ETV Bharat / bharat

ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಲ್ಲ: ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಸ್ಪಷ್ಟನೆ

ತಿರುಪತಿ ತಿಮ್ಮಪ್ಪನ ಆಸ್ತಿ, ಭಕ್ತರ ಕಾಣಿಕೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

yv-subbareddy-gives-clarity-on-sale-of-ttd-assets
ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಲ್ಲ; ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಸ್ಪಷ್ಟನೆ
author img

By

Published : May 28, 2020, 6:15 PM IST

ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ತಿರುಪತಿ ತಿಮ್ಮಪ್ಪನ ಆಸ್ತಿಗಳನ್ನು ಮಾರಾಟ ಮಾಡುವ ಸಂಬಂಧ ಆಂಧ್ರ ಸರ್ಕಾರ ಸಮಗ್ರ ವಿಚಾರಣೆ ನಡೆಸಬೇಕು ಎಂದು ಟಿಟಿಡಿ ಆಡಳಿತ ಮಂಡಳಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆಡಳಿತ ಮಂಡಳಿಯ ಸಭೆ ನಡೆಯಿತು. ಬಳಿಕ ಮಾತನಾಡಿದ ಅವರು, ಟಿಟಿಡಿ ಆಸ್ತಿಗಳ ಮಾರಾಟದ ಕುರಿತು ಆರೋಪಗಳು ಬರದಂತೆ ನೋಡಿಕೊಳ್ಳಬೇಕು ಎಂದರು. ಅಲ್ಲದೆ ಈ ಕುರಿತ ಟೀಕೆ ಟಿಪ್ಪಣಿಗಳನ್ನು ಖಂಡಿಸಿದ್ದಾರೆ. ಅತಿಥಿ ಗೃಹಗಳ ಹಂಚಿಕೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಮಂಡಳಿ ತೀರ್ಮಾನ ಮಾಡಿದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸಬೇಕು. ಡೊನೇಷನ್‌ ಸ್ಕೀಮ್‌ನಲ್ಲೂ ಅರ್ಹರಿಗೆ ಮಾತ್ರ ಸೌಲಭ್ಯ ಸಿಗುವಂತೆ ಮಾರ್ಗಸೂಚಿ ರೂಪಿಸಬೇಕು ಎಂದು ಸೂಚಿಸಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆ ನಂತರವಷ್ಟೇ ತಿಮ್ಮಪ್ಪನ ದರ್ಶನ:

ಕೋವಿಡ್‌-19 ನಿಂದಾಗಿ ವಿಧಿಸಿರುವ ಲಾಕ್‌ಡೌನ್‌ ಸಡಿಲಿಕೆ ಮಾಡಿದ ನಂತರವೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದು ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಅನುಮತಿ ಪಡೆದು ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ಲಾನ್‌ಲೈನ್‌ ದರ್ಶನಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದ್ದಾರೆ.

ಅನೂರ್ಜಿತ ಆಸ್ತಿಗಳೆಂದು ಪರಿಗಣಿಸಿ ತಮಿಳುನಾಡಿನ 25 ಆಸ್ತಿಗಳು ಸೇರಿದಂತೆ ದೇಶದ 50 ಕಡೆಗಳಲ್ಲಿನ ತಿರುಪತಿಯ ತಿಮ್ಮಪ್ಪನ ಸ್ಥಿರಾಸ್ತಿ ಮಾರಾಟಕ್ಕೆ ಟಿಟಿಡಿ ಮುಂದಾಗಿತ್ತು. ಭಕ್ತರು, ಧಾರ್ಮಿಕ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಮಣಿದ ಆಂಧ್ರ ಪ್ರದೇಶ ಸರ್ಕಾರ ಟಿಟಿಡಿ ನಿರ್ಧಾರಕ್ಕೆ ತಡೆ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.