ETV Bharat / bharat

ಪಿಎಂ ಕೇರ್ಸ್​ಗೆ 50 ಲಕ್ಷ ನೀಡಿದ ಯುವಿ: ಕೊರೊನಾ ವಿರುದ್ಧ ಸಮರಕ್ಕೆ ಒಗ್ಗೂಡಲು ಮನವಿ - ಯುವರಾಜ್​ ಸಿಂಗ್​

ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರ್ಕಾರಕ್ಕೆ ಅನೇಕ ಗಣ್ಯರು ಸಹಾಯಹಸ್ತ ಚಾಚುತ್ತಿದ್ದಾರೆ. ಈ ಪಟ್ಟಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್ ಸೇರ್ಪಡೆಯಾಗಿದ್ದಾರೆ.

yuvraj singh
ಯುವರಾಜ್​ಸಿಂಗ್​
author img

By

Published : Apr 5, 2020, 8:30 PM IST

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು 50 ಲಕ್ಷ ರೂಪಾಯಿಯನ್ನು ಪಿಎಂ ಕೇರ್ಸ್​ ನಿಧಿಗೆ ನೀಡಿದ್ದಾರೆ. ಇದರ ಜೊತೆಗೆ ಕೊರೊನಾ ಮಹಾಮಾರಿಯ ವಿರುದ್ಧ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ಮನವಿ ಮಾಡಿದ್ದಾರೆ.

''ನಾವು ಒಗ್ಗಟ್ಟಾಗಿದ್ದಾಗ ಬಲಶಾಲಿಗಳಾಗುತ್ತೇವೆ. ಇಂದು ರಾತ್ರಿ 9 ಗಂಟೆಗೆ ನಾನು 9 ನಿಮಿಷಗಳ ಕಾಲ ಮೇಣದ ಬತ್ತಿ ಹಚ್ಚುತ್ತೇನೆ. ನೀವೂ ನನ್ನ ಜೊತೆ ಇರುತ್ತೀರಿ ಅಲ್ಲವೇ..?'' ಎಂದು ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿ ಜನರನ್ನು ಪ್ರೇರೇಪಿಸಿದ್ದಾರೆ.

ಜೊತೆಗೆ ''ನಾನು ಪಿಎಂ ಕೇರ್ಸ್​ಗೆ 50 ಲಕ್ಷ ರೂಪಾಯಿ ನೀಡಿದ್ದು ನೀವೂ ಕೂಡಾ ನಿಮ್ಮ ಕೈಲಾದ ಸಹಾಯ ಮಾಡಿ'' ಎಂದು ತಮ್ಮ ಟ್ವಿಟ ರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.