ತಿರುವನಂತಪುರಂ (ಕೇರಳ): ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಕೇರಳದ ತಿರುವನಂತಪುರಂ ಸಮೀಪದಲ್ಲಿ ನಡೆದಿದೆ. 55 ವರ್ಷದ ಸಂಧ್ಯಾ ಎಂಬುವವರೇ ಮಹಿಳೆ ಮೃತ ಮಹಿಳೆ. ಬೈಕ್ ಗುದ್ದಿದ ರಭಸಕ್ಕೆ ರಸ್ತೆಯಿಂದ ಬಹು ದೂರ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಕೋವಲಂನಲ್ಲಿ ಈ ಘಟನೆ ಜರುಗಿದೆ. ಈ ಪ್ರವಾಸಿ ತಾಣದಲ್ಲಿ ಯುವಕರ ಗುಂಪು ವೇಗದಲ್ಲಿ ಬೈಕ್‌ಗಳನ್ನು ಓಡಿಸುವುದನ್ನು ಸಾಮಾನ್ಯವಾಗಿದೆ. ಕೆಲ ಯುವಕರು ಬೈಕ್ ರೇಸಿಂಗ್ನಲ್ಲಿ ತೊಡಗಿದ್ದಾಗ ಈ ದುರಂತ ಸಂಭವಿಸಿದೆ. ಮರಣೋತ್ತರ ಪರೀಕ್ಷೆಯ ನಂತರ ಸಂಧ್ಯಾ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೋವಲಂನಲ್ಲಿ ಇಂತಹ ಯುವಕರ ಬೈಕ್ ರೇಸಿಂಗ್ ಕಾರಣದಿಂದಾಗಿ ಈಗಾಗಲೇ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೋವಲಂ ಪ್ರವಾಸಿಗರ ಅತ್ಯಂತ ಮೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪ್ರಪಂಚ ಮತ್ತು ದೇಶದ ಮೂಲೆ ಮೂಲೆಯಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕೋವಲಂ ತಾಣಕ್ಕೆ ಭೇಟಿ ಕೊಡುತ್ತಾರೆ. ಈ ಪ್ರವಾಸಿ ತಾಣದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಚಾರ್ಟರ್ಡ್ ವಿಮಾನಗಳ ಹಾರಾಟ ದೃಶ್ಯ ಸಹ ಸಾಮಾನ್ಯವಾಗಿರುತ್ತದೆ. ಇಲ್ಲಿನ ರಸ್ತೆಗಳಲ್ಲಿ ಯುವಕರರು ಅತಿ ವೇಗದಲ್ಲಿ ಬೈಕ್ ಓಡಿಸುತ್ತಾರೆ. ಇದನ್ನು ತಡೆಯಲು ನಾವು ಪೊಲೀಸರ ಮೇಲೆ ಎಷ್ಟೇ ಒತ್ತಡ ಹೇರಲು ಪ್ರಯತ್ನಿಸಿದರೂ ಅವರು ಕ್ರಮಕೈಗೊಳ್ಳುವುದಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಪೋಲೆಂಡ್‌ನಲ್ಲಿ ಕೇರಳ ಯುವಕನ ಕೊಲೆ: ಪೋಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಯುವಕನೋರ್ವನನ್ನು ಭಾನುವಾರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಮೃತನ ಕುಟುಂಬದವರು ತಿಳಿಸಿದ್ದಾರೆ. ತ್ರಿಶೂರಿನ ಸೂರಜ್ (23) ಎಂಬಾತನೇ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ಕಳೆದ ಐದು ತಿಂಗಳಿಂದ ಪೋಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪೋಲೆಂಡ್‌ನಲ್ಲಿ ಸ್ಥಳೀಯರ ಗುಂಪಿನ ಜಗಳ ನಡೆದಿತ್ತು. ಈ ವೇಳೆ ಚಾಕುವಿನಿಂದ ಇರಿದು ಸೂರಜ್ನನ್ನು ಕೊಲೆ ಮಾಡಲಾಗಿದೆ. ಅಲ್ಲದೇ, ಸೂರಜ್ ಜತೆಗಿದ್ದ ಕೇರಳದ ಇತರ ನಾಲ್ವರು ಯುವಕರೂ ಗಾಯಗೊಂಡಿದ್ದಾರೆ. ಈ ಘಟನೆ ವಾರ್ಸಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಮಾಹಿತಿ ನೀಡಿದೆ ಎಂದು ಸೂರಜ್ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಇತ್ತೀಚೆಗೆ ಕೇರಳದ ಪಾಲಕ್ಕಾಡ್‌ನ ಇಬ್ರಾಹಿಂ ಶರೀಫ್ ಎಂಬ ಯುವಕ ಪೋಲೆಂಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಖಾಸಗಿ ಬ್ಯಾಂಕ್‌ನಲ್ಲಿ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜನವರಿ 24ರಿಂದ ನಾಪತ್ತೆಯಾಗಿದ್ದ ಇಬ್ರಾಹಿಂ ಶರೀಫ್ ನಂತರ ಶವವಾಗಿ ಪತ್ತೆಯಾಗಿದ್ದರು. ಈ ಕೊಲೆಯನ್ನು ಮನೆ ಮಾಲೀಕ ಮಾಡಿದ್ದ ಎನ್ನಲಾಗಿದ್ದು, ಆತನನ್ನು ಬಂಧಿಸುವ ಬಗ್ಗೆ ಪೋಲೆಂಡ್ ಪೊಲೀಸರು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಗುಂಡಿನ ದಾಳಿಗೆ ಒಳಗಾಗಿದ್ದ ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಸಾವು