ಪಾಟ್ನಾ (ಬಿಹಾರ): ಬಿಹಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಸಿಂಗ್ ಶುಕ್ರವಾರ ನಿಧನರಾದರು. ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಕಳೆದ ನಾಲ್ಕು ದಿನಗಳಿಂದ ಪಾಟ್ನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ರಕ್ತ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತಿದ್ದರು. ಅರುಣ್ ಕುಮಾರ್ ಸಿಂಗ್ ನಿಧನಕ್ಕೆ ಇಡೀ ರಾಜಕೀಯ ವಲಯ ಸಂತಾಪ ಸೂಚಿಸಿದೆ.
ಬಿಹಾರ ಕ್ಯಾಬಿನೆಟ್ ಕೂಡ ಎರಡು ನಿಮಿಷಗಳ ಮೌನಾಚರಣೆ ನಡೆಸಿತು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿಧನದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಂಪುಟ ಸಭೆ ಕರೆದಿದ್ದಾರೆ.