ETV Bharat / bharat

ಗುಜರಾತ್​ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ.. ಪಿಎಂ ಮೋದಿ, ಅಮಿತ್​ ಶಾ, ಬೊಮ್ಮಾಯಿ ಭಾಗಿ

ಗುಜರಾತ್​ನ 18ನೇ ಮತ್ತು 2ನೇ ಬಾರಿಗೆ ಸಿಎಂ ಆಗಿ ಭೂಪೇಂದ್ರ ಪಟೇಲ್​ ಅವರು ಪ್ರಮಾಣವಚನ ಸ್ವೀಕರಿಸಿದರು. ಈ ಬಾರಿ ಗುಜರಾತ್​ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿತ್ತು.

Bhupendra Patel takes oath as the Chief Minister  Chief Minister of Gujarat for second time  BJP leader Bhupendra Patel oath ceremony  ಗುಜರಾತ್​ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ  ಸಿಎಂ ಆಗಿ ಭೂಪೇಂದ್ರ ಪಟೇಲ್​ ಅವರು ಪ್ರಮಾಣವಚನ  ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ  ಬಿಜೆಪಿ ಸತತ 7 ನೇ ಬಾರಿಗೆ ಅಧಿಕಾರದ ಗದ್ದುಗೆ  ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪದಗ್ರಹಣ  ಸಚಿವ ಸಂಪುಟದ ಸಮೇತ ರಾಜೀನಾಮೆ
ಗುಜರಾತ್​ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ
author img

By

Published : Dec 12, 2022, 2:28 PM IST

ಗಾಂಧಿನಗರ (ಗುಜರಾತ್​): ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ಬಿಜೆಪಿ ಸತತ 7 ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಹೊಸ ಸರ್ಕಾರದ ಮತ್ತು 18 ನೇ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪದಗ್ರಹಣ ಮಾಡಿದರು. ಇದೇ ವೇಳೆ, ಅವರೊಂದಿಗೆ ಕೆಲ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸಭೆಯ 182 ಸ್ಥಾನಗಳ ಪೈಕಿ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆದ್ದು ಚರಿತ್ರೆ ಸೃಷ್ಟಿಸಿದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿರುವ ಪಾಟೀದಾರ್​ ಸಮುದಾದಯ ಭೂಪೇಂದ್ರ ಪಟೇಲ್​ ದಾಖಲೆಯ 1.90 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದೂ ದಾಖಲೆಯೇ. ಈ ಎಲ್ಲ ದಾಖಲೆಗಳ ಮಧ್ಯೆ ಬಿಜೆಪಿ ರಾಜ್ಯದಲ್ಲಿ ಮತ್ತೆ 5 ವರ್ಷಗಳ ಕಾಲ ಅಧಿಕಾರ ನಡೆಸಲಿದೆ. ಈ ಮೂಲಕ ಪಶ್ಚಿಮಬಂಗಾಳದಲ್ಲಿ ಎಡರಂಗದ ಸತತ ಅಧಿಕಾರದ ದಾಖಲೆಯನ್ನು ಬಿಜೆಪಿ ಸರಿಗಟ್ಟಿದೆ.

ಪ್ರಧಾನಿ ಮೋದಿ, ಅಮಿತ್​ ಶಾ ಭಾಗಿ: ಗಾಂಧಿನಗರದ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯುವ ಅದ್ಧೂರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕರ್ನಾಟಕದಿಂದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

  • Prime Minister Narendra Modi arrives at Helipad Ground in Gandhinagar to attend the swearing-in ceremony of Gujarat-CM designate Bhupendra Patel. pic.twitter.com/5aVbEhyBoW

    — ANI (@ANI) December 12, 2022 " class="align-text-top noRightClick twitterSection" data=" ">

ಚುನಾವಣೆಯ ಫಲಿತಾಂಶದ ಮರುದಿನ (ಡಿಸೆಂಬರ್ 9​) ಸಿಎಂ ಭೂಪೇಂದ್ರ ಪಟೇಲ್​ ಅವರು ತಮ್ಮ ಸಚಿವ ಸಂಪುಟದ ಸಮೇತ ರಾಜೀನಾಮೆ ಸಲ್ಲಿಸಿದ್ದರು. ಡಿಸೆಂಬರ್​ 10 ರಂದು ಶಾಸಕಾಂಗ ಸಭೆ ನಡೆದು ಭೂಪೇಂದ್ರ ಪಟೇಲ್​ ನಾಯಕರಾಗಿ ಆಯ್ಕೆಯಾದರು. ಬಳಿಕ ರಾಜಭವನಕ್ಕೆ ತೆರಳಿದ ಬಿಜೆಪಿ ಶಾಸಕರು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

  • UP CM Yogi Adityanath, MP CM SS Chouhan, Karnataka CM B.Bommai, Assam CM HB Sarma, Uttarakhand CM PS Dhami and Tripura CM Manik Saha take part in the oath-taking ceremony of Gujarat CM designate Bhupendra Patel in Gandhinagar pic.twitter.com/dlvxv8exps

ರಾಜ್ಯಪಾಲರು ಇದಕ್ಕೆ ಒಪ್ಪಿಗೆ ನೀಡಿದರು. ನಿಗದಿಯಂತೆ ಇಂದು ಪದಗ್ರಹಣ ಸಮಾರಂಭ ನಡೆದಿದ್ದು, ನೂತನ ಸಿಎಂ ಆಗಿ ಪ್ರಮಾಣವಚಣ ಸ್ವೀಕರಿಸಿದರು. ಇವರೊಂದಿಗೆ 20 ಕ್ಯಾಬಿನೆಟ್ ಸಚಿವರು ಸಹ ಪ್ರಮಾಣವಚನ ಸ್ವೀಕರಿಸಿದರು.

ಓದಿ: ವಿಶ್ವದ ಅತಿ ಎತ್ತರದ ಏಕತೆಯ ಪ್ರತಿಮೆ ವೀಕ್ಷಿಸಿದ ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.