ETV Bharat / bharat

ಹೆಂಡತಿಯೊಂದಿಗೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದುವೆಯಾದ! - ವಿಚಿತ್ರ ಮದುವೆ

ಬಿಹಾರದ ಖಗರಿಯಾ ಜಿಲ್ಲೆಯ ಚೌಥಮ್ ಬ್ಲಾಕ್‌ನ ಹಾರ್ಡಿಯಾ ಎಂಬ ಗ್ರಾಮದಲ್ಲಿ ವಿಚಿತ್ರ ಮದುವೆ ನಡೆದಿದೆ.

Strange marriage
ಹೆಂಡತಿಯೊಂದಿಗೆ ಓಡಿಹೋದ ವ್ಯಕ್ತಿಯ ಹೆಂಡತಿಯನ್ನೇ ಮದುವೆಯಾದ ಭೂಪ..!
author img

By

Published : Feb 27, 2023, 9:41 PM IST

ಖಗರಿಯಾ (ಬಿಹಾರ): ಪ್ರೀತಿ ಹಾಗೂ ಸೇಡಿನ ವಿಚಿತ್ರ ಘಟನೆ ಬಿಹಾರದಲ್ಲಿ ಜರುಗಿದೆ. ಮಾನಸಿಕ ಖಿನ್ನತೆಗೊಳಗಾದ ಪತಿಯೊಬ್ಬ ಇಲ್ಲಿನ ಖಗರಿಯಾ ಎಂಬಲ್ಲಿ ತನ್ನ ಹೆಂಡತಿಯ ಪ್ರೇಮಿಯ ಪತ್ನಿಯನ್ನೇ ವಿವಾಹವಾಗಿದ್ದಾನೆ. ನಾಲ್ಕು ಮಕ್ಕಳನ್ನು ಹೊಂದಿರುವ ವ್ಯಕ್ತಿಯನ್ನು ಹೆಂಡತಿ ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಆತ ಈ ರೀತಿಯ ವಿಲಕ್ಷಣ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಹುಟ್ಟಿಸಿದೆ.

ಇಬ್ಬರೂ ಮಹಿಳೆಯರ ಹೆಸರೂ ಒಂದೇ: ಖಗರಿಯಾ ಜಿಲ್ಲೆಯ ಪಟ್ಟಣದಲ್ಲಿ ನಡೆದ ಈ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದು ವಿಚಿತ್ರವೆಂದರೆ, ವಿವಾಹವಾದ ಇಬ್ಬರೂ ಮಹಿಳೆಯರ ಹೆಸರು ಕೂಡಾ ರೂಬಿ ದೇವಿ. ಇಡೀ ಕುಟುಂಬದ ಒಪ್ಪಿಗೆಯೊಂದಿಗೆ ಈ ವಿವಾಹ ನೆರವೇರಿಸಲಾಗಿದೆ.

ವಿವರ: ಜಿಲ್ಲೆಯ ಚೌಥಮ್ ಬ್ಲಾಕ್​ನ ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ 2009ರಲ್ಲಿ ರೂಬಿ ದೇವಿ ಅವರನ್ನು ವಿವಾಹವಾದರು. ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ, ಇತ್ತೀಚೆಗೆ ರೂಬಿ, ಮುಖೇಶ್ ಜೊತೆಗೆ ಪ್ರೇಮ ಸಂಬಂಧ ಬೆಳೆಸಿದ್ದಾರೆ. ಈತ ಇದೇ ಜಿಲ್ಲೆಯ ಪಾಸ್ರಾಹಾ ಗ್ರಾಮದ ನಿವಾಸಿ. ಮದುವೆಗೂ ಮುನ್ನ ರೂಬಿ ಪಾಸ್ರಾಹಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆತನ ಜೊತೆಗೆ ದೀರ್ಘಕಾಲದವರೆಗೆ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಸೆಂಟ್ರಲ್​ ಜೈಲಿನಲ್ಲೇ ಗ್ಯಾಂಗ್ ವಾರ್, ಇಬ್ಬರು ಗ್ಯಾಂಗ್​ಸ್ಟರ್​ಗಳ ಕೊಲೆ

ಹಾರ್ಡಿಯಾ ಗ್ರಾಮದ ನಿವಾಸಿ ನೀರಜ್ ಪತ್ನಿ ಮುಖೇಶ್ ಜೊತೆ ಓಡಿಹೋಗಿರುವ ವಿಷಯ ತಿಳಿದು ತಕ್ಷಣವೇ, ನೀರಜ್ ಮುಖೇಶ್ ವಿರುದ್ಧ ಪಸ್ರಾಹಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾನೆ. ಈ ಸಮಸ್ಯೆ ಪರಿಹರಿಸಲು ಗ್ರಾಮದಲ್ಲಿ ಪಂಚಾಯತಿ ನಡೆಸಲಾಗಿದೆ. ಆದರೆ ಮುಖೇಶ್ ಒಪ್ಪಲಿಲ್ಲ.

ಇದನ್ನೂ ಓದಿ: ಅಪಾರ್ಟ್​ಮೆಂಟ್​ನ ಫ್ಲಾಟ್​ನಲ್ಲಿ ಚಿನ್ನದ ವ್ಯಾಪಾರಿ ಮತ್ತವರ ಪತ್ನಿ, ಮಗಳ ಕೊಳೆತ ಶವ ಪತ್ತೆ

ವಿಚಿತ್ರ ಮದುವೆ: ಓಡಿಹೋಗಿರುವ ಜೋಡಿಯ ಮೇಲೆ ಸೇಡು ತೀರಿಸಿಕೊಳ್ಳಲು ನೀರಜ್ ಪ್ಲಾನ್ ಮಾಡಿದ್ದಾನೆ. ಮುಕೇಶ್​ ಹೆಂಡತಿಯೊಂದಿಗೆ ಅಂದ್ರೆ, ಮಾನ್ಸಿ ಬ್ಲಾಕ್​ನ ಆಮ್ನಿ ಗ್ರಾಮದ ರೂಬಿ ಎಂಬ ಮಹಿಳೆಯನ್ನು ನೀರಜ್ ಫೆಬ್ರವರಿ 18ರಂದು ಸ್ಥಳೀಯ ದೇವಾಲಯವೊಂದರಲ್ಲಿ ವಿವಾಹವಾಗಿದ್ದಾನೆ. ಈ ವಿಚಿತ್ರ ಮದುವೆ ಎಲ್ಲರ ಹುಬ್ಬೇರಿಸುವಂತೆ ಮಾಡಿತು.

ಇದನ್ನೂ ಓದಿ: ಎರಡು ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.