ETV Bharat / bharat

ನೌಕರಿಗೆಂದು ಓಮನ್​ಗೆ ​ಹೋದ ಗರ್ಭಿಣಿಗೆ ಟಾರ್ಚರ್.. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕುಟುಂಬ - ಗರ್ಭಿಣಿ ಮಹಿಳೆ ಲಕ್ಷ್ಮಿ ಗೆ ಮಸ್ಕತ್​ನಲ್ಲಿ ಟಾರ್ಚರ್

ಇಲ್ಲಿ ನನ್ನನ್ನು ಬಂಧಿಸಲಾಗಿದೆ. ನಕಲಿ ವೀಸಾದ ಮೂಲಕ ಓಮನ್‌ಗೆ ಕಳುಹಿಸಲಾದ ಇನ್ನೂ ಅನೇಕ ಭಾರತೀಯ ಹುಡುಗಿಯರನ್ನು ಸಹ ಇಲ್ಲಿ ಇರಿಸಲಾಗಿದೆ. ಅನೈತಿಕ ಕೆಲಸಗಳನ್ನು ಮಾಡುವಂತೆ ಅವರಿಗೆ ಬಲವಂತ ಮಾಡಲಾಗುತ್ತಿದೆ ಹಾಗೂ ಅವರನ್ನು ಹಿಂಸಿಸಲಾಗುತ್ತದೆ. ನಾನು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನಾನು ಭಾರತಕ್ಕೆ ಹಿಂತಿರುಗಲು ಬಯಸುತ್ತೇನೆ ಎಂದು ಅವರು ಮೆಸೇಜ್​ನಲ್ಲಿ ತಿಳಿಸಿದ್ದಾರೆ.

http://10.10.50.75//bihar/05-July-2022/bh-jam-04-jamui-ki-lakshmi-oman-me-bandhak-bh10008_05072022204534_0507f_1657034134_511.jpg

author img

By

Published : Jul 6, 2022, 3:56 PM IST

ಜಮುಯಿ (ಬಿಹಾರ): ಬಿಹಾರ ರಾಜ್ಯದ ಜಮುಯಿ ಪಟ್ಟಣದ ಗರ್ಭಿಣಿ ಲಕ್ಷ್ಮಿ ಎಂಬಾಕೆಗೆ ನೌಕರಿಯ ಆಸೆ ತೋರಿಸಿ, ಮಾನವ ಕಳ್ಳಸಾಗಣೆದಾರರು ಅವರನ್ನು ಓಮನ್​ನ ಮಸ್ಕತ್​ನಲ್ಲಿ ಬಂಧಿಸಿಟ್ಟಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತರುವಂತೆ ಅವರ ಕುಟುಂಬದವರು ಸರ್ಕಾರಕ್ಕೆ ಈಗ ಮೊರೆ ಇಟ್ಟಿದ್ದಾರೆ.

ಕಳ್ಳಸಾಗಣೆದಾರರಾದ ವಸೀಮ್ ಮತ್ತು ಸೈಯದ್ ಎಂಬುವರ ಕೃತ್ಯ : ಮಹಿಳೆಯ ಕುಟುಂಬದವರು ಹೇಳುವ ಪ್ರಕಾರ 30 ವರ್ಷದವಳಾದ ಲಕ್ಷ್ಮಿಯನ್ನು ಮಾನವ ಕಳ್ಳಸಾಗಣೆದಾರರಾದ ವಸೀಮ್ ಮತ್ತು ಸನ್ನೋ ಸೈಯದ್ ಎಂಬುವರು ಓಮನ್​ನಲ್ಲಿ ಬಂಧನದಲ್ಲಿಟ್ಟುಕೊಂಡಿದ್ದಾರೆ. ಅವರ ಪಾಸ್​ಪೋರ್ಟ್​ ಮತ್ತು ಮೊಬೈಲ್​ಗಳನ್ನು ಕಸಿದುಕೊಂಡಿದ್ದು, ಓಮನ್​ನಲ್ಲಿ ಅವರಿಗೆ ವಿಪರೀತ ಹಿಂಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಹಾಳಾಗಿದ್ದರೂ ಔಷಧ ನೀಡುತ್ತಿಲ್ಲ ಎಂದು ಲಕ್ಷ್ಮಿ ಕುಟುಂಬದವರು ತಿಳಿಸಿದ್ದಾರೆ.

ಬಡತನದಲ್ಲಿರಯವ ಕುಟುಂಬ: ಓಮನ್​ನಲ್ಲಿ ಬಂಧಿಯಾಗಿರುವ ಲಕ್ಷ್ಮಿ ಇವರ ಗಂಡನ ಮನೆ ಲಕ್ಷ್ಮೀಪುರ ಠಾಣಾ ಕ್ಷೇತ್ರದ ಸಾಕಲ್ ಗ್ರಾಮ ಹಾಗೂ ತವರು ಮನೆ ಝಾಝಾ ಠಾಣಾ ಕ್ಷೇತ್ರದ ಸುಂದರಿಟಾಂಡ್ ಗ್ರಾಮದಲ್ಲಿದೆ. ಲಕ್ಷ್ಮಿ ಸಮಸ್ತಿಪುರದ ಬಂಧನ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅನಿರೀಕ್ಷಿತವಾಗಿ ಕೆಲಸ ಕಳೆದುಕೊಂಡರು.

ಮಹಿಳೆ ಪತಿ ಹಲವಾರು ವರ್ಷಗಳಿಂದ ಕಾಯಿಲೆ ಪೀಡಿತ ಕೂಡ. ಕೆಲಸ ಮಾಡಲಾಗದ ಗಂಡ ಹಾಗೂ ಮೂರು ಮಕ್ಕಳನ್ನು ಸಾಕುವ ಸಂಪೂರ್ಣ ಜವಾಬ್ದಾರಿ ಲಕ್ಷ್ಮಿ ಮೇಲೆಯೇ ಇದೆ. ಇದೇ ಸಂದರ್ಭದ ಲಾಭ ಪಡೆದ ಕೆಲ ದುಷ್ಕರ್ಮಿಗಳು ಒಳ್ಳೆಯ ಕೆಲಸ ಕೊಡಿಸುವುದಾಗಿ ಮಹಿಳೆಯನ್ನ ದೆಹಲಿಗೆ ಕರೆಸಿಕೊಂಡಿದ್ದಾರೆ. ನಂತರ ಅಲ್ಲಿಂದ ಓಮನ್​ಗೆ ಕಳುಹಿಸಿ ಅಲ್ಲಿ ಬಂಧಿಸಿಟ್ಟಿದ್ದಾರೆ. ಈ ಕುರಿತಂತೆ ಲಕ್ಷ್ಮಿಯ ಪತಿ ದೆಹಲಿಯ ಪಹಾಡಗಂಜ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಬಂಧಿಕರಿಗೆ ಸಂದೇಶ ಕಳುಹಿಸಿದ್ದ ಲಕ್ಷ್ಮಿ: ಐದು ದಿನಗಳ ಹಿಂದೆ ಲಕ್ಷ್ಮಿ ಕುಟುಂಬ ಸದಸ್ಯರಿಗೆ ವಾಟ್ಸ್​ಆ್ಯಪ್​ ಮೂಲಕ ಒಂದು ಮೆಸೇಜ್ ಕಳುಹಿಸಿದ್ದಾರೆ. ನಾನು ಪ್ರಸ್ತುತ ಓಮನ್‌ನ ಮಸ್ಕತ್‌ನಲ್ಲಿ ಇದ್ದೇನೆ ಎಂದು ಮೆಸೇಜ್ ಮೂಲಕ ಕುಟುಂಬದವರಿಗೆ ಮಾಹಿತಿ ರವಾನಿಸಿದ್ದಾರೆ. ಇಲ್ಲಿ ನನ್ನನ್ನು ಬಂಧಿಸಲಾಗಿದೆ. ನಕಲಿ ವೀಸಾದ ಮೂಲಕ ಓಮನ್‌ಗೆ ಕಳುಹಿಸಲಾದ ಇನ್ನೂ ಅನೇಕ ಭಾರತೀಯ ಹುಡುಗಿಯರನ್ನು ಸಹ ಇಲ್ಲಿ ಇರಿಸಲಾಗಿದೆ. ಅನೈತಿಕ ಕೆಲಸಗಳನ್ನು ಮಾಡುವಂತೆ ಅವರಿಗೆ ಬಲವಂತ ಮಾಡಲಾಗುತ್ತಿದೆ ಹಾಗೂ ಅವರನ್ನು ಹಿಂಸಿಸಲಾಗುತ್ತದೆ. ನಾನು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನಾನು ಭಾರತಕ್ಕೆ ಹಿಂತಿರುಗಲು ಬಯಸುತ್ತೇನೆ ಎಂದು ಆಕೆ ಮೆಸೇಜ್​ನಲ್ಲಿ ತಿಳಿಸಿದ್ದಾರೆ.

'ಅಮ್ಮ ಯಾವಾಗ ಬರುತ್ತಾರೆ?': ಸದ್ಯ ಲಕ್ಷ್ಮಿ ಓಮನ್‌ನಲ್ಲಿ ಸಿಕ್ಕಿಬಿದ್ದಿರುವ ಬಗ್ಗೆ ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದು, ಸರಕಾರ ನೆರವಿಗೆ ಮುಂದಾಗುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ಲಕ್ಷ್ಮಿಯ ಮೂವರು ಮುಗ್ಧ ಮಕ್ಕಳು ತಮ್ಮ ತಾಯಿಯ ಬಗ್ಗೆ ಕಳವಳಗೊಂಡಿವೆ. ಅಮ್ಮ ಎಲ್ಲಿ? ಅಮ್ಮ ಯಾವಾಗ ಮನೆಗೆ ಬರುತ್ತಾರೆ? ಎನ್ನುತ್ತಿವೆ. ಈ ಮುಗ್ಧ ಮಕ್ಕಳ ಪ್ರಶ್ನೆಗಳಿಗೆ ಕುಟುಂಬದ ಬಳಿ ಉತ್ತರವಿಲ್ಲ. ಈಗ ಎಲ್ಲರೂ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನು ಓದಿ: ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾದ ಐಎಎಸ್ ಅಧಿಕಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.