ಭುವನೇಶ್ವರ (ಒಡಿಶಾ): ದೇವಾಲಯಗಳ ನಗರವಾದ ಭುವನೇಶ್ವರಕ್ಕೆ ಚಾಲಕರು ಮುತ್ತಿಗೆ ಹಾಕಿದಂತೆ ಭಾಸವಾಗುತ್ತಿದೆ. ಎಲ್ಲಾ 30 ಜಿಲ್ಲೆಗಳಿಂದ ಸುಮಾರು ಮೂರು ಲಕ್ಷ ಚಾಲಕರು ರಾಜಧಾನಿ ಭುವನೇಶ್ವರದಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದಾರೆ. ಯಾವುದೇ ಹಿಂಸಾಚಾರದ ವರದಿಗಳಿಲ್ಲದಿದ್ದರೂ ಇದು ಸಂಪೂರ್ಣ ಗುಪ್ತಚರ ವೈಫಲ್ಯ ಎಂದು ಮೂಲಗಳು ತಿಳಿಸಿವೆ. ರಾಜಧಾನಿಯಲ್ಲಿ ಹಿಂದೆಂದೂ ಕಂಡರಿಯದ ಸಮವಸ್ತ್ರದಲ್ಲಿ ಚಾಲಕರು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.
ಓದಿ: ಕಾಮಗಾರಿಗಳ ಪ್ಯಾಕೇಜ್ ಪದ್ಧತಿ ರದ್ದುಗೊಳಿಸುವಂತೆ ಸಣ್ಣ ಗುತ್ತಿಗೆದಾರರಿಂದ ಸಿಎಂಗೆ ಮನವಿ
ಭುವನೇಶ್ವರದ ಒಟ್ಟು ಜನಸಂಖ್ಯೆ 12 ಲಕ್ಷ. ಅಪಘಾತದಿಂದ ಸಾವನ್ನಪ್ಪಿದ ಚಾಲಕನ ಕುಟುಂಬಕ್ಕೆ ರೂ. 20 ಲಕ್ಷ ಪರಿಹಾರ ಸೇರಿದಂತೆ 11 ಬೇಡಿಕೆಗಳ ಹಕ್ಕುಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ಸುಮಾರು ಮೂರು ಲಕ್ಷ ಚಾಲಕರು ಖಾಕಿ ಸಮವಸ್ತ್ರದಲ್ಲಿ ಒಡಿಶಾದ ರಾಜಧಾನಿಗೆ ಬಂದು ಸೇರಿದ್ದಾರೆ.
ಚಾಲಕರು ಈ ಬೃಹತ್ ಪ್ರತಿಭಟನೆ ಕುರಿತು ಎಲ್ಲಿಯೂ ಮಾಹಿತಿ ದೊರೆತಿಲ್ಲ ಎಂಬುದು ತಿಳಿದು ಬಂದಿದೆ. ಏಕಾಏಕಿ ಚಾಲಕರು ಪ್ರತಿಭಟನೆ ನಡೆಸಿದ್ದರಿಂದ ಭುವನೇಶ್ವರ ತಲ್ಲಣಗೊಂಡಿದೆ.