ಬಕ್ಸಾರ್: ಬಕ್ಸಾರ್ ಜಿಲ್ಲೆಯ ಗಂಗಾ ನದಿಯಲ್ಲಿ ಹಲವಾರು ಶವಗಳು ತೇಲುತ್ತಿ ಬಂದ ನಂತರ, ಬಿಹಾರ ಪೊಲೀಸರು ನದಿಯ ದಡದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ನಾವು ಗಂಗಾ ನದಿಯಲ್ಲಿ ಗಸ್ತು ತಿರುಗುತ್ತಿದ್ದೇವೆ. ಯಾವುದೇ ಶವಗಳು ಕಂಡುಬಂದರೂ ಅವುಗಳನ್ನು ಪೊಲೀಸರೇ ಅಂತ್ಯಸಂಸ್ಕಾರ ಮಾಡುತ್ತಾರೆ ಎಂದು ಬಕ್ಸಾರ್‌ನ ಚೌಸಾ ಪ್ರದೇಶದ ಸಹಾಯಕ ಉಪ-ಇನ್ಸ್‌ಪೆಕ್ಟರ್ ಬಿ.ಎನ್.ಉಪಾಧ್ಯಾಯ ತಿಳಿಸಿದರು.
ನಾವು ಯಾವುದೇ ಮೃತದೇಹಗಳನ್ನು ನೋಡಿದರೆ, ಅವುಗಳ ಕೊನೆಯ ವಿಧಿವಿಧಾನಗಳನ್ನು ಮಾಡುತ್ತೇವೆ. ಇಂದು ಯಾವುದೇ ಮೃತ ದೇಹಗಳನ್ನು ಪತ್ತೆ ಮಾಡಿಲ್ಲ. ಯಾರೂ ನೀರಿನಲ್ಲಿ ಶವಗಳನ್ನು ಹಾಕದಂತೆ ನೋಡಿಕೊಳ್ಳಲು ಗಂಗಾ ತೀರದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಹೇಳಿದರು.
ಬಾರಾದಲ್ಲಿ ನದಿಯ ಬಳಿ ಗಸ್ತು ತಿರುಗುತ್ತಿರುವ ತಂಡದ ಭಾಗವಾಗಿರುವ ಲೆಖ್ಪಾಲ್ ಜೀತ್ ಲಾಲ್ ಚೌಧರಿ, ಅವರು ಯಾವುದೇ ದೇಹವನ್ನು ಕಂಡರೆ ಸ್ವತಃ ತಾವೇ ಶವಸಂಸ್ಕಾರ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಗಂಗಾದಲ್ಲಿ ತೇಲುತ್ತಿರುವ ಮೃತ ದೇಹಗಳು: ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ
ಬಿಹಾರದ ಬಕ್ಸಾರ್‌ನ ಗಂಗಾ ಘಾಟ್‌ನ ಅರ್ಚಕ ಧನಂಜಯ್ ಕುಮಾರ್ ಪಾಂಡೆ, ಕೊರೊನಾ ರೋಗಿಗಳ ಅಂತ್ಯಕ್ರಿಯೆಗೆ ಅಧಿಕಾರಿಗಳು ಸೌಲಭ್ಯಗಳನ್ನು ಒದಗಿಸಿದ್ದಾರೆ. ಸ್ಥಳೀಯರು ಕೆಲವೊಮ್ಮೆ ಹಾವಿನ ಕಡಿತದಿಂದ ಅಥವಾ ಟಿಬಿಯಂತಹ ಕಾಯಿಲೆಯಿಂದ ಸಾಯುವವರ ದೇಹಗಳನ್ನು ನದಿಯಲ್ಲಿ ಹಾಕುತ್ತಾರೆ. ಆದರೆ ಕೋವಿಡ್ ಸಂತ್ರಸ್ತರ ದೇಹವಲ್ಲ ಎಂದು ಹೇಳಿದರು.
ಈ ವಾರದ ಆರಂಭದಲ್ಲಿ 71 ಶವಗಳನ್ನು ಬಕ್ಸಾರ್ ಜಿಲ್ಲೆಯ ಗಂಗೆಯಿಂದ ಹೊರತೆಗೆಯಲಾಗಿದೆ ಮತ್ತು ಅವುಗಳಿಗೆ ಸಂಸ್ಕಾರವನ್ನು ನೆರವೇರಿಸಲಾಗಿದೆ. ಯುಪಿ ಮತ್ತು ಬಿಹಾರದ ಗಡಿಯಲ್ಲಿರುವ ರಾಣಿಘಾಟ್ನ ಗಂಗಾ ನದಿಲ್ಲಿ ನಿಗಾವಹಿಸಲಾಗಿದೆ ಎಂದು ಬಿಹಾರ ಸಚಿವ ಸಂಜಯ್ ಕುಮಾರ್ ಝಾ ಹೇಳಿದ್ದಾರೆ.
ಇದನ್ನೂ ಓದಿ: ಮೃತಪಟ್ಟವರೆಲ್ಲರೂ ಗೌರವಯುತ ಅಂತ್ಯಸಂಸ್ಕಾರಕ್ಕೆ ಅರ್ಹರು: ಯುಪಿ ಸಿಎಂ