ETV Bharat / bharat

ಜಿಟಿಎ ಚುನಾವಣೆ ವಿರೋಧಿಸಿ ಬಿಮಲ್ ಗುರುಂಗ್ ಉಪವಾಸ - ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್

ಗೂರ್ಖಾ ಜನಮುಕ್ತಿ ಮೋರ್ಚಾ ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದೆ. ಜೊತೆಗೆ ಜಿಟಿಎ ಚುನಾವಣೆ ವಿರೋಧಿಸುವ ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಚುನಾವಣೆಯನ್ನು ವಿರೋಧಿಸಬೇಕು ಎಂದು ಬಿಮಲ್ ಗುರುಂಗ್ ಕರೆ ನೀಡಿದ್ದಾರೆ.

ಜಿಟಿಎ ಚುನಾವಣೆ ವಿರೋಧಿಸಿ ಬಿಮಲ್ ಗುರುಂಗ್ ಉಪವಾಸ

author img

By

Published : May 25, 2022, 8:21 PM IST

ಡಾರ್ಜಿಲಿಂಗ್ ( ಪಶ್ಚಿಮ ಬಂಗಾಳ ): ರಾಜ್ಯ ಸರ್ಕಾರವು ಈಗಾಗಲೇ ಘೋಷಣೆ ಮಾಡಿರುವ ಇಲ್ಲಿನ 45 ಕ್ಷೇತ್ರಗಳಲ್ಲಿ ನಡೆಯುವ ಜಿಟಿಎ (ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್) ಚುನಾವಣೆಯನ್ನು ವಿರೋಧಿಸಿ ಗೂರ್ಖಾ ಜನಮುಕ್ತಿ ಮೋರ್ಚಾದ ಮುಖ್ಯಸ್ಥ ಬಿಮಲ್ ಗುರುಂಗ್ ಅವರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸಿಂಗ್ಮಾರಿಯಲ್ಲಿರುವ ಗೂರ್ಖಾ ಜನಮುಕ್ತಿ ಮೋರ್ಚಾದ ಕೇಂದ್ರ ಕಚೇರಿಯಲ್ಲಿ ಇವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಜಿಟಿಎ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಬಂಡಾಯ ಭುಗಿಲೆದ್ದಿದೆ. ಚುನಾವಣೆಯನ್ನು ವಿರೋಧಿಸಿ ಪಕ್ಷದ ಕಚೇರಿಯ ಹೊರಗೆ ನಡೆದ ಪ್ರತಿಭಟನೆಯಲ್ಲಿ ಜನ್ ಮುಕ್ತಿ ಮೋರ್ಚಾದ ಕಾರ್ಯಕರ್ತರು ಮತ್ತು ಬೆಂಬಲಿಗರು ಬಿಮಲ್ ಗುರುಂಗ್ ಅವರ ಉಪವಾಸ ಸತ್ಯಾಗ್ರಹಕ್ಕೆ ಸಹಕಾರ ನೀಡಿದ್ದಾರೆ.

ಗೂರ್ಖಾ ಜನಮುಕ್ತಿ ಮೋರ್ಚಾ ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದೆ. ಜೊತೆಗೆ ಜಿಟಿಎ ಚುನಾವಣೆ ವಿರೋಧಿಸುವ ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿ ಚುನಾವಣೆ ವಿರೋಧಿಸಬೇಕು ಎಂದು ಬಿಮಲ್ ಗುರುಂಗ್ ಕರೆ ನೀಡಿದ್ದಾರೆ.

ಜಿಟಿಎ ಒಪ್ಪಂದದ ವೇಳೆ ನಮಗೆ ನೀಡಿರುವ ಎಲ್ಲ ಬೇಡಿಕೆ ಹಾಗೂ ಭರವಸೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಬಿಮಲ್ ಗುರುಂಗ್ ಇದೇ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: 500 ಹೆರಿಗೆ ಮಾಡಿಸಿದ ಶತಾಯುಷಿ ಪುಟ್ಟಮ್ಮಗೆ ಜನರಿಂದ ಸನ್ಮಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.