ETV Bharat / bharat

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ಕಾಳಿ ಚರಣ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​ - Remarks Against Mahatma Gandhi

ಮಹಾತ್ಮ ಗಾಂಧಿ ವಿರುದ್ಧ ಅಸಭ್ಯ ಹೇಳಿಕೆ ನೀಡಿದರೂ ಕಾಳಿ ಚರಣ್‌ಗೆ ಪಶ್ಚಾತ್ತಾಪವಿಲ್ಲ. ಏಕೆಂದರೆ, ಹೇಳಿಕೆ ನೀಡಿದ ನಾಲ್ಕು ದಿನಗಳ ನಂತರ ಅವರು ಯೂಟ್ಯೂಬ್‌ನಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜಾಮೀನು ಪಡೆದ ನಂತರ ಅವರು ತಮ್ಮ ಕೃತ್ಯವನ್ನು ಪುನರಾವರ್ತಿಸಬಹುದು ಮತ್ತು ಕೋಮುವಾದವನ್ನು ಹರಡಬಹುದು ಎಂದು ಒಟ್ವಾನಿ ವಾದಿಸಿದರು..

ಕಾಳಿ ಚರಣ್
ಕಾಳಿ ಚರಣ್
author img

By

Published : Apr 1, 2022, 7:50 PM IST

ಬಿಲಾಸ್‌ಪುರ (ಛತ್ತೀಸ್‌ಗಢ): ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ಕಾಳಿ ಚರಣ್ ಮಹಾರಾಜ್ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಛತ್ತೀಸ್‌ಗಢ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿ ಅರವಿಂದ್ ಸಿಂಗ್ ಚಾಂಡೇಲ್ ಶುಕ್ರವಾರ ಎರಡೂ ಕಡೆಯ ವಾದ-ವಿವಾದವನ್ನು ಆಲಿಸಿದ ನಂತರ ತೀರ್ಪು ಕಾಯ್ದಿರಿಸಿದ್ದಾರೆ.

ಇದಕ್ಕೂ ಮುನ್ನ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ, ವಕೀಲ ಮೆಹುಲ್ ಜೆಥಾನಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಪೊಲೀಸರು ಕಾಳಿ ಚರಣ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಆದ್ರೆ, ಅರ್ಜಿಯಲ್ಲಿ ಈ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಮುಗ್ಧ ಮಗುವನ್ನು ರಾಕ್ಷಸನ ಹಾಗೆ ಥಳಿಸಿದ ಕ್ರೂರಿ : ವಿಡಿಯೋ ಭಯಾನಕ

ಶುಕ್ರವಾರ, ನ್ಯಾಯಮೂರ್ತಿ ಅರವಿಂದ್ ಸಿಂಗ್ ಚಂದೇಲ್ ಅವರ ಸಮ್ಮುಖದಲ್ಲಿ ಜಾಮೀನು ಅರ್ಜಿಯ ಚರ್ಚೆ ನಡೆಯಿತು. ಕಾಳಿ ಚರಣ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಿಶೋರ್ ಭಾದುರಿ, ಪುಸ್ತಕಗಳಲ್ಲಿ ಬರೆದಿರುವ ಕೆಲವು ವಿಷಯಗಳನ್ನು ಕಾಳಿ ಚರಣ್ ಸಾರ್ವಜನಿಕವಾಗಿ ಹೇಳಿದ್ದಾರೆ. ಹಾಗಾಗಿ, ಇದು ಅಪರಾಧವಲ್ಲ ಎಂದು ವಾದಿಸಿದರು.

ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸುನೀಲ್ ಒಟ್ವಾನಿ, ಮಹಾತ್ಮ ಗಾಂಧಿ ವಿರುದ್ಧ ಅಸಭ್ಯ ಹೇಳಿಕೆ ನೀಡಿದರೂ ಕಾಳಿ ಚರಣ್‌ಗೆ ಪಶ್ಚಾತ್ತಾಪವಿಲ್ಲ. ಏಕೆಂದರೆ, ಹೇಳಿಕೆ ನೀಡಿದ ನಾಲ್ಕು ದಿನಗಳ ನಂತರ ಅವರು ಯೂಟ್ಯೂಬ್‌ನಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜಾಮೀನು ಪಡೆದ ನಂತರ ಅವರು ತಮ್ಮ ಕೃತ್ಯವನ್ನು ಪುನರಾವರ್ತಿಸಬಹುದು ಮತ್ತು ಕೋಮುವಾದವನ್ನು ಹರಡಬಹುದು ಎಂದು ಒಟ್ವಾನಿ ವಾದಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.