ETV Bharat / bharat

ಕಾಂಗ್ರೆಸ್‌ ಮಹಿಳಾ ಅಭ್ಯರ್ಥಿಗಳಿಗೆ ಮಣೆ ಹಾಕದ ಯುಪಿ ಮತದಾರ: ಬಿಕಿನಿ ಗರ್ಲ್​​ ಸೇರಿ ಹಲವರಿಗೆ ಸೋಲು - ಉತ್ತರ ಪ್ರದೇಶ ಕಾಂಗ್ರೆಸ್​

ಮಹಿಳಾ ಮತದಾರ ಪ್ರಭುಗಳನ್ನು ಓಲೈಕೆ ಮಾಡುವ ಪ್ರಯತ್ನದಲ್ಲಿ ಅತಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ್ದ ಕಾಂಗ್ರೆಸ್​ ಪಕ್ಷ​ ಉತ್ತರ ಪ್ರದೇಶದಲ್ಲಿ ಕೈ ಸುಟ್ಟುಕೊಂಡಿದೆ.

actress archana gautam
actress archana gautam
author img

By

Published : Mar 10, 2022, 7:30 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಶೇ. 40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದ್ದ ಕಾಂಗ್ರೆಸ್​ ಪಕ್ಷಕ್ಕೆ ಮತದಾರರು ಮಣೆ ಹಾಕಿಲ್ಲ. ಪರಿಣಾಮ, ಬಹುತೇಕ ಎಲ್ಲ ಮಹಿಳಾ ಅಭ್ಯರ್ಥಿಗಳು ಬಿಜೆಪಿ ಅಲೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.

ಉತ್ತರ ಪ್ರದೇಶ ರಾಜಕೀಯ ಕದನಕ್ಕೆ ಧುಮುಕಿದ್ದ ಪ್ರಿಯಾಂಕಾ ಗಾಂಧಿಗೆ ಈ ಸಲ ಯಶಸ್ಸು ಸಿಕ್ಕಿಲ್ಲ. ಪ್ರಮುಖವಾಗಿ 'ಬಿಕಿನಿ ಗರ್ಲ್'​ ಅರ್ಚನಾ ಗೌತಮ್​​, ಪೂನಮ್ ಪಂಡಿತ್ ಹಾಗು ಆಶಾ ಸಿಂಗ್​ ಸೇರಿದಂತೆ ಅನೇಕರು ಸೋಲು ಕಂಡರು.

up elections 2022 bikni girl
'ಕೈ'​​ ಪಕ್ಷದ ಬಿಕಿನಿ ಗರ್ಲ್​​ ಅರ್ಚನಾ ಗೌತಮ್​ಗೆ ಸೋಲು

ಇದನ್ನೂ ಓದಿ: ಮೊಬೈಲ್​ ರಿಪೇರಿ ಅಂಗಡಿ ಕೆಲಸಗಾರನ ವಿರುದ್ಧ ಸೋತ ಸಿಎಂ ಚರಣ್‌ಜಿತ್​ ಸಿಂಗ್​ ಚನ್ನಿ!

ಚುನಾವಣೆ ಘೋಷಣೆಯಾದಾಗಿನಿಂದಲೂ ಮಹಿಳಾ ಮತದಾರರನ್ನು ಟಾರ್ಗೆಟ್​ ಮಾಡಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಗಾಂಧಿ, ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುವ ಸಂದರ್ಭದಲ್ಲೂ ಹೆಚ್ಚಿನ ಮಹಿಳಾ ಅಭ್ಯರ್ಥಿಗಳ ಹೆಸರುಗಳನ್ನೇ ಅಂತಿಮಗೊಳಿಸಿದ್ದರು. ಇದರ ಜೊತೆಗೆ, ಮಹಿಳೆಯರಿಗೋಸ್ಕರ ಪಿಂಕ್​ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದರು.

ಮೀರತ್​ನ ಹಸ್ತಿನಾಪುರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನಟಿ ಅರ್ಚನಾ ಗೌತಮ್​ ಸೋಲು ಕಂಡಿದ್ದು, ಉನ್ನಾವೋ ಅತ್ಯಾಚಾರ​ ಸಂತ್ರಸ್ತೆಯ ತಾಯಿ ಕೂಡ ಸೋತಿದ್ದಾರೆ. ಇದರ ಜೊತೆಗೆ ಸೋನಭದ್ರ ಹತ್ಯಾಕಾಂಡದ ಸಂತ್ರಸ್ತೆ ಹಾಗು ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಕೂಡ ಜಯ ಸಾಧಿಸುವಲ್ಲಿ ವಿಫಲರಾಗಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯ 403 ಕ್ಷೇತ್ರಗಳ ಪೈಕಿ ಬಿಜೆಪಿ 274 ಕ್ಷೇತ್ರ, ಸಮಾಜವಾದಿ ಪಕ್ಷ 124 ಕ್ಷೇತ್ರ, ಬಿಎಸ್​ಪಿ 1 ಹಾಗೂ ಕಾಂಗ್ರೆಸ್​ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.