ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶುಕ್ರವಾರ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ಸಲ್ಲಿಸಿದರು. ರಾಜೀನಾಮೆಯನ್ನು ನೀಡಲು ಭೂಪೇಂದ್ರ ಪಟೇಲ್ ಗಾಂಧಿನಗರದ ರಾಜಭವನಕ್ಕೆ ಆಗಮಿಸಿದ್ದರು.
-
Chief Minister of Gujarat Bhupendra Patel submits the resignation of his government to Governor Acharya Devvrat. #GujaratElectionResult https://t.co/hcxor7YhyI pic.twitter.com/88e5lZnFRb
— ANI (@ANI) December 9, 2022 " class="align-text-top noRightClick twitterSection" data="
">Chief Minister of Gujarat Bhupendra Patel submits the resignation of his government to Governor Acharya Devvrat. #GujaratElectionResult https://t.co/hcxor7YhyI pic.twitter.com/88e5lZnFRb
— ANI (@ANI) December 9, 2022Chief Minister of Gujarat Bhupendra Patel submits the resignation of his government to Governor Acharya Devvrat. #GujaratElectionResult https://t.co/hcxor7YhyI pic.twitter.com/88e5lZnFRb
— ANI (@ANI) December 9, 2022
ಭೂಪೇಂದ್ರ ಪಟೇಲ್ ನೇತೃತ್ವದ ಹೊಸ ಸಂಪುಟದ ಪ್ರಮಾಣವಚನ ಸ್ವೀಕರಿಸುವ ಸಮಾರಂಭ ಡಿಸೆಂಬರ್ 12 ರಂದು ಹಮ್ಮಿಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಒಟ್ಟು 182 ಸ್ಥಾನಗಳಲ್ಲಿ 156 ಸ್ಥಾನಗಳನ್ನು ಗೆದ್ದಿದೆ.
ಇದನ್ನೂ ಓದಿ: ಭರ್ಜರಿ ಗೆಲುವು: ಡಿ. 11 ಅಥವಾ 12 ರಂದು ಮತ್ತೆ ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ