ಚಾಂಬಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಸಂಸ್ಥಾಪನದ ದಿನವೇ ಮುಖ್ಯಮಂತ್ರಿ ಜೈರಾಮ್ ಠಾಕೂರ್ ರಾಜ್ಯದ ಜನತೆಗೆ ಭರ್ಜರಿ ಘೋಷಣೆ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೂ ಉಚಿತವಾಗಿ 125 ಯೂನಿಟ್ಗಳ ವಿದ್ಯುತ್ ಪೂರೈಕೆ ಮತ್ತು ಮಹಿಳೆಯರಿಗೆ ಬಸ್ ಪ್ರಯಾಣದ ಟಿಕೆಟ್ನಲ್ಲಿ ಶೇ.50ರಷ್ಟು ವಿನಾಯಿತಿ ಪ್ರಕಟಿಸಿದ್ದಾರೆ.
ಚಾಂಬಾದಲ್ಲಿ ಹಿಮಾಚಲ ಪ್ರದೇಶದ 75ನೇ ಸಂಸ್ಥಾಪನಾ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ, ಹಲವು ಹೊಸ ಘೋಷಣೆಗಳನ್ನು ಮಾಡಿದ್ದಾರೆ. 125 ಯೂನಿಟ್ಗಳ ಉಚಿತ ವಿದ್ಯುತ್ ಸರಬರಾಜು ಘೋಷಣೆಯಿಂದ 11.5 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಹಿಂದೆ ಗೃಹಬಳಕೆಯಾಗಿ 60 ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಸಲಾಗುತ್ತಿತ್ತು. ಅಲ್ಲದೇ, ಗ್ರಾಮೀಣ ಭಾಗದಲ್ಲಿ ನೀರಿನ ಶುಲ್ಕವನ್ನೂ ಮನ್ನಾ ಮಾಡುವುದಾಗಿ ಅವರು ಹೇಳಿದ್ದಾರೆ.
-
हिमाचल दिवस के उपलक्ष्य पर प्रदेश की भाजपा सरकार का ऐतिहासिक फैसला
— BJP Himachal Pradesh (@BJP4Himachal) April 15, 2022 " class="align-text-top noRightClick twitterSection" data="
हिमाचल के समस्त नागरिकों को अब मिलेगी 125 यूनिट निशुल्क बिजली। pic.twitter.com/qAUjdatGHR
">हिमाचल दिवस के उपलक्ष्य पर प्रदेश की भाजपा सरकार का ऐतिहासिक फैसला
— BJP Himachal Pradesh (@BJP4Himachal) April 15, 2022
हिमाचल के समस्त नागरिकों को अब मिलेगी 125 यूनिट निशुल्क बिजली। pic.twitter.com/qAUjdatGHRहिमाचल दिवस के उपलक्ष्य पर प्रदेश की भाजपा सरकार का ऐतिहासिक फैसला
— BJP Himachal Pradesh (@BJP4Himachal) April 15, 2022
हिमाचल के समस्त नागरिकों को अब मिलेगी 125 यूनिट निशुल्क बिजली। pic.twitter.com/qAUjdatGHR
ಇತ್ತ, ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್ಗಳಲ್ಲಿ ಶೇ.50ರಷ್ಟು ಟಿಕೆಟ್ ದರದ ವಿನಾಯಿತಿ ಪ್ರಕಟಿಸಲಾಗಿದೆ. ಈ ಹಿಂದೆ ಶೇ.25ರಷ್ಟು ವಿನಾಯಿತಿ ಸಿಗುತ್ತಿತ್ತು. ಈಗ ವಿನಾಯಿತಿಯನ್ನು ದುಪ್ಪಟ್ಟು ಮಾಡಲಾಗಿದೆ. ಅಲ್ಲದೇ, ಉತ್ತಾಲಾ-ಹೋಲಿ ಮಾರ್ಗದ ರಸ್ತೆಗಾಗಿ ಅನುದಾನ ಒದಗಿಸುವುದಾಗಿ ಪ್ರಕಟಿಸಿದ್ದಾರೆ. ಚಾಂಬಾದಲ್ಲಿ ಮಿನಿ ಸೆಕ್ರೆಟರಿಯೇಟ್ ಆರಂಭಿಸುವುದಾಗಿಯೂ ಜೈರಾಮ್ ಠಾಕೂರ್ ತಿಳಿಸಿದ್ದಾರೆ.
ಇದನ್ನೂ ಓದಿ: ಏಕಕಾಲಕ್ಕೆ ಸೂರ್ಯಾಸ್ತ-ಚಂದ್ರೋದಯ ದರ್ಶನ: ಕನ್ಯಾಕುಮಾರಿಯಲ್ಲಿ ನಾಳೆ ವಿಸ್ಮಯ!