ಮುಂಬೈ: ಭೀಮ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗದ್ದ ಗೌತಮ್ ನವಲಾಕ್ ರನ್ನು ಇಂದು ತಲೊಜಾ ಜೈಲಿನಿಂದ ಬಿಡುಗಡೆ ಮಾಡಲಾಗುವುದು. ಅನಾರೋಗ್ಯಕ್ಕೆ ಒಳಗಾಗಿರುವ ಅವರಿಗೆ ಚಿಕಿತ್ಸೆ ಹಿನ್ನೆಲೆಯಲ್ಲಿ ಅವರ ಪರ ವಕೀಲರ ತಂಡ ಬಾಂಬೆ ಹೈ ಕೋರ್ಟ್ ಮುಂದೆ ಹಾಜರಾಗಿದ್ದರು. ಗೌತಮ್ ನವಲಾಕ್ ಈ ಸಂಬಂಧ ಸುಪ್ರೀಂಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಹಿನ್ನಲೆ ಅವರಿಗೆ ಜಾಮೀನು ನೀಡಲಾಗಿದೆ
ಎನ್‌ಐಎಗೆ ಛೀಮಾರಿ: ಎಲ್ಗಾರ್ ಪರಿಷತ್ ಭೀಮಾ-ಕೋರೆಗಾಂವ್ ಪ್ರಕರಣದ ಆರೋಪಿ ನವಲಾಖಾ ಪ್ರಕರಣದಲ್ಲಿ ಎನ್‌ಐಎಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಜೈಲಿನಲ್ಲಿರುವ ನವಲಾಖಾ ಅವರನ್ನು 24 ಗಂಟೆಗಳ ಒಳಗೆ ಗೃಹಬಂಧನದಲ್ಲಿರಿಸುವಂತೆ ನ್ಯಾಯಾಲಯ ಎನ್‌ಐಎಗೆ ಸೂಚಿಸಿದೆ. ನಮ್ಮ ಆದೇಶಗಳನ್ನು ಧಿಕ್ಕರಿಸುವ ಲೋಪದೋಷಗಳನ್ನು ಕಂಡುಹಿಡಿಯಬೇಡಿ ಎಂದು ಸುಪ್ರೀಂ ಕೋರ್ಟ್ ಎನ್‌ಐಎಗೆ ಎಚ್ಚರಿಕೆ ನೀಡಿದೆ. ಅದೇ ಸಮಯದಲ್ಲಿ, ನವಲಾಕಾ ಅವರನ್ನು ಸಿಪಿಐ ಒಡೆತನದ ಆವರಣದಲ್ಲಿ ಇರಿಸಲು ನ್ಯಾಯಾಲಯವು ಆದೇಶಿಸಿದೆ.
ಬಂಧನ: ನವಾಲಕ್ ಅನಾರೋಗ್ಯ ಜೈಲಿನ ಬದಲು ಗೃಹ ಬಂಧನದಲ್ಲಿರಿಸಬೇಕು ಎಂಬ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಕಳೆದವಾರ ಸ್ವೀಕರಿಸಿತ್ತು. ನವಲಾಕ್ ಅವರಿಗೆ ಗೃಹಬಂಧನದಲ್ಲಿ ಇರಿಸುವ ಬದಲು ನವಿ ಮುಂಬೈನಲ್ಲಿರುವ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ತಾವು ಇರುವುದಾಗಿ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎನ್ಐಎ ಉದ್ದೇಶಿತ ಸ್ಥಳವು ಅಸುರಕ್ಷಿತವಾಗಿದ್ದು, ಅವರ ವಾಸಕ್ಕೆ ಯೋಗ್ಯವಾಗಿಲ್ಲ ಎಂದರು.
ಈ ಹಿನ್ನೆಲೆ ಗೌತಮ್ ನವ್ಲಾಖಾ ಅವರು ಕಟ್ಟಡದ ಮೊದಲ ಮಹಡಿಯನ್ನು ಆಯ್ಕೆ ಮಾಡಿದ್ದಾರೆ. ಇದು ವಸತಿ ಫ್ಲಾಟ್ ಆಗಿದೆ. ಸಿಪಿಐ ಮಾನ್ಯತೆ ಪಡೆದ ರಾಜಕೀಯ ಪಕ್ಷವಲ್ಲವೇ? ಶುಕ್ರವಾರ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಎನ್‌ಐಎಗೆ ಪ್ರಶ್ನಿಸಿತು.
ಇದನ್ನೂ ಓದಿ: 'ಇದು ಯದ್ಧದ ಯುಗವಲ್ಲ' ಮೋದಿ G20 ಜಂಟಿ ಘೋಷಣೆಗೆ ಜೋ ಬೈಡನ್ ಶ್ಲಾಘನೆ