ನವದೆಹಲಿ: ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರದ ಕೋವಿಡ್ ಲಸಿಕೆ ಅಭಿಯಾನ ಕಳೆದ ಭಾನುವಾರ 200 ಕೋಟಿಯ ಮೈಲುಗಲ್ಲು ಸಾಧಿಸಿದೆ. ಇದಕ್ಕೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"ಭಾರತ 200 ಕೋಟಿ ಡೋಸ್ ಕೋವಿಡ್ 19 ಲಸಿಕೆಯನ್ನು ನೀಡುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಕೋವಿಡ್ ಪರಿಣಾಮವನ್ನು ತಗ್ಗಿಸಲು ಭಾರತೀಯ ಲಸಿಕೆ ತಯಾರಕರು ಮತ್ತು ಭಾರತ ಸರ್ಕಾರದೊಂದಿಗೆ ನಮ್ಮ ನಿರಂತರ ಪಾಲುದಾರಿಕೆಗಾಗಿ ನಾವು ಕೃತಜ್ಞರಾಗಿರುತ್ತೇವೆ" ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
-
Congratulations @narendramodi for yet another milestone of administering #200crorevaccinations. We are grateful for our continued partnership with Indian vaccine manufacturers and the Indian government for mitigating the impact of COVID19. https://t.co/YeGUPsveL0
— Bill Gates (@BillGates) July 19, 2022 " class="align-text-top noRightClick twitterSection" data="
">Congratulations @narendramodi for yet another milestone of administering #200crorevaccinations. We are grateful for our continued partnership with Indian vaccine manufacturers and the Indian government for mitigating the impact of COVID19. https://t.co/YeGUPsveL0
— Bill Gates (@BillGates) July 19, 2022Congratulations @narendramodi for yet another milestone of administering #200crorevaccinations. We are grateful for our continued partnership with Indian vaccine manufacturers and the Indian government for mitigating the impact of COVID19. https://t.co/YeGUPsveL0
— Bill Gates (@BillGates) July 19, 2022
ಎಲ್ಲಾ ವಯಸ್ಕರಿಗೆ (18 ವರ್ಷ ಮತ್ತು ಮೇಲ್ಪಟ್ಟ) ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ (ಸಿವಿಸಿ) ಉಚಿತ ಬೂಸ್ಟರ್ ಲಸಿಕೆ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಈಗಾಗಲೇ ತಿಳಿಸಿದ್ದಾರೆ. ಜುಲೈ 15 ರಿಂದ ಸೆ.30, 2022 ರವರೆಗೆ 75 ದಿನಗಳವರೆಗೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಉಚಿತ ಮುನ್ನೆಚ್ಚರಿಕೆ ಡೋಸ್ ಲಭ್ಯವಿದೆ.
ಇದನ್ನೂ ಓದಿ: 2 ಬಿಲಿಯನ್ ಕೋವಿಡ್ ವ್ಯಾಕ್ಸಿನ್ ಡೋಸ್ ವಿತರಿಸಿ ದಾಖಲೆ ಬರೆದ ಭಾರತ