ETV Bharat / bharat

ಕೆಲಸದ ನಡುವೆ ಜೋಕ್ ಮಾಡಿದ ಗೆಳೆಯನನ್ನೇ ಕೊಂದ ಸಹೋದ್ಯೋಗಿ - ಯುವಕನ ಕೊಲೆ ಪ್ರಕರಣ

ಸಹೋದ್ಯೋಗಿಗಳಿಬ್ಬರ ನಡುವೆ ಜಗಳ ನಡೆದಿದ್ದು ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೆಲಸದ ನಡುವೆ ಜೋಕ್ ಸಹಿಸಲಾರದ ಆತನ ಸಹೋದ್ಯೋಗಿಯೇ ಹಲ್ಲೆ ಮಾಡಿ ತೀವ್ರ ಗಾಯಗೊಳಿಸಿದ್ದನು. ಪೆಟ್ಟು ತಿಂದ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

Young man killed by co-worker in Aligarh
ಸಾಂದರ್ಭಿಕ ಚಿತ್ರ
author img

By

Published : Oct 15, 2020, 8:20 PM IST

ಅಲಿಗಢ (ಉತ್ತರ ಪ್ರದೇಶ): ಯುವಕರಿಬ್ಬರ ನಡುವಿನ ವಾಗ್ವಾದ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಅಲಿಗಢ​ದ ಜರಾರಾ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಅಜಿತ್ ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ ಗ್ರಾಮದ ಫಾರ್ಮ್​ನಲ್ಲಿ ಈ ಘಟನೆ ನಡೆದಿದ್ದು, ಅಜಿತ್ ಹಾಸ್ಯ ಮಾಡಿದ್ದನ್ನು ಸಹಿಸದ ಆತನ ಸ್ನೇಹಿತನೊಬ್ಬ ಸಿಟ್ಟಿನಲ್ಲಿ ಆಯುಧಯೊಂದರಿಂದ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಅಜಿತ್ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.

ಡೈರಿ ಫಾರ್ಮ್​ನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೆಲ್ಲರೂ ಮಾತನಾಡುತ್ತ ಕುಳಿತಿದ್ದರು. ಜಾಲಿ ಮೂಡಿನಲ್ಲಿದ್ದ ಅಜಿತ್, ಕೆಲಸ ಬದಿಗಿಟ್ಟು ಸಹೋದ್ಯೋಗಿಗಳೊಂದಿಗೆ ಜೋಕ್ ಮಾಡುತ್ತಿದ್ದನು. ಇದನ್ನು ಸಹಿಸದ ಆತನ ಸ್ನೇಹಿತ ಪ್ರಮೋದ್, ಕೆಲಸದ ಬಗ್ಗೆ ಗಮನಿಸುವಂತೆ ತಿಳಿ ಹೇಳಿದ್ದನು. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಸಿಟ್ಟಿನ ಭರದಲ್ಲಿ ಪ್ರಮೋದ್, ಚೂಪಾದ ಆಯುಧದಿಂದ ಅಜಿತನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಅಜಿತನನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.