ETV Bharat / bharat

ಆರೋಗ್ಯ ಇಲಾಖೆ ಎಡವಟ್ಟು: 15 ನಿಮಿಷದಲ್ಲೇ ಎರಡು ವ್ಯಾಕ್ಸಿನ್​ ಪಡೆದ ಮಹಿಳೆ - 15 ನಿಮಿಷದಲ್ಲಿ ಎರಡು ವ್ಯಾಕ್ಸಿನ್​

ಕೇವಲ 15 ನಿಮಿಷಗಳ ಅಂತರದಲ್ಲಿ ಮಹಿಳೆಯೊಬ್ಬರು ಕೋವ್ಯಾಕ್ಸಿನ್​ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.

Bihar woman
Bihar woman
author img

By

Published : Jun 17, 2021, 8:21 PM IST

Updated : Jun 17, 2021, 8:45 PM IST

ಪಾಟ್ನಾ(ಬಿಹಾರ): ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟ ಮುಂದುವರೆದಿದೆ. ಅದಕ್ಕೆ ರಾಮಬಾಣವಾಗಿರುವ ಲಸಿಕೆ ನೀಡುವ ಕಾರ್ಯಕ್ರಮ ದೇಶದಲ್ಲಿ ನಡೆಯುತ್ತಿದ್ದು, ಇದರ ಮಧ್ಯೆ ಆರೋಗ್ಯ ಇಲಾಖೆಯ ಎಡವಟ್ಟುಗಳಿಂದ ಜನರು ಸಮಸ್ಯೆಗೊಳಗಾಗುತ್ತಿರುವುದು ಸಹ ಮೇಲಿಂದ ಮೇಲೆ ಕಂಡು ಬರುತ್ತಿವೆ. ಸದ್ಯ ಬಿಹಾರದ ಪಾಟ್ನಾದಲ್ಲಿ ಅಂತಹದೊಂದು ಘಟನೆ ನಡೆದಿದೆ. ಇದರಿಂದ ನರ್ಸ್​ಗಳ ವಿರುದ್ಧ ಮಹಿಳೆಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

15 ನಿಮಿಷದಲ್ಲೇ ಎರಡು ವ್ಯಾಕ್ಸಿನ್​ ಪಡೆದ ಮಹಿಳೆ

ಬಿಹಾರ ರಾಜಧಾನಿ ಪಾಟ್ನಾದಲ್ಲಿ 63 ವರ್ಷದ ಮಹಿಳೆಯೊಬ್ಬಳಿಗೆ ಕೇವಲ 15 ನಿಮಿಷಗಳ ಅಂತರದಲ್ಲಿ ಎರಡು ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದೆ. ಮೊದಲು ಕೋವಿಶೀಲ್ಡ್​​ ಲಸಿಕೆ ನೀಡಲಾಗಿದ್ದು, ಇದರ ಬೆನ್ನಲ್ಲೇ ಕೋವ್ಯಾಕ್ಸಿನ್​ ಲಸಿಕೆ ಸಹ ನೀಡಲಾಗಿದೆ. ಸಂಗೀತಾ ದೇವಿ ಈ ವ್ಯಾಕ್ಸಿನ್​ ಪಡೆದುಕೊಂಡಿರುವ ಮಹಿಳೆಯಾಗಿದ್ದು, ಪಾಟ್ನಾದ ಬೆಲ್ಡಾರಿಚೆಕ್​ ಪ್ರೌಢಶಾಲೆಯ ಕೋವಿಡ್​ ವ್ಯಾಕ್ಸಿನ್​ ಸೆಂಟರ್​ನಲ್ಲಿ ಈ ಅವಘಡ ಸಂಭವಿಸಿದೆ. ಇದಕ್ಕೆ ಅಲ್ಲಿನ ನರ್ಸ್​ಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿರಿ: ಸೋಷಿಯಲ್​ ಮೀಡಿಯಾದಲ್ಲಿ ವಿವಸ್ತ್ರಳಾಗಿ ಪೋಸ್​ ಕೊಟ್ಟ ಬಾಲಿವುಟ್​ ನಟಿ!

ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂಬುದು ತಿಳಿದು ಬಂದಿದ್ದು, ಸದ್ಯದ ಮಟ್ಟಿಗೆ ಮಹಿಳೆಯ ಆರೋಗ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಆಕೆಯ ಆರೋಗ್ಯದ ಮೇಲೆ ಹಿರಿಯ ವೈದ್ಯರು ನಿಗಾ ಇಟ್ಟಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ವ್ಯಾಕ್ಸಿನ್​ ಪಡೆದುಕೊಂಡಿರುವ ಸಂಗೀತಾ, ಆಧಾರ್​ ಕಾರ್ಡ್​ ಹಾಗೂ ಮೊಬೈಲ್​ ನಂಬರ್​ ನೀಡುತ್ತಿದ್ದಂತೆ ಮೊದಲ ಟೇಬಲ್​​ನಲ್ಲಿ ನನಗೆ ವ್ಯಾಕ್ಸಿನ್​ ನೀಡಲಾಯಿತು. ಇದಾದ ಬಳಿಕ ಅಲ್ಲಿನ ನರ್ಸ್​ಗಳು ಮತ್ತೊಂದು ಟೇಬಲ್​ಗೆ ಕಳುಹಿಸಿ 15 ನಿಮಿಷ ಕುಳಿತುಕೊಳ್ಳುವಂತೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕ್ಯೂನಲ್ಲಿ ನಿಂತುಕೊಂಡು ವ್ಯಾಕ್ಸಿನ್​ ಪಡೆದುಕೊಳ್ಳುವಂತೆ ತಿಳಿಸಿದ್ದರಿಂದ ಎರಡನೇ ವ್ಯಾಕ್ಸಿನ್​ ಸಹ ನೀಡಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಮತ್ತೊಂದು ವ್ಯಾಕ್ಸಿನ್​ ನೀಡ್ತಿದ್ದ ವೇಳೆ ನಾನು ಅವರನ್ನ ಪ್ರಶ್ನೆ ಮಾಡಿದಾಗ ಎರಡನೇ ವ್ಯಾಕ್ಸಿನ್​ ಸಹ ನೀಡಲಾಗುವುದು ಎಂದಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ. ಇದರ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ವ್ಯಾಕ್ಸಿನ್​ ಸೆಂಟರ್​ಗೆ ಬಂದು ಆರೋಗ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಾಹಿತಿ ಪಡೆದುಕೊಂಡಿರುವ ವೈದ್ಯರು ಆಕೆಯ ಮೇಲೆ ನಿಗಾ ಇಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸ್​ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಅಧಿಕಾರಿ ಡಾ. ಸಂಜಯ್​ ಕುಮಾರ್​ ತಿಳಿಸಿದ್ದಾರೆ.

Last Updated : Jun 17, 2021, 8:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.