ಹೈದರಾಬಾದ್: ಹೈದರಾಬಾದ್‌ನ ನಿಜಾಮರ ಸೈನ್ಯದ ಉನ್ನತ ಹುದ್ದೆಗಳಲ್ಲಿ ಅನೇಕ ಆಫ್ರಿಕನ್ ಮೂಲದವರಿದ್ದರು. ರಾಜಮನೆತನದ ಕಾವಲುಗಾರರ ಸ್ಥಾನಕ್ಕಾಗಿ ಅವರನ್ನು ಹೆಚ್ಚಾಗಿ ನೇಮಿಸಲಾಗುತ್ತಿತ್ತು. ಆಫ್ರಿಕನ್ ನೀಗ್ರೋಗಳು ತಮ್ಮ ಬಲವಾದ ಮೈಕಟ್ಟುಗಳಿಂದ ಆರೋಗ್ಯಕರವಾಗಿ ಕಾಣುತ್ತಿದ್ದರು.
ಹೈದರಾಬಾದ್‌ನ ಕೊನೆಯ ನಿಜಾಮ್ ನವಾಬ್ ಮಿರ್ ಒಸ್ಮಾನ್ ಅಲಿ ಖಾನ್ ಬಹದ್ದೂರ್ ಅವರ ಕಿರೀಟದ ಚಿತ್ರ ಮತ್ತು ಆಫ್ರಿಕಾದ ನೀಗ್ರೋ ಚಿತ್ರವನ್ನು ಇಂದಿಗೂ ಜಿಂದಾ ಟಿಲಿಸ್ಮತ್‌ನಲ್ಲಿ ಕಾಣಬಹುದು. ಇದರ ಲೋಗೋ ನಂಬಿಕೆ ಮತ್ತು ದೈಹಿಕ ಸಾಮರ್ಥ್ಯ ಸೂಚಿಸುತ್ತದೆ. ಸಮಯದೊಂದಿಗೆ, ಲೋಗೋ ಔಷಧದ ಗುರುತಾಗಿದೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ತೆಲುಗು ರಾಜ್ಯಗಳಲ್ಲಿ, ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಬಳಸುವುದರ ಜತೆಗೆ ಅನೇಕ ಜನರು ಜಿಂದಾ ಟಿಲಿಸ್ಮತ್ ಔಷಧವನ್ನು ಸಹ ತೆಗೆದುಕೊಳ್ಳುತ್ತಿದ್ದಾರೆ.
ಜಿಂದಾ ಟಿಲಿಸ್ಮತ್ ಅನ್ನು 1920ರಲ್ಲಿ ದಿವಂಗತ ಹಕೀಮ್ ಮೊಹಮ್ಮದ್ ಮೊಯಿನುದ್ದೀನ್ ಫಾರೂಕಿ ಕಂಡು ಹಿಡಿದರು. ನೂರು ವರ್ಷ ಕಳೆದ್ರೂ ಈ ಔಷಧ ಇಂದಿಗೂ ಜನಪ್ರಿಯವಾಗಿದೆ. ಗ್ರೀಕ್ ಗಿಡಮೂಲಿಕೆಗಳ ಮಿಶ್ರಣವನ್ನು ಬಳಸಿ ಜಿಂದಾ ಟಿಲಿಸ್ಮತ್ ಔಷಧ ತಯಾರಿಸಲಾಗುತ್ತದೆ. ಶೀತ, ಕೆಮ್ಮು, ಗಂಟಲು ನೋವು ಮತ್ತು ಕಾಲೋಚಿತ ಜ್ವರದ ಚಿಕಿತ್ಸೆಗಾಗಿ ಇದನ್ನು ಬಳಸಲಾಗುತ್ತದೆ. ಉತ್ತರ ಭಾರತದಲ್ಲಿ ಇದು ಜನಪ್ರಿಯ ಔಷಧವೆಂದು ಪರಿಗಣಿಸಲಾಗಿದೆ.
ಜಿಂದಾ ಟಿಲಿಸ್ಮತ್‌ನ ಸೃಷ್ಟಿಕರ್ತ, ದಿವಂಗತ ಹಕೀಮ್ ಮೊಹಮ್ಮದ್ ಮೊಯಿನುದ್ದೀನ್ ಫಾರೂಕಿ ಅವರು ಚಿಕಾಗೊ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ಔಷಧ ಮತ್ತು ಶಸ್ತ್ರಚಿಕಿತ್ಸೆಯನ್ನು ಅಧ್ಯಯನ ಮಾಡಿದ್ದರು. ಸಂಶೋಧನೆ ಮುಗಿದ ನಂತರ ಹೈದರಾಬಾದ್‌ಗೆ ಮರಳಿದರು. ಅವರು ತಮ್ಮ ವೈದ್ಯಕೀಯ ಅಂಗಡಿಯನ್ನು ಹೈದರಾಬಾದ್‌ನ ಮೋತಿ ಮಾರುಕಟ್ಟೆಯಲ್ಲಿ ಪ್ರಾರಂಭಿಸಿದರು. ನಂತರ, ಅವರು ತಮ್ಮ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಅಲ್ಲಿ ಅವರು ಜಿಂದಾ ಟಿಲಿಸ್ಮತ್ ಅನ್ನು ಕಂಡು ಹಿಡಿದರು.
ಫಾರೂಕಿ ಈ ಔಷಧವನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಲು ಶ್ರಮಿಸಿದರು. ಅವರು ಹೊಸದಾಗಿ ಕಂಡು ಹಿಡಿದ ಔಷಧ ಪರಿಚಯಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಶ್ರಮವಹಿಸಿದರು. ಈ ಔಷಧ ಉತ್ತೇಜಿಸುವ ಸಲುವಾಗಿ, ತಮ್ಮೊಂದಿಗೆ ಆರೋಗ್ಯಕರ ಆಫ್ರಿಕನ್ ನೀಗ್ರೋವನ್ನು ಕರೆದುಕೊಂಡು ಹೋಗುತ್ತಿದ್ದರು. ಅವರ ಆರೋಗ್ಯಕರ ದೇಹವನ್ನು ಇತರರಿಗೆ ತೋರಿಸುವ ಮೂಲಕ ಔಷಧಿಯ ಬಗ್ಗೆ ಪ್ರಚಾರ ಮಾಡುತ್ತಿದ್ದರು.
ಕಂಪನಿಯು ದೇಶದ ವಿವಿಧ ಸ್ಥಳಗಳಿಗೆ ತೆಲಂಗಾಣ, ಆಂಧ್ರ, ಮಧ್ಯಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಜಿಂದಾ ಟಿಲಿಸ್ಮತ್ ಅನ್ನು ಪೂರೈಸುತ್ತದೆ. ವಿಶೇಷ ಆದೇಶದ ಮೇರೆಗೆ ಔಷಧವನ್ನು ಅಮೆರಿಕ, ಸೌದಿ ಅರಬ್ ಮತ್ತು ಅಬುಧಾಬಿಗೆ ಕಳುಹಿಸಲಾಗುತ್ತಿದೆ. ಈ ಕಂಪನಿಯಲ್ಲಿ ಫಾರೂಕಿ ಮಂಗನ್ ಮತ್ತು ಜಿಂದಾ ಬಾಮ್‌ನಂತಹ ಹಲವಾರು ಉತ್ಪನ್ನಗಳು ಸಹ ತಯಾರಾಗುತ್ತವೆ.