ETV Bharat / bharat

2ನೇ ಮಹಾಯುದ್ಧದ ಸಮಯದಲ್ಲಿ ದೇಶದಲ್ಲುಂಟಾದ ಬರಗಾಲ ನೈಸರ್ಗಿಕವಲ್ಲ; ಅದು ಕೃತಕವಂತೆ? - Prime Minister Winston Churchil

ಎರಡನೆಯ ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಭಾರಿ ಪ್ರಮಾಣದ ಆಹಾರ ಮತ್ತು ಪ್ರಮುಖ ಅವಶ್ಯಕತೆಗಳನ್ನು ವಿತರಿಸುವುದು, ಅಕ್ಕಿ ಆಮದನ್ನು ನಿಲ್ಲಿಸುವುದು ಮತ್ತು ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಕ್ಷಾಮ ಘೋಷಿಸದಿರುವುದು ಇವು ಬರಗಾಲಕ್ಕೆ ಪ್ರಮುಖ ಕಾರಣಗಳೆಂದು ಹೇಳಲಾಗಿದೆ.

World War II: The artificial drought in Bengal
2ನೇ ಮಹಾಯುದ್ಧ ಸಮಯದ ಬರಗಾಲ ಕೃತಕ ಬರಗಾಲವಂತೆ...! ಅಂದರೆ?
author img

By

Published : Aug 24, 2020, 10:55 AM IST

Updated : Aug 24, 2020, 11:52 AM IST

1943 ರಲ್ಲಿ 2ನೇ ಮಹಾಯುದ್ಧ ಉಲ್ಬಣಗೊಳ್ಳುತ್ತಿದ್ದಾಗ ಬಂಗಾಳವು ಅತಿ ದೊಡ್ಡ ಬರಗಾಲಕ್ಕೀಡಾಗಿ ತನ್ನ 3 ದಶಲಕ್ಷ ಜನರ ಪ್ರಾಣವನ್ನು ಕಳೆದುಕೊಂಡಿತು. ಆದರೆ, ಈ ಬರಗಾಲ ಉಂಟಾಗಿದ್ದು ಪ್ರಧಾನಮಂತ್ರಿ ವಿನ್‌ಸ್ಟನ್ ಚರ್ಚಿಲ್ ನೇತೃತ್ವದ ಬ್ರಿಟಿಷ್ ಸರ್ಕಾರದ ನೀತಿಗಳಿಂದ. ಹೀಗಾಗಿ ಇದನ್ನು ಇತಿಹಾಸ ಪುಟಗಳಲ್ಲಿ ಕೃತಕ ಬರಗಾಲವೆಂದೇ ಸಂಬೋಧಿಸಲಾಗಿದೆ.

2019ರ ಅಧ್ಯಯನದಲ್ಲಿ ಕಂಡುಕೊಳ್ಳಲಾದ ಸತ್ಯಗಳ ಪ್ರಕಾರ, 2ನೇ ವಿಶ್ವಯುದ್ಧದ ವೇಳೆ ಉಂಟಾದ ಬರಗಾಲಕ್ಕೆ ಬ್ರಿಟಿಷ್ ಸರ್ಕಾರದ ಕಳಪೆ ನೀತಿಗಳೇ ಕಾರಣ ಎಂದು ದೂಷಿಸಲಾಗಿದೆ.

2019 ರಲ್ಲಿ, ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಎಂಬ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನವು 3 ದಶಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ 1943 ರ ಬಂಗಾಳ ಬರಗಾಲವು ಕೇವಲ ಬರಗಾಲದಿಂದಲ್ಲ. ಆದರೆ, ನಂತರದ ಭಾಗದಲ್ಲಿ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್​​ ನೀತಿಗಳ ವೈಫಲ್ಯದಿಂದಾಗಿ ಬಂದ ಆಪತ್ತು ಎಂದು ಸೂಚಿಸಿದೆ.

ಆ ಅವಧಿಯಲ್ಲಿ ಅಷ್ಟೊಂದು ಜನಸಂಖ್ಯೆ ನಾಶಕ್ಕೆ ನಿಖರವಾದ ಕಾರಣಗಳೇನು ಎಂದು ಕಂಡು ಹಿಡಿಯಲು ವಿಜ್ಞಾನಿಗಳು 1870 ರಿಂದ 2016 ರ ನಡುವೆ ಮಣ್ಣಿನ ತೇವಾಂಶದ ಮಟ್ಟವನ್ನು ವಿಶ್ಲೇಷಿಸಿದ್ದರು. ಅವರ ಪ್ರಕಾರ, ಈ ಅವಧಿಯಲ್ಲಿ ಆರು ಗಮನಾರ್ಹ ಕ್ಷಾಮಗಳು ಕಂಡು ಬಂದವು. ಆದರೆ, ಬಂಗಾಳ ಕ್ಷಾಮದ ಅವಧಿಯಲ್ಲಿ ಯಾವುದೇ ಬೆಳೆ ವೈಫಲ್ಯ ಅಥವಾ ಮಣ್ಣಿನ ತೇವಾಂಶದ ಕೊರತೆ ಕಂಡು ಬಂದಿಲ್ಲ.

ಎರಡನೇ ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಭಾರಿ ಪ್ರಮಾಣದ ಆಹಾರ ಮತ್ತು ಪ್ರಮುಖ ಅವಶ್ಯಕತೆಗಳನ್ನು ವಿತರಿಸುವುದು, ಅಕ್ಕಿ ಆಮದನ್ನು ನಿಲ್ಲಿಸುವುದು ಮತ್ತು ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಕ್ಷಾಮ ಪರಿಸ್ಥಿತಿಯನ್ನ ಘೋಷಿಸದಿರುವುದು ಬರಗಾಲಕ್ಕೆ ಪ್ರಮುಖ ಕಾರಣಗಳೆಂದು ವರದಿಯಲ್ಲಿ ಹೇಳಲಾಗಿದೆ.

ಅಧ್ಯಯನದ ಪ್ರಕಾರ, 1943 ರ ಬರಗಾಲದ ವೇಳೆಯ ಮರಣ ಪ್ರಮಾಣವನ್ನು ಉಲ್ಬಣಗೊಳಿಸಿದ ಮತ್ತೊಂದು ಅಂಶ ಎಂದರೆ ಜಪಾನಿನ ಬರ್ಮಾವನ್ನು(ಈಗಿನ ಮ್ಯಾನ್ಮಾರ್) ವಶಪಡಿಸಿಕೊಂಡಿದ್ದು, ಇದು ಭಾರತದಲ್ಲಿ ಭತ್ತದ ಆಮದಿನ ಪ್ರಮುಖ ಮೂಲವಾಗಿತ್ತು. ಈ ಹಿಂದೆ, ಮ್ಯಾನ್ಮಾರ್‌ನಿಂದ ಭತ್ತದ ಆಮದು ಮತ್ತು ಬ್ರಿಟಿಷ್ ಸರ್ಕಾರದ ಪರಿಹಾರ ಸಹಾಯದಿಂದಾಗಿ ಬರಗಾಲವು ಮಾರಣಾಂತಿಕವಾಗಿದ್ದರೂ ಹೆಚ್ಚಿನ ಹಾನಿ ಉಂಟುಮಾಡಿಲ್ಲ ಎಂದು ಅಧ್ಯಯನ ತಿಳಿಸಿದೆ.

ಬ್ರಿಟಿಷ್ ಸರ್ಕಾರವು ಹೇರಿದ ಯುದ್ಧಕಾಲದ ಧಾನ್ಯ ಆಮದು ನಿರ್ಬಂಧಗಳು ಬರಗಾಲದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅದು ಹೇಳಿದೆ. ಬರಗಾಲಕ್ಕೂ ಮಣ್ಣಿನ ತೇವಾಂಶದ ಬರ ಮತ್ತು ಬೆಳೆ ವೈಫಲ್ಯಗಳಿಗೆ ನೇರವಾಗಿ ಸಂಬಂಧವಿಲ್ಲದ ಏಕೈಕ ಕ್ಷಾಮ ಇದು "ಎಂದು ವಿಮಲ್ ಮಿಶ್ರಾ ಲೀಡ್ ಸಂಶೋಧಕರು ಹೇಳಿದ್ದಾರೆ.

ಮಧುಶ್ರೀ ಮುಖರ್ಜಿ ಅವರ 2011ರ ಚರ್ಚಿಲ್ಸ್ ಸೀಕ್ರೆಟ್ ವಾರ್: ದಿ ಬ್ರಿಟಿಷ್ ಎಂಪೈರ್ ಅಂಡ್ ದಿ ರಾವೇಜಿಂಗ್ ಆಫ್ ಇಂಡಿಯಾ ಪುಸ್ತಕದಲ್ಲಿ ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾರತದಿಂದ ಆಗುತ್ತಿದ್ದ ಭಾರಿ ಪ್ರಮಾಣದ ಆಹಾರ ರಫ್ತಿನಿಂದಾಗಿ ಬರಗಾಲ ಉಂಟಾಗಿದೆ ಎಂದು ಹೇಳುತ್ತಾರೆ.

ಆ ಸಮಯದಲ್ಲಿ ಬರಗಾಲದ ಬಗ್ಗೆ ಚರ್ಚಿಲ್ ಅವರ ಯುದ್ಧ ಕ್ಯಾಬಿನೆಟ್​ಗೆ ಎಚ್ಚರಿಕೆ ನೀಡಲಾಗಿದ್ದರೂ ಬ್ರಿಟಿಷ್ ಪ್ರಧಾನ ಮಂತ್ರಿ ಭಾರತೀಯ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಸಮಯ ಮತ್ತು ಸಂಪನ್ಮೂಲಗಳನ್ನು ವಿನಿಯೋಗಿಸಲು ಹಿಂಜರಿಯುತ್ತಿದ್ದರು. ಬದಲಾಗಿ ಅವರ ಮಿಲಿಟರಿ ಕಾರ್ಯಾಚರಣೆಯನ್ನು ಬಲಪಡಿಸುವುದರಲ್ಲಿ ಮತ್ತು ತಮ್ಮ ಮನೆಯಲ್ಲಿ ಷೇರುಗಳನ್ನು ಸಂಗ್ರಹಿಸುವುದರ ಕಡೆ ಗಮನ ಹರಿಸಿದರು.

ಬರಗಾಲ ಪ್ರಾರಂಭವಾಗುತ್ತಿದ್ದಂತೆಯೇ ಭಾರತವು ಜನವರಿ ಮತ್ತು ಜುಲೈ 1943ರ ನಡುವೆ 70,000 ಟನ್‌ಗಿಂತ ಹೆಚ್ಚು ಅಕ್ಕಿಯನ್ನು ರಫ್ತು ಮಾಡಿತ್ತು. ಇದು ಸುಮಾರು 400,000 ಜನರ ಹೊಟ್ಟೆಯನ್ನು ಪೂರ್ಣ ವರ್ಷ ತುಂಬಿಸಿ ಜೀವಂತವಾಗಿರಿಸಿಕೊಳ್ಳಲು ಸಾಕಾಗಿತ್ತು. ಶ್ರೀ ಚರ್ಚಿಲ್ ಅವರು ಹಡಗುಗಳ ಕೊರತೆಯನ್ನು ಉಲ್ಲೇಖಿಸಿ ಭಾರತಕ್ಕೆ ಆಹಾರವನ್ನು ರಫ್ತು ಮಾಡುವ ಮನವಿ ತಿರಸ್ಕರಿಸಿದರು. ಆಮದು ಕಡಿಮೆಯಾಗುತ್ತಿದ್ದಂತೆ ಬೆಲೆಗಳು ಹೆಚ್ಚಾದವು.

ಚರ್ಚಿಲ್​ ಸರ್ಕಾರದ ನಿರ್ಧಾರಗಳು ಕರಾವಳಿ ಬಂಗಾಳವನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದವು. ಇಲ್ಲಿನ ಬಂದರುಗಳಲ್ಲಿ ದೋಣಿಗಳನ್ನ ತಡೆದ ಸರ್ಕಾರ, ಅಕ್ಕಿ ದಾಸ್ತಾನನ್ನು ವಶ ಪಡೆಸಿಕೊಂಡಿತ್ತು.

ಚರ್ಚಿಲ್ ಅವರ ಕುಖ್ಯಾತ ಉಲ್ಲೇಖಗಳು

ಬರಗಾಲ ಅಥವಾ ಕ್ಷಾಮವಿರಲಿ ಭಾರತೀಯರು ಮೊಲಗಳಂತೆ ಸಂತಾನೋತ್ಪತ್ತಿ ಮಾಡುತ್ತಾರೆ. ಮಹಾತ್ಮ ಗಾಂಧಿ ಇನ್ನೂ ಜೀವಂತವಾಗಿದ್ದರೂ ಹಾಗಾದರೆ ಹೇಗೆ ಕೆಟ್ಟ ಕೊರತೆ ಉಂಟಾಗಲು ಸಾಧ್ಯ.

1943 ರಲ್ಲಿ ಬ್ರಿಟಿಷ್ ಯುದ್ಧ ಕ್ಯಾಬಿನೆಟ್ ಸಭೆಯಲ್ಲಿ ಭಾರತದ ರಾಜ್ಯ ಕಾರ್ಯದರ್ಶಿ ಮತ್ತು ಕ್ಷಾಮದ ಪರಿಸ್ಥಿತಿ ಕುರಿತು ಫೀಲ್ಡ್​ ಮಾರ್ಷಲ್ ಅವರ ಉಲ್ಲೇಖಗಳು

"ಭಾರತೀಯರಿಗಿಂತ ಗ್ರೀಕರು ಮತ್ತು ಸ್ವತಂತ್ರ ದೇಶಗಳನ್ನು ಉಳಿಸುವುದು ಹೆಚ್ಚು ಮುಖ್ಯವಾಗಿದೆ. ಮತ್ತು ಈ ದೇಶದಲ್ಲಿ ಸಾಗಣೆ ಒದಗಿಸಲು ಅಥವಾ ಷೇರುಗಳನ್ನು ಕಡಿಮೆ ಮಾಡಲು ಹಿಂಜರಿಕೆ ಇದೆ "ಎಂದು ಸರ್ ಫೀಲ್ಡ್ ಮಾರ್ಷಲ್ ಸರ್ ಆರ್ಚಿಬಾಲ್ಡ್ ವೇವೆಲ್ ತಮ್ಮ ಸಭೆಗಳ ಖಾತೆಯಲ್ಲಿ ಬರೆದಿದ್ದಾರೆ.

Last Updated : Aug 24, 2020, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.