ಮುಂಬೈ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದು, ಅವರಿಗೆ ಈಗಾಗಲೇ ಅಭಿನಂದನೆಗಳ ಸುರಿಮಳೆಯನ್ನೇ ಹರಿಸಲಾಗಿದೆ. ಇದರ ಮಧ್ಯೆ ವಿಶ್ ಮಾಡಿ ಟ್ವೀಟ್ ಮಾಡಿದ್ದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ಗೆ ಗಂಗೂಲಿ ವಿಶೇಷವಾಗಿ ಹಾಡಿ ಹೊಗಳಿದ್ದಾರೆ.
-
Thank u the best .. u have won India world cups .. time to do good things for the game now .. u r my super star .. god bless always
— Sourav Ganguly (@SGanguly99) October 18, 2019 " class="align-text-top noRightClick twitterSection" data="
">Thank u the best .. u have won India world cups .. time to do good things for the game now .. u r my super star .. god bless always
— Sourav Ganguly (@SGanguly99) October 18, 2019Thank u the best .. u have won India world cups .. time to do good things for the game now .. u r my super star .. god bless always
— Sourav Ganguly (@SGanguly99) October 18, 2019
ಬರುವ ಅಕ್ಟೋಬರ್ 23ರಂದು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಪದಗ್ರಹಣ ಮಾಡಲಿದ್ದಾರೆ. ಇವರಿಗೆ ವಿಶ್ ಮಾಡಿದ್ದ ಯುವಿ. ಅದ್ಭುತವಾದ ವ್ಯಕ್ತಿಯಿಂದ ಅತ್ಯದ್ಭುತವಾದ ಜರ್ನಿ. ಟೀಂ ಇಂಡಿಯಾ ಕ್ಯಾಪ್ಟನ್ ಹುದ್ದೆಯಿಂದ ಬಿಸಿಸಿಐ ಅಧ್ಯಕ್ಷನ ಪದವಿವರೆಗೂ ಓರ್ವ ಕ್ರಿಕೆಟರ್ ಆಗಿ ಇದೀಗ ಆಡಳಿತಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನೀವು ಎಲ್ಲ ಕ್ರಿಕೆಟರ್ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ 47 ವರ್ಷದ ಗಂಗೂಲಿ, ಥ್ಯಾಂಕ್ಯೂ ದಿ ಬೆಸ್ಟ್, ನೀನು ಭಾರತಕ್ಕಾಗಿ ವಿಶ್ವಕಪ್ ಗೆದ್ದು ಕೊಟ್ಟಿದ್ದೀಯಾ, ಇದೀಗ ಭಾರತೀಯ ಕ್ರಿಕೆಟ್ಗಾಗಿ ಮತ್ತಷ್ಟು ಸಹಾಯ ಮಾಡುವ ಸಮಯ. ಯೂ ಆರ್ ಮೈ ಸೂಪರ್ ಸ್ಟಾರ್, ದೇವರು ಒಳ್ಳೆಯದು ಮಾಡಲಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.