ಪಾಟ್ನಾ (ಬಿಹಾರ): ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 70ಕ್ಕೂ ಅಧಿಕ ಜನ ಮೃತಪಟ್ಟಿರುವ ದುರಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ರಾಜಧಾನಿ ಪಾಟ್ನಾದಲ್ಲಿ ಭತ್ತದ ಗೋಡೌನ್‌ನಲ್ಲಿ ಸುಮಾರು 40 ಲಕ್ಷ ಮೌಲ್ಯದ ವಿದೇಶಿ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ. ಆದರೆ, ಇದರ ನಡುವೆಯೂ ಮದ್ಯದ ಹಾವಳಿ ಹೆಚ್ಚಾಗಿದ್ದು, ಮದ್ಯ ನಿಷೇಧದ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಇದೀಗ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಭತ್ತದ ಗೋದಾಮಿನ ಸ್ವಲ್ಪ ದೂರದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪ್ರೆಸ್ ಎಂದು ಬರೆದಿದ್ದ ಕಾರು ಪತ್ತೆಯಾಗಿದೆ. ಹೀಗಾಗಿ ಪೊಲೀಸರು ಕಾರನ್ನು ಪರಿಶೀಲಿಸಿದ್ದು, ಆಗ ಕಾರಿನಲ್ಲಿ 17 ಕಾರ್ಟನ್ ಇಂಗ್ಲಿಷ್ ಬ್ರಾಂಡ್ ಮದ್ಯ ಪತ್ತೆಯಾಗಿದೆ. ಇದರಿಂದ ಪೊಲೀಸರು ಭತ್ತದ ಗೋದಾಮಿನಲ್ಲೂ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಗೋಡೌನ್‌ನಲ್ಲಿ ಬಚ್ಚಿಟ್ಟಿದ್ದ ಸುಮಾರು 900 ಮದ್ಯದ ಕಾರ್ಟನ್ಗಳು ಪತ್ತೆಯಾಗಿವೆ. ನಂತರ ಗೋಡೌನ್ ಮಾಲೀಕ ರಾಜ್ ಕುಮಾರ್ ಗೆ ಕರೆ ಮಾಡಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಭತ್ತ ಸಂಗ್ರಹಿಸಲು ಗುತ್ತಿಗೆ ಆಧಾರದ ಮೇಲೆ ಗೋಡೌನ್ನನ್ನು ಪುಷ್ಕರ್ ಎಂಬುವವರು ಪಡೆದಿದ್ದರು. ಹೀಗಾಗಿ ಗೋಡೌನ್‌ನಲ್ಲಿ ಏನಾಗುತ್ತಿತ್ತು ಎಂದು ನನಗೆ ಗೊತ್ತಿಲ್ಲ ಎಂದು ಮಾಲೀಕ ತಿಳಿಸಿದ್ದು, ಸದ್ಯ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಿಹಾರ ಮದ್ಯ ದುರಂತ: ಮೃತರ ಸಂಖ್ಯೆ 71ಕ್ಕೆ ಏರಿಕೆ, ಮೊರ್ಬಿ ಸೇತುವೆ ಘಟನೆ ಉಲ್ಲೇಖಿಸಿದ ನಿತೀಶ್