ETV Bharat / bharat

Student suicide: ನೀಟ್​ ಪರೀಕ್ಷೆಯಲ್ಲಿ 2ನೇ ಬಾರಿಗೆ ಫೇಲ್; ಕೋಟಾದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯಲ್ಲಿ ಫೇಲ್​ ಆಗಿದ್ದರಿಂದ ಮನನೊಂದ ಬಿಹಾರ ಮೂಲದ ವಿದ್ಯಾರ್ಥಿಯೋರ್ವ ಸಾವಿಗೆ ಶರಣಾಗಿದ್ದಾನೆ.

Bihar student commits suicide in Kota after failing NEET
ನೀಟ್​ ಪರೀಕ್ಷೆ 2ನೇ ಬಾರಿಗೆ ಫೇಲ್​.. ಮನನೊಂದು ವಿದ್ಯಾರ್ಥಿ ಸಾವಿಗೆ ಶರಣು
author img

By

Published : Jun 16, 2023, 8:18 PM IST

ಕೋಟಾ (ರಾಜಸ್ಥಾನ): ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್ - ಯುಜಿ)ಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ಬಿಹಾರ ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ರೋಷನ್ ಎಂದು ಗುರುತಿಸಲಾಗಿದೆ. ನೀಟ್​ ಪರೀಕ್ಷೆಯನ್ನು ಎರಡನೇ ಬಾರಿಗೆ ಉತ್ತೀರ್ಣರಾಗಲು ವಿಫಲನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಸಮಸ್ತಿಪುರ ಮೂಲದ ರೋಷನ್ ಕೋಟಾದ ಮಹಾವೀರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆಗೆ ವಾಸವಾಗಿದ್ದ. ಜೂನ್​ 13ರಂದು ನೀಟ್​ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ನವದೆಹಲಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿದ್ದ. ಜೂನ್ 14ರಂದು ಬುಧವಾರ ಬೆಳಗ್ಗೆ ಕೋಟಾಕ್ಕೆ ಮರಳಿದ್ದ. ಆದರೆ, ನಂತರದಲ್ಲಿ ರೋಷನ್ ತನ್ನ ದೆಹಲಿ ಮೂಲದ ಚಿಕ್ಕಪ್ಪನ ಫೋನ್ ಕರೆಗಳಿಗೆ ಉತ್ತರಿಸಿರಲಿಲ್ಲ ಎಂದು ಕೋಟಾದ ವಲಯ 4ರ ಉಪ ಪೊಲೀಸ್ ವರಿಷ್ಠಾಧಿಕಾರಿ ಹರ್ಷರಾಜ್ ಸಿಂಗ್ ಖರೇಡಾ ತಿಳಿಸಿದ್ದಾರೆ.

ಹೀಗಾಗಿ ಚಿಕ್ಕಪ್ಪ ಕೋಟಾದಲ್ಲಿ ವಾಸವಾಗಿರುವ ತನ್ನ ಕಿರಿಯ ಸಹೋದರ ಸುಮನ್ ಎಂಬವರಿಗೆ ಕರೆ ಮಾಡಿ ರೋಷನ್ ಫೋನ್​ ಸ್ವೀಕರಿಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ರೋಷನ್ ವಾಸವಾಗಿದ್ದ ಕೋಣೆಗೆ ಹೋಗುವಂತೆ ನೋಡುವಂತೆ ಸೂಚಿಸಿದ್ದಾರೆ. ಅದರಂತೆ, ಸುಮನ್ ರೋಷನ್​ ಕೋಣೆಗೆ ತೆರಳಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಅವರು ವಿವರಿಸಿದರು.

ರೋಷನ್ ಕಳೆದ ಎರಡು ವರ್ಷಗಳಿಂದ ನೀಟ್-ಯುಜಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಎರಡನೇ ಬಾರಿಗೂ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಶಂಕಿಸಲಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: IIT Aspirant: ಐಐಟಿ ಕೋಚಿಂಗ್ ಪಡೆಯುತ್ತಿದ್ದ ಯುವಕ ಆತ್ಮಹತ್ಯೆ: ಭೇಟಿಗೆ ಬಂದಿದ್ದ ಪೋಷಕರಿಗೆ ಆಘಾತ

ಮಹಾರಾಷ್ಟ್ರದ ಐಐಟಿ ಆಕಾಂಕ್ಷಿ ಆತ್ಮಹತ್ಯೆ: ಇದೇ ಜೂನ್​ 12ರಂದು ಮಹಾರಾಷ್ಟ್ರದ ಐಐಟಿ ಆಕಾಂಕ್ಷಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕೂಡ ರಾಜಸ್ಥಾನದ ಕೋಟಾದಲ್ಲಿ ನಡೆದಿತ್ತು. ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ಭಾರ್ಗವ್ ಕೇಶವ್ ಎಂಬ ಯುವಕ ಕೋಟಾದಲ್ಲಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಇಲ್ಲಿನ ಕೋಚಿಂಗ್ ಸೆಂಟರ್‌ವೊಂದಕ್ಕೆ ದಾಖಲಾಗಿದ್ದ ಭಾರ್ಗವ್ ಕಳೆದ 9 ತಿಂಗಳಿಂದ ಜವಾಹರ್ ನಗರದ ರಾಜೀವ್ ಗಾಂಧಿ ನಗರದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಆದರೆ, ಏಕಾಏಕಿ ಜೂನ್​ 12ರಂದು ಸಾವಿಗೆ ಶರಣವಾಗಿದ್ದ.

ಆಘಾತಕಾರಿ ವಿಷಯ ಎಂದರೆ, ಭಾರ್ಗವ್ ಪೋಷಕರು ಆತನನ್ನು ಭೇಟಿ ಮಾಡಲೆಂದು ಕೋಟಾಕ್ಕೆ ಬಂದಿದ್ದರು. ಅಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಹಾಸ್ಟೆಲ್ ತಲುಪಿದ್ದ ಪೋಷಕರು ಭಾರ್ಗವ್ ಜೊತೆ ಮಾತನಾಡಿ, ತಿಂಡಿ ತಿನ್ನಲು ಹೋಗಿದ್ದರು. ಹಿಂತಿರುಗಿ ಬರುಷ್ಟರಲ್ಲೇ ಭಾರ್ಗವ್ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರದಲ್ಲಿ ಮರಣೋತ್ತರ ಪರೀಕ್ಷೆ ಪೊಲೀಸರು ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು.

ಇದನ್ನೂ ಓದಿ: ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮದ್ರಾಸ್​ ಐಐಟಿಯ ಪಿಹೆಚ್‌ಡಿ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.