ETV Bharat / bharat

ಭೋಪಾಲ್ ಅನಿಲ ದುರಂತಕ್ಕೆ 37 ವರ್ಷ ; ದಶಕಗಳು ಕಳೆದರೂ ಸಂತ್ರಸ್ತರಿಗೆ ಸಿಗದ ಪರಿಹಾರ!

author img

By

Published : Dec 3, 2021, 2:31 PM IST

Bhopal Gas Tragedy : ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಅನಿಲ ದುರಂತ ಸಂಭವಿಸಿ ಇಂದಿಗೆ 37 ವರ್ಷ. ದಶಕಗಳು ಕಳೆದರೂ ಇಂದಿಗೂ ಸಂತ್ರಸ್ತರಿಗೆ ಪರಿಹಾರ ಸಿಗದಿರುವುದು ದುರಂತವೇ ಸರಿ. ಎಷ್ಟೇ ಪ್ರದರ್ಶನ, ಜಾಥಾಗಳನ್ನ, ಮತದಾನ ಬಹಿಷ್ಕಾರಗಳಂತಹ ಹಲವಾರು ಕ್ರಮಗಳನ್ನು ಕೈಗೊಂಡರೂ ಯಾವುದೇ ಫಲ ನೀಡಿಲ್ಲ..

Bhopal Gas Tragedy: 37 years on, children then not born scarred forever
ಭೋಪಾಲ್ ಅನಿಲ ದುರಂತಕ್ಕೆ 37 ವರ್ಷ; ದಶಕಗಳು ಕಳೆದರೂ ಸಂತ್ರಸ್ತರಿಗೆ ಸಿಗದ ಪರಿಹಾರ!

ಹೈದರಾಬಾದ್‌ : ಇಡೀ ದೇಶಕ್ಕೆ ಕಪ್ಪು ಚುಕ್ಕೆಯಾಗಿದ್ದ ಸಾವಿರಾರು ಮಂದಿಯನ್ನು ಬಲಿ ಪಡೆದಿದ್ದ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸಂಭವಿಸಿದ್ದ ಅನಿಲ ದುರಂತಕ್ಕೆ 37 ವರ್ಷ. 1984ರ ಡಿಸೆಂಬರ್‌ 2-3ರ ಮಧ್ಯರಾತ್ರಿ ಸಂಭವಿಸಿದ್ದ ಅತಿ ಘೋರ ದುರಂತದಿಂದ ಇಂದಿಗೂ ಅಲ್ಲಿನ ಜನ, ಹುಟ್ಟುವ ಮಕ್ಕಳು ನರಕಯಾತೆ ಅನುಭವಿಸುತ್ತಿದ್ದಾರೆ.

1984ರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್​​ನ ಕೀಟನಾಶಕ ಸ್ಥಾವರದಿಂದ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿತ್ತು. ದುರಂತದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಆದರೆ, ಮೂರು ದಶಕಗಳು ಕಳೆದರೂ ಇಂದಿಗೂ ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಗಲಿಲ್ಲ.

ಘಟನೆಯಲ್ಲಿ ಮೃತಪಟ್ಟವರು ಹಾಗೂ ಸಂಬಂಧಿತರಿಗೆ ಪರಿಹಾರ ನೀಡಲು ಈವರೆಗಿನ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಜಗತ್ತಿನಲ್ಲೇ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿರುವ ಈ ದುರಂತದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಮೀಥೈಲ್ ಐಸೊಸೈನೇಟ್ ಅನಿಲ ದುರಂತದಲ್ಲಿ ಸಿಲುಕಿ ಪರಿತಪಿಸಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ ದುರಂತದಲ್ಲಿ ತಕ್ಷಣಕ್ಕೆ ಮೃತಪಟ್ಟವರು 2,259 ಮಂದಿ ಎಂದು ಹೇಳಲಾಗಿದೆ. ಆದರೆ, 20 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅನಿಲ ದುರಂತ ಸಂಭವಿಸಿದಾಗ ನಾನು ಎಂಟು ತಿಂಗಳ ಗರ್ಭಿಣಿಯಾಗಿದ್ದೆ. ನನ್ನ ಮಗಳು ಮೂಗಿನ ಸಂಬಂಧಿತ ಕಾಯಿಲೆಯಿಂದ ಜನಿಸಿದಳು.

ಆದರೆ, ತೀವ್ರವಾಗಿರಲಿಲ್ಲ ಎಂದು ವೃದ್ಧೆಯೊಬ್ಬರು ದುರಂತ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅದೆಷ್ಟೋ ಮಂದಿ ಇಂದಿಗೂ ನರಕಯಾತನೆ ಅನುಭವಿಸುತ್ತಿದ್ದಾರೆ. ಹಣವಿಲ್ಲದೆ ಚಿಕಿತ್ಸೆಗೂ ಪರದಾಡುತ್ತಿದ್ದಾರೆ. ಕೆಲವು ಟ್ರಸ್ಟ್‌ಗಳು, ಪುನರ್ವಸತಿ ಕೇಂದ್ರಗಳಿಂದ ನೆರವು ನೀಡಲಾಗುತ್ತಿದೆ. ಆದರೆ, ಸರ್ಕಾರಗಳು ಮಾತ್ರ ಸೂಕ್ತ ಪರಿಹಾರವನ್ನು ಇಂದಿಗೂ ನೀಡಲೇ ಇಲ್ಲ.

ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಪಾಕ್​​ ಕಾರಣವೆಂದ ಯುಪಿ ಸರ್ಕಾರ: ಅಲ್ಲಿ ನಾವು ಕೈಗಾರಿಕೆ ನಿಷೇಧಿಸಬೇಕಾ? ಎಂದು ಸುಪ್ರೀಂ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.