತ್ತದೆ. ಅದೇ ರೀತಿಯಾಗಿ ಗೋವಾದಲ್ಲೂ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಹತ್ವದ ಸಭೆ ನಡೆಯುತ್ತಿದೆ.

ಗೋವಾಗೆ ಮತ್ತೆ ಸಾವಂತ್‌ ಸಿಎಂ? ಇಲ್ಲಿಗೂ ಕೂಡ ಪಕ್ಷದ ವೀಕ್ಷಕರಾದ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್.ಮುರುಗನ್ ಭೇಟಿ ಕೊಟ್ಟಿದ್ದು, ಗೋವಾದ ಪಕ್ಷದ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಹೊಸ ಮುಖ್ಯಮಂತ್ರಿ ಮತ್ತು ಪದಗ್ರಹಣದ ದಿನಾಂಕವನ್ನೂ ನಿಗದಿ ಮಾಡಲಾಗುತ್ತದೆ ಎಂದು ಎನ್ನಲಾಗುತ್ತಿದ್ದು, ಹಂಗಾಮಿ ಮುಖ್ಯಮಂತ್ರಿ ಪ್ರಮೋದ್​ ಸಾವಂತ್ ಹೊಸ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: 68ರ ಇಳಿವಯಸ್ಸಿನಲ್ಲೂ ತೆಂಗಿನ ಮರ ಹತ್ತುವ ಅಜ್ಜಿ!: 46 ವರ್ಷಗಳಿಂದಲೂ ಕೃಷಿಯೇ ಈಕೆಯ ಖುಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.