ETV Bharat / bharat

ರಾಷ್ಟ್ರಪತಿ ಭವನ ಸ್ಫೋಟಿಸುವುದಾಗಿ ಪತ್ರ ಬರೆದಿದ್ದ ಸರ್ಕಾರಿ ನೌಕರನ ಬಂಧನ

author img

By

Published : Mar 8, 2023, 12:31 PM IST

ರಾಷ್ಟ್ರಪತಿ ಭವನ ಸೇರಿದಂತೆ ಇನ್ನೂ ಏಳು ಸ್ಥಳಗಳನ್ನು ಡ್ರೋನ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ಬಿಹಾರದ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್​ನನ್ನು ಬಂಧಿಸಲಾಗಿದೆ.

Bihar govt engineer held
Bihar govt engineer held

ಪಾಟ್ನಾ : ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ, ಗಯಾ ಮತ್ತು ವಾರಣಾಸಿ ವಿಮಾನ ನಿಲ್ದಾಣಗಳು ಮತ್ತು ಇತರ ಪ್ರಮುಖ ಸ್ಥಳಗಳನ್ನು ಡ್ರೋನ್‌ಗಳ ಮೂಲಕ ಸ್ಫೋಟಿಸುವುದಾಗಿ ಬಿಹಾರದ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಒಬ್ಬಾತ ವಾರಣಾಸಿ ವಿಮಾನ ನಿಲ್ದಾಣದ ಅಧಿಕಾರಿಗೆ ಪತ್ರ ಬರೆದ ಘಟನೆ ನಡೆದಿದೆ. ಆರೋಪಿ ಸಹಾಯಕ ಇಂಜಿನಿಯರ್​ನನ್ನು ಮಂಗಳವಾರ ಗಯಾದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ವಿನೀತ್ ಕುಮಾರ್ ಎಂದು ಗುರುತಿಸಲಾಗಿದೆ. ಈತ 10 ದಿನಗಳ ಹಿಂದೆ ಬೆದರಿಕೆ ಪತ್ರ ಕಳುಹಿಸಿದ್ದ ಎಂದು ಗಯಾ ಎಸ್‌ಎಸ್‌ಪಿ ಆಶಿಶ್ ಭಾರ್ತಿ ಹೇಳಿದ್ದಾರೆ.

ನೀರಾವರಿ ಇಲಾಖೆಯಲ್ಲಿ ಶೇಖಪುರದಲ್ಲಿ ನಿಯೋಜನೆಗೊಂಡಿದ್ದ ವಿನೀತ್‌ಕುಮಾರ್‌ಗೆ ಮೂವರ ಜತೆ ಕೆಲ ವೈಯಕ್ತಿಕ ದ್ವೇಷವಿತ್ತು. ಹೀಗಾಗಿ ಆತ ಓರ್ವ ವೈದ್ಯ, ಓರ್ವ ಶಿಕ್ಷಕ ಸೇರಿದಂತೆ ಆ ಮೂವರ ಹೆಸರು ನಮೂದಿಸಿ ವಾರಣಾಸಿ ವಿಮಾನ ನಿಲ್ದಾಣದ ಅಧಿಕಾರಿಗೆ ಪೋಸ್ಟ್ ಮಾಡಿದ್ದಾರೆ ಎಂದು ಅವರು ಹೇಳಿದರು. ಮಾರ್ಚ್ 8 ರಂದು ಹೋಳಿ ಹಬ್ಬದ ದಿನದಂದು ಡ್ರೋನ್ ದಾಳಿ ನಡೆಸಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಗಯಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಲ್ದಾರಿ ಟೋಲಾದಿಂದ ಆರೋಪಿಯನ್ನು ಬಂಧಿಸಲಾಗಿದೆ. ನಾವು ಆತನ ಬಳಿಯಿಂದ ಮೂಲ ಪತ್ರವನ್ನು ಸಹ ವಶಪಡಿಸಿಕೊಂಡಿದ್ದೇವೆ. ಆತ ಪತ್ರದ ಫೋಟೋಕಾಪಿಯನ್ನು ಪೋಸ್ಟ್​ ಮಾಡಿದ್ದ. ಆರೋಪಿ ಇನ್ನೂ 6 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಎಸ್‌ಎಸ್‌ಪಿ ತಿಳಿಸಿದರು.

ನ್ಯಾಯಮೂರ್ತಿಗೆ ಬೆದರಿಕೆ ಪತ್ರ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಸ್ವಯಂಘೋಷಿತ ದೇವಮಾನವ ಶಿವಶಂಕರ ಬಾಬಾ ಸಲ್ಲಿಸಿರುವ ಮನವಿಯ ವಿಚಾರಣೆ ಸಮಯದಲ್ಲಿ ಯಾವುದೇ ಆದೇಶ ನೀಡದಂತೆ ತನಗೆ ಅಪರಿಚಿತರ ಹೆಸರಿನಲ್ಲಿ ಬೆದರಿಕೆ ಪತ್ರವನ್ನು ಕಳುಹಿಸಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆರ್.ಎನ್. ಮಂಜುಳಾ ಬಹಿರಂಗಪಡಿಸಿದ್ದಾರೆ. ಇಂಥ ಕೀಳು ಮಟ್ಟದ ವರ್ತನೆ ಅವರ ಹೇಡಿತನವನ್ನು ಮಾತ್ರ ತೋರಿಸುತ್ತದೆ ಹೊರತು ಇದು ನ್ಯಾಯದಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿಂದೆ ನ್ಯಾಯಾಲಯವು ಬಾಬಾ ಅವರ ಮನವಿಯನ್ನು ಅಂಗೀಕರಿಸಿತ್ತು ಮತ್ತು ಪ್ರಕರಣದ ಸಾಕ್ಷ್ಯಗಳ ಆಧಾರದ ಮೇಲೆ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು. ಆದರೆ ದೂರುದಾರರು ಈ ಪ್ರಕರಣವನ್ನು ವಿಚಾರಣೆ ನಡೆಸುವಂತೆ ಮತ್ತೆ ಮನವಿ ಸಲ್ಲಿಸಿದ ನಂತರ ಎಫ್​ಐಆರ್ ರದ್ದುಗೊಳಿಸುವ ಆದೇಶವನ್ನು ಹಿಂಪಡೆಯಲಾಗಿತ್ತು.

ಚೀನಾ ಸಿಸಿಟಿವಿ ಬಳಸದಂತೆ ಮನವಿ: ಸರ್ಕಾರಿ ಕಚೇರಿಗಳಲ್ಲಿ ಚೀನಾದಲ್ಲಿ ತಯಾರಾದ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳ ಅಳವಡಿಕೆ ನಿಷೇಧಿಸುವ ನಿರ್ದೇಶನ ನೀಡುವಂತೆ ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಜನತೆ ತಮ್ಮ ಮನೆಗಳಲ್ಲಿ ಚೀನಾ ಸಿಸಿಟಿವಿ ಕ್ಯಾಮೆರಾ ಬಳಸದಂತೆ ಜಾಗೃತಿ ಮೂಡಿಸುವ ಅಭಿಯಾನವನ್ನು ಕೂಡ ಇವರು ಆಯೋಜಿಸಿದ್ದಾರೆ. ಪಾಸಿಘಾಟ್ ಪಶ್ಚಿಮ ಕ್ಷೇತ್ರದ ಶಾಸಕ ಮತ್ತು ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಿನೊಂಗ್ ಎರಿಂಗ್, ಭಾರತದಲ್ಲಿ ಬಳಸಲಾಗುವ ಚೀನಾ ನಿರ್ಮಿತ ಸಿಸಿಟಿವಿಗಳನ್ನು ಬೀಜಿಂಗ್‌, ಭಾರತದ ಮೇಲೆ ಗುಪ್ತಚರ ಕಾರ್ಯಾಚರಣೆ ನಡೆಸಲು ಬಳಸಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್​ ಅಪಘಾತ, ಮೂವರು ಸಿಬ್ಬಂದಿ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.