ETV Bharat / bharat

ಅಮಾನತುಗೊಂಡಿರುವ ಐಪಿಎಸ್​ ಅಧಿಕಾರಿಯ ನಿವಾಸಗಳ ಮೇಲೆ ವಿಚಕ್ಷಣ ದಳದ ದಾಳಿ - ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್

ಈ ವರ್ಷದ ನವೆಂಬರ್‌ನಲ್ಲಿ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಯು) ಇಂಟರ್‌ಪೋಲ್ ಅನ್ನು ಸಂಪರ್ಕಿಸಿ ತಲೆಮರೆಸಿಕೊಂಡಿರುವ ಐಪಿಎಸ್ ಅಧಿಕಾರಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿತ್ತು. ತನ್ನ ಮೇಲಿರುವ ಮದ್ಯ ಹಗರಣದ ಕೇಸ್ ಮುಚ್ಚಲು ಇವರು ಮತ್ತೊಬ್ಬ ವಂಚಕನ ಸಹಾಯ ಪಡೆದಿದ್ದರು ಎಂಬ ಆರೋಪಗಳಿವೆ.

ಬಿಹಾರ್: ಅಮಾನತುಗೊಂಡಿರುವ ಐಪಿಎಸ್​ ಅಧಿಕಾರಿಯ ಸ್ಥಳಗಳ ಮೇಲೆ ವಿಚಕ್ಷಣ ದಳ ಅಧಿಕಾರಿಗಳ ದಾಳಿ
Bihar Intelligence Squad officials raid on suspended IPS officer's premises
author img

By

Published : Dec 7, 2022, 4:35 PM IST

ಪಾಟ್ನಾ: ಸೇವೆಯಿಂದ ಅಮಾನತುಗೊಂಡ ಐಎಎಸ್ ಅಧಿಕಾರಿ ಆದಿತ್ಯ ಕುಮಾರ್ ಅವರಿಗೆ ಸೇರಿದ, ಬಿಹಾರ್ ಮತ್ತು ಉತ್ತರ ಪ್ರದೇಶದಲ್ಲಿನ ಮೂರು ಸ್ಥಳಗಳ ಮೇಲೆ ವಿಶೇಷ ವಿಚಕ್ಷಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡುತ್ತಿದ್ದಾರೆ. ಸೇವೆಯಲ್ಲಿರುವಾಗ ಆದಿತ್ಯ ಕುಮಾರ್ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪಗಳ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿವೆ.

ವಿಶೇಷ ನ್ಯಾಯಾಧೀಶ ವಿಜಿಲೆನ್ಸ್ ನ್ಯಾಯಾಲಯ (ಪಾಟ್ನಾ) ಹೊರಡಿಸಿದ ಸರ್ಚ್ ವಾರಂಟ್​​​​​ನ ಮೇಲೆ ಪಾಟ್ನಾ, ಗಾಜಿಯಾಬಾದ್ ಮತ್ತು ಮೀರತ್ (ಉತ್ತರ ಪ್ರದೇಶ) ನಲ್ಲಿರುವ ಐಪಿಎಸ್ ಅಧಿಕಾರಿಯ ವಸತಿ ಆವರಣಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ವಿಶೇಷ ವಿಷಕ್ಷಣಾ ತಂಡದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ನಯ್ಯರ್ ಹಸ್ನೈನ್ ಖಾನ್ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ವರ್ಷದ ನವೆಂಬರ್‌ನಲ್ಲಿ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಯು) ಇಂಟರ್‌ಪೋಲ್​ ಸಂಪರ್ಕಿಸಿ ತಲೆಮರೆಸಿಕೊಂಡಿರುವ ಐಪಿಎಸ್ ಅಧಿಕಾರಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿತ್ತು. ತನ್ನ ಮೇಲಿರುವ ಮದ್ಯ ಹಗರಣದ ಕೇಸ್ ಮುಚ್ಚಲು ಇವರು ಮತ್ತೊಬ್ಬ ವಂಚಕನ ಸಹಾಯ ಪಡೆದಿದ್ದರು ಎಂಬ ಆರೋಪಗಳಿವೆ.

2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್ ಸುಮಾರು ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಐಪಿಎಸ್ ಅಧಿಕಾರಿ ಬಿಹಾರದ ಗಯಾ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ)ರಾಗಿ ನಿಯೋಜನೆಗೊಂಡಿದ್ದಾಗ ಮದ್ಯ ಮಾಫಿಯಾಗಳ ಜೊತೆ ಸಂಬಂಧ ಹೊಂದಿದ್ದರು ಎಂಬ ಆರೋಪಗಳ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ವಂಚಕ ಅಭಿಷೇಕ್ ಅಗರವಾಲ್ ಎಂಬಾತ ತಾನು ಪಾಟ್ನಾ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶ ಎಂದು ಹೇಳಿ ಬಿಹಾರ್ ಡಿಜಿಪಿ ಎಸ್​ ಕೆ ಸಿಂಘಾಲ್​ರಿಗೆ ಕರೆ ಮಾಡಿ, ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಕೇಳಿಕೊಂಡಿದ್ದ ಘಟನೆ ಭಾರಿ ವಿವಾದ ಸೃಷ್ಟಿಸಿತ್ತು. ಇಡೀ ಘಟನೆ ಬೆಳಕಿಗೆ ಬಂದ ನಂತರ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಯನ್ನು ಅಮಾನತು ಮಾಡಿತ್ತು.

ಇದನ್ನೂ ಓದಿ: ದೇಶಾದ್ಯಂತ ಏಕರೂಪದ ವಿದ್ಯುತ್ ಶುಲ್ಕವಿರಲಿ.. ಬಿಹಾರ್ ಸಿಎಂ ನಿತೀಶ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.