ETV Bharat / bharat

ಪೊಲೀಸ್​ ಪೇದೆ​ ಆಗಿರುವ ಬಿಗ್​ ಬಿ​​ ಬಾಡಿಗಾರ್ಡ್​​ ವಾರ್ಷಿಕ ವೇತನ 1.5 ಕೋಟಿ ರೂ: ತನಿಖೆಗೆ ಆದೇಶ - ಬಿಗ್​ ಬಿ​​ ಬಾಡಿಗಾರ್ಡ್​​

ಅಮಿತಾಬ್​ ಬಚ್ಚನ್​ ಅವರ ಬಾಡಿಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಕಾನ್ಸ್​ಟೇಬಲ್ ​ಒಬ್ಬರು ಕೋಟ್ಯಂತರ ರೂಪಾಯಿ ಗಳಿಕೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದೀಗ ತನಿಖೆಗೆ ಆದೇಶ ನೀಡಲಾಗಿದೆ.

Big B
Big B
author img

By

Published : Aug 27, 2021, 3:37 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​​ನ ಬಿಗ್​ ಸ್ಟಾರ್​ ಅಮಿತಾಬ್​ ಬಚ್ಚನ್​​ ಅವರ ಬಾಡಿಗಾರ್ಡ್​ ಆಗಿ ಸೇವೆ ಸಲ್ಲಿಸುತ್ತಿದ್ದ ಬಾಡಿಗಾರ್ಡ್​ ಒಬ್ಬರು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತಿದ್ದು, ಇದೇ ಕಾರಣಕ್ಕಾಗಿ ಅವರನ್ನ ಮುಂಬೈ ಪೊಲೀಸ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಅಮಿತಾಬ್​ ಬಚ್ಚನ್​​ ಅವರ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ ಜಿತೇಂದ್ರ ಶಿಂಧೆ, ಮುಂಬೈ ಪೊಲೀಸ್​ ಇಲಾಖೆಯ ಹೆಡ್​ ಕಾನ್ಸ್​ಟೇಬಲ್​​. 2015ರಿಂದಲೂ ಅವರು ಈ ಕೆಲಸ ಮಾಡುತ್ತಿದ್ದರು. ಆದರೆ, ಇದೀಗ ಅವರು ಹೆಚ್ಚಿನ ಹಣ ಗಳಿಕೆ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿರುವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ 15 ದಿನಗಳ ಹಿಂದಿಯೇ ಅವರನ್ನ ವರ್ಗಾವಣೆ ಮಾಡಲಾಗಿದೆ.

Big B's bodyguard
ಅಮಿತಾಬ್​​ ಬಚ್ಚನ್ ಬಾಡಿಗಾರ್ಡ್​​

ಜಿತೇಂದ್ರ ಶಿಂಧೆ ಭದ್ರತಾ ಏಜೆನ್ಸಿ ಕೂಡ ಹೊಂದಿದ್ದು, ಅದರಿಂದ ಅಪಾರ ಪ್ರಮಾಣದ ಹಣ ಗಳಿಕೆ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಇದೀಗ ಅವರನ್ನ ದಕ್ಷಿಣ ಮುಂಬೈನ ಡಿ.ಬಿ ಮಾರ್ಗ್​ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿರಿ: ಭಾರತ 3ನೇ ಟೆಸ್ಟ್​ ಸೋಲಲಿದೆ, ಆದರೆ 2ನೇ ಇನ್ನಿಂಗ್ಸ್​​ನಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ: ಮೈಕಲ್ ವಾನ್

ಪೊಲೀಸ್​ ಕಾನ್ಸ್​ಟೇಬಲ್​ ಜಿತೇಂದ್ರ ಯಾವಾಗಲೂ ಅಮಿತಾಬ್​​ ಬಚ್ಚನ್​​ ಅವರೊಂದಿಗೆ ಇರುತ್ತಿದ್ದರು. ಬಿಗ್​ ಬಿ ವಿದೇಶಕ್ಕೆ ತೆರಳಿದ್ದ ಸಂದರ್ಭಗಳಲ್ಲೂ ಅವರೊಂದಿಗೆ ಇವರು ಕಾಣಿಸಿಕೊಳ್ಳುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.