ETV Bharat / bharat

ಮಹಾಮಾರಿಗೆ ವಿಶ್ವದಲ್ಲಿ 1 ಮಿಲಿಯನ್ ಸಾವು: ಇದು ಕೇವಲ 'ಸಂಖ್ಯೆ'ಯಲ್ಲ, 'ಜೀವ'ಗಳ ಪ್ರಶ್ನೆ

ಜನರ ಜೀವನವನ್ನೇ ಅಲ್ಲೋಲ - ಕಲ್ಲೋಲಗೊಳಿಸಿದ ಕಿಲ್ಲರ್​ ಕೊರೊನಾ ಕೇವಲ 9 ತಿಂಗಳಲ್ಲಿ ದಶಲಕ್ಷ ಜನರ ಉಸಿರು ನಿಲ್ಲಿಸಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​
author img

By

Published : Sep 29, 2020, 4:01 PM IST

ಹೈದರಾಬಾದ್​: ಮಹಾಮಾರಿ ಕೊರೊನಾ ಪ್ರಪಂಚಕ್ಕೆ ಕಾಲಿಟ್ಟು 9 ತಿಂಗಳುಗಳು ಸಂದಿದ್ದು, ಈವರೆಗೆ ಒಂದು ಮಿಲಿಯನ್ (10,06,379) ಸೋಂಕಿತರನ್ನು ಬಲಿ ಪಡೆದಿದೆ. ವಿಶ್ವ ನಾಯಕರ ಸಂಕಲ್ಪವನ್ನು ಪರೀಕ್ಷಿಸಿದ ಈ ಕಣ್ಣಿಗೆ ಕಾಣದ ವೈರಸ್​ ಜನರ ಜೀವನವನ್ನೇ ಬದಲಾಯಿಸಿದೆ. ಒಟ್ಟು 3,35,49,873 ಜನರಿಗೆ ಕಿಲ್ಲರ್​ ಕೊರೊನಾ ವೈರಸ್​ ಅಂಟಿದ್ದು, ಇವರಲ್ಲಿ 2,48,78,124 ಮಂದಿ ಗುಣಮುಖರಾಗಿದ್ದಾರೆ.

ಸೋಂಕಿನಿಂದಾಗಿ ತಮ್ಮ ತಾಯಿಯನ್ನು ಕಳೆದುಕೊಂಡಿರುವ ಮಿಚಿಗನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಹೊವಾರ್ಡ್ ಮಾರ್ಕೆಲ್ ವಿಶ್ವದಲ್ಲಿ ಸಾವಿನ ನಾಗಾಲೋಟವನ್ನು ಕಂಡು ಮರುಗಿದ್ದಾರೆ. "ಇದು ಕೇವಲ ಸಂಖ್ಯೆಯಲ್ಲ. ಇದು ಮಾನವರು, ಅಂದರೆ ಜೀವಗಳು.. ಇದು ನಾವು ಪ್ರೀತಿಸುವ ಜನರು" ಎಂದು ಹೇಳಿದ್ದಾರೆ.

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 73,61,611 ಇದ್ದು, ಮೃತರ ಸಂಖ್ಯೆ 2,09,808ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನಕ್ಕೆ ಜಿಗಿದಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 61,43,019 ಹಾಗೂ ಮೃತರ ಸಂಖ್ಯೆ 96,351ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 47,48,327 ಪ್ರಕರಣಗಳು ಹಾಗೂ 1,42,161 ಸಾವುಗಳು ವರದಿಯಾಗಿದೆ.

4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 11,59,573 ಕೇಸ್​​ಗಳಿದ್ದು, 20,385 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್​ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟ ಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 85,384 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.