ETV Bharat / bharat

ಭೋಪಾಲ್ ಅನಿಲ ದುರಂತ; ಡೌ ಕೆಮಿಕಲ್​ನ ವಿಚಾರಣೆ ಕೋರಿದ್ದ ಅರ್ಜಿ ವಿಚಾರಣೆ ಜ.6ಕ್ಕೆ ಮುಂದೂಡಿಕೆ - ಕಾರ್ಖಾನೆಯಿಂದ ವಿಷಕಾರಿ

ಭೋಪಾಲ್ ಅನಿಲ ದುರಂತ ಪ್ರಕರಣದಲ್ಲಿ ಡೌ ಕೆಮಿಕಲ್ ಅನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕೋರಿದ ಅರ್ಜಿಗಳ ವಿಚಾರಣೆಯನ್ನು ಭೋಪಾಲ್ ನ್ಯಾಯಾಲಯ ಜ.6ಕ್ಕೆ ಮುಂದೂಡಿದೆ.

Bhopal gas tragedy
Bhopal gas tragedy
author img

By PTI

Published : Nov 26, 2023, 4:29 PM IST

ಭೋಪಾಲ್: 3,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮತ್ತು ಪರಿಸರಕ್ಕೆ ಅಗಾಧ ಹಾನಿ ಉಂಟುಮಾಡಿದ 1984 ರ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಡೌ ಕೆಮಿಕಲ್ ಅನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕೋರಿ ಸಿಬಿಐ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಇಲ್ಲಿನ ನ್ಯಾಯಾಲಯ ಜನವರಿ 6 ಕ್ಕೆ ಮುಂದೂಡಿದೆ.

ಅಮೆರಿಕದ ಮಿಚಿಗನ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಡೌ ಕೆಮಿಕಲ್ ಭೋಪಾಲ್​ನಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಂಪನಿಯನ್ನು ನಿರ್ವಹಿಸುತ್ತಿತ್ತು. 1984ರ ಡಿಸೆಂಬರ್ 2 ಮತ್ತು 3ರ ಮಧ್ಯರಾತ್ರಿ ಈ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ನಿಂದ ಅನಿಲ ಸೋರಿಕೆಯಾಗಿ ಭಾರಿ ದುರಂತ ಸಂಭವಿಸಿತ್ತು.

ಅರ್ಜಿದಾರರ ಮನವಿಯ ಮೇರೆಗೆ ಶೋಕಾಸ್ ನೋಟಿಸ್ ನೀಡಿದ ಭೋಪಾಲ್ ನ್ಯಾಯಾಲಯದ ವ್ಯಾಪ್ತಿಗೆ ಈ ಪ್ರಕರಣ ಬರುವುದಿಲ್ಲ ಎಂದು ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಡೌ ಕೆಮಿಕಲ್ ವಾದಿಸಿದ ನಂತರ ಮ್ಯಾಜಿಸ್ಟ್ರೇಟ್ ವಿಧಾನ ಮಹೇಶ್ವರಿ ಶನಿವಾರ ವಿಚಾರಣೆಯನ್ನು ಜನವರಿ 6 ಕ್ಕೆ ಮುಂದೂಡಿದರು.

ಆದಾಗ್ಯೂ, ಮಧ್ಯಪ್ರದೇಶ ಹೈಕೋರ್ಟ್ 2012 ರಲ್ಲಿ ನ್ಯಾಯವ್ಯಾಪ್ತಿಯ ವಿಷಯವನ್ನು ನಿರ್ಧರಿಸಿದೆ ಮತ್ತು ಆದ್ದರಿಂದ ಡೌ ಕೆಮಿಕಲ್ ಅನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಬೇಕು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ ಎಂದು ಅನಿಲ ದುರಂತ ಸಂತ್ರಸ್ತರಿಗಾಗಿ ಕೆಲಸ ಮಾಡುವ ಸಂಸ್ಥೆಗಳನ್ನು ಪ್ರತಿನಿಧಿಸುವ ವಕೀಲ ಅವಿ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್​ನ ಹಿರಿಯ ವಕೀಲ ಮತ್ತು ಛತ್ತೀಸಗಢದ ಮಾಜಿ ಅಡ್ವೊಕೇಟ್ ಜನರಲ್ ರವೀಂದ್ರ ಶ್ರೀವಾಸ್ತವ ಮತ್ತು ಸಂದೀಪ್ ಗುಪ್ತಾ ನೇತೃತ್ವದ ವಕೀಲರು ಕಂಪನಿಯ ಪರವಾಗಿ ವಾದಿಸಿದರು. ಬಹುರಾಷ್ಟ್ರೀಯ ಸಂಸ್ಥೆ ಅಂತರರಾಷ್ಟ್ರೀಯ ಕಾನೂನಿನಿಂದ ನಿಯಂತ್ರಿಸಲ್ಪಡುವುದರಿಂದ ಈ ಪ್ರಕರಣವು ಭೋಪಾಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಡೌ ಕೆಮಿಕಲ್ ಅನ್ನು ಪ್ರತಿನಿಧಿಸುವ ವಕೀಲರು ಪಿಟಿಐಗೆ ತಿಳಿಸಿದರು. "ನ್ಯಾಯವ್ಯಾಪ್ತಿಯ ಸಮಸ್ಯೆಯನ್ನು ಹೈಕೋರ್ಟ್ ಇತ್ಯರ್ಥಪಡಿಸಿಲ್ಲ ಎಂಬ ವಿಷಯವನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ" ಎಂದು ಅವರು ಹೇಳಿದರು.

ಕೇಂದ್ರ ತನಿಖಾ ದಳ (ಸಿಬಿಐ), ಭೋಪಾಲ್ ಗ್ರೂಪ್ ಫಾರ್ ಇನ್ಫರ್ಮೇಷನ್ ಅಂಡ್ ಆಕ್ಷನ್ ಮತ್ತು ಇತರ ಸಂಸ್ಥೆಗಳು ತಮ್ಮ ಮನವಿಗಳಲ್ಲಿ, ಡೌ ಕೆಮಿಕಲ್ ಯೂನಿಯನ್ ಕಾರ್ಬೈಡ್ ನ ಒಡೆತನ ಹೊಂದಿರುವುದರಿಂದ ಅದನ್ನು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಬೇಕು ಎಂದು ವಾದಿಸಿವೆ. ಡಿಸೆಂಬರ್ 2 ಮತ್ತು 3, 1984 ರ ಮಧ್ಯರಾತ್ರಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್​ ಅನಿಲ ಸೋರಿಕೆಯಾಗಿದ್ದರಿಂದ 3,000 ಕ್ಕೂ ಹೆಚ್ಚು ಜನ ಸಾವಿಗೀಡಾದರು. ಅಲ್ಲದೆ ಕನಿಷ್ಠ 1.02 ಲಕ್ಷ ಜನ ಸುದೀರ್ಘ ಅನಾರೋಗ್ಯಕ್ಕೊಳಗಾಗಿದ್ದರು.

ಇದನ್ನೂ ಓದಿ : ಪ್ರಧಾನಿ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪ; ಓರ್ವ ಎಸ್​ಪಿ ಸೇರಿ 7 ಪೊಲೀಸ್ ಅಧಿಕಾರಿಗಳ ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.