ಭಾಗಲ್ಪುರ(ಬಿಹಾರ): ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬರನ್ನು ಹರಿತವಾದ ಆಯುಧದಿಂದ ಕೈ, ಕಾಲು, ಸ್ತನಗಳನ್ನು ಕತ್ತರಿಸಿ ಕೊಲೆ ಮಾಡಲಾಗಿದೆ. ಕಳೆದ ಶನಿವಾರ ಸಂಜೆ ಮಹಿಳೆ ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮಹಿಳೆ ಮೇಲೆ ಕಣ್ಣಿಟ್ಟಿದ್ದ ಹಂತಕ: ಮಾಹಿತಿ ಪ್ರಕಾರ ಮೃತ ನೀಲಂದೇವಿ (42) ಎಂಬಾ ಮಹಿಳೆ ಮೇಲೆ ಕೊಲೆ ಆರೋಪಿ ಶಕೀಲ್ ಕಣ್ಣು ಬಿದ್ದಿತ್ತು. ಇದೇ ವಿಚಾರವಾಗಿ ತಿಂಗಳ ಹಿಂದೆ ಇಬ್ಬರ ಮಧ್ಯೆ ಜಗಳವಾಗಿತ್ತು. ಡಿಸೆಂಬರ್ 3ರಂದು, ಅಂದ್ರೆ ಕಳೆದ ಶನಿವಾರ ಸಂಜೆ 6.30 ರ ಸುಮಾರಿಗೆ ಪಿರಪೈಂಟಿ ಮಾರುಕಟ್ಟೆಯಿಂದ ನೀಲಂದೇವಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಆರೋಪಿ ಶಕೀಲ್ ಮಹಿಳೆಯ ಹಿಂಬದಿಯಿಂದ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಕೈ, ಕಾಲು, ಸ್ತನಗಳನ್ನು ಕತ್ತರಿಸಿದ್ದಾನೆ. ದಾಳಿಯಲ್ಲಿ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಚಿಕಿತ್ಸೆ ವೇಳೆ ಮಹಿಳೆ ಸಾವು: ಹಲ್ಲೆಯಿಂದ ಗಾಯಗೊಂಡ ಮಹಿಳೆಯನ್ನು ಮೊದಲು ಪಿರಪೈಂಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಗಂಭೀರ ಸ್ಥಿತಿಯನ್ನು ಕಂಡು ಉತ್ತಮ ಚಿಕಿತ್ಸೆಗಾಗಿ ಪಂಡಿತ್ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಶಕೀಲ್ ನನ್ನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದನು. ಈ ವಿಷಯದ ಬಗ್ಗೆ ತಿಂಗಳ ಹಿಂದೆ ನಮ್ಮ ನಡುವೆ ಜಗಳವಾಗಿತ್ತು. ಈ ವಿವಾದವು ಇಷ್ಟು ದೊಡ್ಡದಾಗುತ್ತದೆ ಮತ್ತು ಅವನು ನನ್ನ ಹೆಂಡತಿಯನ್ನು ಕೊಲ್ಲುತ್ತಾನೆ ಎಂದು ನನಗೆ ತಿಳಿದಿರಲಿಲ್ಲ. ಆರೋಪಿಯುನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಮೃತಳ ಪತಿ ಆಗ್ರಹಿಸಿದ್ದಾರೆ.
ಇಬ್ಬರ ನಡುವೆ ನಿಕಟ ಸಂಬಂಧ: ಮೃತು ಮಹಿಳೆ ತಮ್ಮ ಮಗಳ ಮದುವೆಗಾಗಿ ಆರೋಪಿಯಿಂದ ಸ್ವಲ್ಪ ಹಣವನ್ನು ಸಾಲ ಮಾಡಿಕೊಂಡಿದ್ದರು. ಆರೋಪಿ ಹಣ ವಾಪಸ್ ನೀಡುವಂತೆ ಒತ್ತಡ ಹೇರುತ್ತಿದ್ದರು. ಆದ್ರೆ ಆ ಹಣವನ್ನು ಹಿಂದಿರುಗಿಸಲು ಮಹಿಳೆಗೆ ಸಾಧ್ಯವಾಗಿರಲಿಲ್ಲ. ಒಂದು ತಿಂಗಳ ಹಿಂದೆ ಈ ಬಗ್ಗೆ ವಾಗ್ವಾದ ನಡೆದಿತ್ತು. ಜಗಳ ನಡೆದು ತಿಂಗಳ ಬಳಿಕ ಆರೋಪಿ ಶಕೀಲ್ ಮಾರುಕಟ್ಟೆ ಪ್ರದೇಶಲ್ಲಿ ಎಲ್ಲರೆದುರೇ ನೀಲಂದೇವಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಇದಕ್ಕೆ ಆತನ ಸಹೋದರ ಸಹ ಸಾಥ್ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಕುಟುಂಬ ಸದಸ್ಯರ ದೂರಿನ ಮೇರಿಗೆ ಆರೋಪಿ ಸಹೋದರರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಭಾಗಲ್ಪುರ ಎಸ್ಎಸ್ಪಿ ಬಾಬು ರಾಮ್ ಮಾಹಿತಿ ನೀಡಿದ್ದಾರೆ.
ಓದಿ: ಬೆಂಗಳೂರು: ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ, ಪರಿಚಯಸ್ಥರಿಂದಲೇ ಕೃತ್ಯ ಶಂಕೆ