ETV Bharat / bharat

ಭಾರತದಲ್ಲಿ ಹಿಜ್ಬುಲ್​-ಜೈಷೆ ಒಗ್ಗೂಡಿಸಲು ಹೊರಟಿದ್ದ ಉಗ್ರ ಮೂಸಾ! - undefined

ಅನ್ಸರ್​ ಘಜ್ವಾತ್​ ಉಲ್ ಹಿಂದ್​ನ ಮುಖ್ಯಸ್ಥ ಝಾಕಿರ್​ ರಷೀಧ್​ ಭಟ್​ ಅಲಿಯಾಸ್​ ಝಾಕಿರ್​ ಮುಸಾ ಉಗ್ರ ಸಂಘಟನೆಗಳಾದ ಹಿಜ್ಬುಲ್​ ಮುಜಾಹಿದ್ದೀನ್​ ಹಾಗೂ ಜೈಷೆ ಮೊಹಮ್ಮದ್​ಗಳೆರಡನ್ನೂ ಒಳಗೊಂಡ ಬೃಹತ್​ ಸಂಘಟನೆ ಕಟ್ಟುವ ಕೆಲಸದಲ್ಲಿ ನಿರತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಝಾಕಿರ್​ ಮುಸಾ
author img

By

Published : May 25, 2019, 5:01 AM IST

ನವದೆಹಲಿ: ಕಳೆದ ಗುರುವಾರ ಭದ್ರತಾ ಪಡೆಯ ಗುಂಡಿಗೆ ಬಲಿಯಾದ ಝಾಕಿರ್​ ಮುಸಾ ಉಗ್ರ ಸಂಘಟನೆಗಳಾದ ಹಿಜ್ಬುಲ್​ ಮುಜಾಹಿದ್ದೀನ್​ ಹಾಗೂ ಜೈಷೆ ಮೊಹಮ್ಮದ್​ಗಳೆರಡನ್ನೂ ಒಳಗೊಂಡ ಬೃಹತ್​ ಸಂಘಟನೆ ಕಟ್ಟುವ ಕೆಲಸದಲ್ಲಿ ನಿರತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನ್ಸರ್​ ಘಜ್ವಾತ್​ ಉಲ್ ಹಿಂದ್​ನ ಮುಖ್ಯಸ್ಥ ಝಾಕಿರ್​ ರಷೀಧ್​ ಭಟ್​ ಅಲಿಯಾಸ್​ ಝಾಕಿರ್​ ಮುಸಾ 2016ರಲ್ಲಿ ಹಿಜ್ಬುಲ್​ ಸಂಘಟನೆಯ ಕಮ್ಯಾಂಡರ್​ ಬುರ್ಹಾನ್​ ವಾನಿಯ ಎನ್​ಕೌಂಟರ್​ ನಂತರ ಕಾಶ್ಮೀರದಲ್ಲಿ ಮಿನಿ ಐಕಾನ್​ ಎಂತಲೇ ಗುರ್ತಿಸಿಕೊಂಡಿದ್ದ. ಕಳೆದೆರಡು ತಿಂಗಳಲ್ಲಿ ಮುಸಾನನ್ನು ಫಿನಿಶ್​ ಮಾಡಲು ಯತ್ನಿಸಲಾಗಿತ್ತಾದರೂ, ನಿಖಿರ ಮಾಹಿತಿಯಿಲ್ಲದೆ ಹಿಂದೆ ಸರಿಯುಂತಾಯ್ತು. ಹಿಜ್ಬುಲ್​ ಹಾಗೂ ಜೈಷೆ ಸಂಘಟಗಳನ್ನು ಒಂದು ಮಾಡಿ, ಹೈಬ್ರೀಡ್​ ಸಂಘಟನೆಯೊಂದನ್ನು ಕಟ್ಟುವ ಕೆಲಸದಲ್ಲಿ ಈತ ತೊಡಗಿದ್ದ ಎಂದು ಹೇಳಿದ್ದಾರೆ.

ಮೂಸಾ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿರುವ ರಾಷ್ಟ್ರೀಯ ತನಿಖಾ ತಂಡ, ಆತ ದೇಶದ ಭದ್ರತಾ ನೆಲೆಗಳ ಮೇಲೆ ದಾಳಿ ಮಾಡಲು ಟಾರ್ಗೆಟ್ ಮಾಡಿದ್ದ ಎಂದು ಉಲ್ಲೇಖಿಸಿದೆ. ಹಲವು ಹಿಂಸಾಚಾರಗಳಲ್ಲಿ ಆತ ಪಾಲ್ಗೊಂಡಿದ್ದ. ರಾಕೆಟ್​, ಗ್ರನೇಡ್​, ಸ್ಫೋಟಕ ಸೇರಿ ಹಲವಾರು ಸ್ಫೋಟಕ ದಾಳಿಯನ್ನೂ ನಡೆಸಿದ್ದ ಎಂದೂ ನಮೂದಿಸಿದೆ.

Intro:Body:

Zakir Musa

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.