ಹೈದರಾಬಾದ್: 2019ರ ಡಿಸೆಂಬರ್ನಲ್ಲಿ ಮೊಟ್ಟಮೊದಲ ಕೋವಿಡ್ ಪ್ರಕರಣ ಚೀನಾದಲ್ಲಿ ಪತ್ತೆಯಾಗಿದ್ದರೆ, ಒಂದು ವರ್ಷದ ಬಳಿಕ ಅದೇ ಕೊರೊನಾ ವೈರಸ್ ಇಂಗ್ಲೆಂಡ್ನಲ್ಲಿ ಹೊಸ ರೂಪ ತಾಳಿದೆ. ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ರೂಪಾಂತರಿ ಕೊರೊನಾ ದಾಪುಗಾಲಿಟ್ಟಿದೆ.
ಈಗಾಗಲೇ ವಿಶ್ವದಾದ್ಯಂತ ಬರೋಬ್ಬರಿ 8,39,03,23 ಜನರಿಗೆ ಕಿಲ್ಲರ್ ಕೊರೊನಾ ವೈರಸ್ ಅಂಟಿದ್ದು, 18,27,789 ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 5,94,02,197 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 2,04,45,654 ಇದ್ದು, ಮೃತರ ಸಂಖ್ಯೆ 3,54,215ಕ್ಕೆ ಏರಿಕೆಯಾಗಿದೆ.
ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 1,02,86,709 ಕೇಸ್ಗಳು ಪತ್ತೆಯಾಗಿದ್ದು, 1,49,018 ಜನರು ವೈರಸ್ಗೆ ಬಲಿಯಾಗಿದ್ದಾರೆ. ಇಂದು ಭಾರತದಲ್ಲಿ ಮತ್ತೆ ನಾಲ್ವರಿಗೆ ಬ್ರಿಟನ್ ಸೋಂಕು ಅಂಟಿರುವುದು ದೃಢವಾಗಿದ್ದು, ಈವರೆಗೆ ದೇಶದಲ್ಲಿ ಒಟ್ಟು 29 ರೂಪಾಂತರಿ ಕೇಸ್ಗಳು ವರದಿಯಾಗಿವೆ. ಬೆಂಗಳೂರಿನ ಪ್ರಯೋಗಾಲದಲ್ಲಿ ಮೂವರ ಹಾಗೂ ಹೈದರಾಬಾದ್ ಲ್ಯಾಬ್ನಲ್ಲಿ ಒಬ್ಬರ ವರದಿ ಪಾಸಿಟಿವ್ ಬಂದಿದೆ.
ಓದಿ: ಕೋವಾಕ್ಸಿನ್ ಲಸಿಕೆ ತಯಾರಿ ಹಿಂದೆ ವಿಜ್ಞಾನಿಗಳ 9 ತಿಂಗಳ ಶ್ರಮವಿದೆ: ಸುಚಿತ್ರಾ ಎಲ್ಲ
ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 76,75,973 ಪ್ರಕರಣಗಳು ಹಾಗೂ 1,94,976 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 31,86,336 ಕೇಸ್ಗಳಿದ್ದು, 57,555 ಜನರು ಸಾವನ್ನಪ್ಪಿದ್ದಾರೆ.
ಒಟ್ಟು 218 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಅಮೆರಿಕ, ಬ್ರೆಜಿಲ್, ಭಾರತದ ಬಳಿಕ ಸಾವಿನ ಸಂಖ್ಯೆಯಲ್ಲಿ ಮೆಕ್ಸಿಕೋ, ಇಂಗ್ಲೆಂಡ್ ಹಾಗೂ ಇಟಲಿ ಕ್ರಮವಾಗಿ 4,5 ಹಾಗೂ 6ನೇ ಸ್ಥಾನದಲ್ಲಿವೆ.