ETV Bharat / bharat

ವಿಶೇಷ ಲೇಖನ; ಇಂದು (ಜು.11) ವಿಶ್ವ ಜನಸಂಖ್ಯಾ ದಿನ - ಆರೋಗ್ಯದ ಹಕ್ಕು

"2030 ರ ವೇಳೆಗೆ ಆರೋಗ್ಯಕರ ಜಗತ್ತಿನ ನಿರ್ಮಾಣಕ್ಕಾಗಿ ಸುಸ್ಥಿರ ಅಭಿವೃದ್ಧಿಯೊಂದಿಗೆ ಮುನ್ನಡೆಯುವುದು ವಿಶ್ವದ ಕಾರ್ಯಸೂಚಿಯಾಗಿದೆ. ಸುಸ್ಥಿರ ಅಭಿವೃದ್ಧಿಯು ಜನಸಂಖ್ಯಾ ಬೆಳವಣಿಗೆ, ಜನಸಂಖ್ಯೆಯ ಸರಾಸರಿ ವಯೋಮಾನ, ವಲಸೆ ಹಾಗೂ ನಗರೀಕರಣಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವುದನ್ನು ವಿಶ್ವ ಜನಸಂಖ್ಯಾ ದಿನಾಚರಣೆಯ ಇಂದು ನಾವೆಲ್ಲ ಗುರುತಿಸಬೇಕಿದೆ." ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅಂಟೋನಿಯೊ ಗುಟೆರಸ್ ಸಂದೇಶ ನೀಡಿದ್ದಾರೆ.

World Population Day 2020
World Population Day 2020
author img

By

Published : Jul 11, 2020, 11:47 AM IST

ಜನಸಂಖ್ಯೆ ಎಂಬುದು ಒಂದು ರಾಷ್ಟ್ರದ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ರಾಷ್ಟ್ರವೊಂದರ ಜನಸಂಖ್ಯೆ ಮಿತಿ ಮೀರಿ ಬೆಳೆಯಲಾರಂಭಿಸಿದಾಗ ರಾಷ್ಟ್ರದ ಅಭಿವೃದ್ಧಿ ದರ ಕುಂಠಿತವಾಗತೊಡಗುತ್ತದೆ. ಆದರೆ ಇತಿಮಿತಿಯಲ್ಲಿ ಜನಸಂಖ್ಯೆ ಇದ್ದು, ಆ ಎಲ್ಲ ಪ್ರಜೆಗಳು ರಾಷ್ಟ್ರ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ದೇಶ ಸಮೃದ್ಧವಾಗಿರುತ್ತದೆ. ಆದರೆ ಇತ್ತೀಚಿನ ದಶಕಗಳಲ್ಲಿ ವಿಶ್ವದ ಹಲವಾರು ರಾಷ್ಟ್ರಗಳು ಜನಸಂಖ್ಯಾ ಸ್ಫೋಟದಿಂದ ತತ್ತರಿಸುತ್ತಿವೆ. ಜನಸಂಖ್ಯಾ ಬೆಳವಣಿಗೆಯ ನಿಯಂತ್ರಣದ ಜಾಗೃತಿ ಮೂಡಿಸಲು ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುತ್ತದೆ.

1989 ರಿಂದ ವಿಶ್ವ ಜನಸಂಖ್ಯಾ ದಿನ ಆಚರಣೆ

ವಿಶ್ವದ ಜನಸಂಖ್ಯೆ ಮಿತಿಮೀರಿ ಹೆಚ್ಚಾಗುತ್ತಿರುವುದನ್ನು ತಡೆಯಲು ಕಾರ್ಯೋನ್ಮುಖವಾಗಿರುವ ವಿಶ್ವಸಂಸ್ಥೆಯು, ವಿಶ್ವ ಜನಸಂಖ್ಯಾ ದಿನ ಆಚರಿಸಲು ಹಾಗೂ ಆ ಮೂಲಕ ಜನಸಂಖ್ಯಾ ನಿಯಂತ್ರಣದ ಜಾಗೃತಿ ಮೂಡಿಸುವಂತೆ ಕರೆ ನೀಡಿತ್ತು. ಅದರಂತೆ 1989 ರ ಜುಲೈ 11 ರಂದು ಪ್ರಥಮ ಬಾರಿಗೆ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು.

ಸುಸ್ಥಿರ ಅಭಿವೃದ್ಧಿಯೇ ಗುರಿ...

"2030 ರ ವೇಳೆಗೆ ಆರೋಗ್ಯಕರ ಜಗತ್ತಿನ ನಿರ್ಮಾಣಕ್ಕಾಗಿ ಸುಸ್ಥಿರ ಅಭಿವೃದ್ಧಿಯೊಂದಿಗೆ ಮುನ್ನಡೆಯುವುದು ವಿಶ್ವದ ಕಾರ್ಯಸೂಚಿಯಾಗಿದೆ. ಸುಸ್ಥಿರ ಅಭಿವೃದ್ಧಿಯು ಜನಸಂಖ್ಯಾ ಬೆಳವಣಿಗೆ, ಜನಸಂಖ್ಯೆಯ ಸರಾಸರಿ ವಯೋಮಾನ, ವಲಸೆ ಹಾಗೂ ನಗರೀಕರಣಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವುದನ್ನು ವಿಶ್ವ ಜನಸಂಖ್ಯಾ ದಿನಾಚರಣೆಯ ಇಂದು ನಾವೆಲ್ಲ ಗುರುತಿಸಬೇಕಿದೆ." ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅಂಟೋನಿಯೊ ಗುಟೆರಸ್ ಸಂದೇಶ ನೀಡಿದ್ದಾರೆ.

ಸಂತಾನೋತ್ಪತ್ತಿಯ ನಿಯಂತ್ರಣ ಇಂದಿನ ಅಗತ್ಯ

ಜನಸಂಖ್ಯೆಯ ಬೆಳವಣಿಗೆ ಮತ್ತು ಅದರ ನಿಯಂತ್ರಣ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:

* ಕುಟುಂಬ ಯೋಜನೆ

* ಲಿಂಗ ಸಮಾನತೆ

* ಬಾಲ್ಯ ವಿವಾಹ

* ಮಾನವ ಹಕ್ಕುಗಳು

* ಆರೋಗ್ಯದ ಹಕ್ಕು

* ಶಿಶು ಆರೋಗ್ಯ

ಒಟ್ಟಾರೆಯಾಗಿ ವಿಶ್ವ ಜನಸಂಖ್ಯಾ ದಿನಾಚರಣೆಯು ಸಂತಾನೋತ್ಪತ್ತಿ ನಿಯಂತ್ರಣದ ಮೇಲೆಯೇ ಕೇಂದ್ರೀಕೃತವಾಗಿದೆ.

2020ರ ಘೋಷವಾಕ್ಯ..

ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡುವುದು ಹಾಗೂ ಕೋವಿಡ್ ಬಿಕ್ಕಟ್ಟಿನ ಮಧ್ಯೆ ಮಹಿಳೆಯರು, ಯುವತಿಯರ ಆರೋಗ್ಯಕ್ಕೆ ಅಪಾಯ ಎದುರಾಗದಂತೆ ಜಾಗ್ರತೆ ವಹಿಸುವುದು 2020ರ ವಿಶ್ವಜನಸಂಖ್ಯಾ ದಿನಾಚರಣೆಯ ಘೋಷವಾಕ್ಯವಾಗಿದೆ.

ಕೋವಿಡ್​-19 ಜಗತ್ತಿನ ಎಲ್ಲ ದೇಶಗಳ ಜನರ ಮೇಲೂ ಪರಿಣಾಮ ಬೀರಿದೆ. ಆದರೆ ಇದರ ಪರಿಣಾಮ ಎಲ್ಲರಿಗೂ ಒಂದೇ ತೆರನಾಗಿಲ್ಲ. ಕೆಲವರು ಕೋವಿಡ್​ನಿಂದ ಅತಿ ಹೆಚ್ಚು ಬಾಧಿತರಾಗಿದ್ದಾರೆ. ವಿಶ್ವದ ಅನೇಕ ದೇಶಗಳಲ್ಲಿ ಕೋವಿಡ್​ನಿಂದಾಗಿ ಸರಕು ಸಾಗಣೆ ವ್ಯತ್ಯಯವಾಗಿರುವುದರಿಂದ ಗರ್ಭನಿರೋಧಕ ಮಾತ್ರೆಗಳು ಹಾಗೂ ಸಾಧನಗಳು ಮಹಿಳೆಯರಿಗೆ ಸುಲಭವಾಗಿ ಸಿಗುತ್ತಿಲ್ಲ. ಇದರಿಂದ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಾಗುತ್ತಿವೆ.

ಲಾಕ್​ಡೌನ್​ ಇನ್ನಾರು ತಿಂಗಳು ಮುಂದುವರೆದಲ್ಲಿ ವಿಶ್ವದ ಕೆಳ ಹಾಗೂ ಮಧ್ಯಮ ವರ್ಗದ 47 ಮಿಲಿಯನ್​ ಮಹಿಳೆಯರಿಗೆ ಗರ್ಭನಿರೋಧಕ ಸಾಧನಗಳು ಸಿಗದಂತಾಗಿ ಸುಮಾರು 7 ಮಿಲಿಯನ್​ ಅನಪೇಕ್ಷಿತ ಗರ್ಭಧಾರಣೆಗಳಿಗೆ ಕಾರಣವಾಗಬಹುದಾಗಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ದೇಶಗಳು

1. ಚೀನಾ1394015977
2. ಭಾರತ1326093247
3. ಅಮೆರಿಕ332639102
4. ಇಂಡೋನೇಶಿಯಾ267026366
5. ಪಾಕಿಸ್ತಾನ 233500636
6. ನೈಜೀರಿಯಾ214028302
7. ಬ್ರೆಜಿಲ್211715973
8. ಬಾಂಗ್ಲಾ ದೇಶ162650853
9. ರಷ್ಯಾ141722205
10. ಮೆಕ್ಸಿಕೊ 128649565

ವಿಶ್ವಸಂಸ್ಥೆಯ ಅಧ್ಯಯನದ ಪ್ರಕಾರ ಮುಂದಿನ 30 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 2 ಬಿಲಿಯನ್​​ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಪ್ರಸ್ತುತ ವಿಶ್ವದ ಜನಸಂಖ್ಯೆ 7.7 ಬಿಲಿಯನ್​ ಆಗಿದ್ದು, 2050 ರ ವೇಳೆಗೆ ಇದು 9.7 ಬಿಲಿಯನ್​ಗೆ ತಲುಪಬಹುದು.

ಜಗತ್ತಿನ ವಿವಿಧ ಭಾಗಗಳಲ್ಲಿ ಪ್ರತಿ ಮಹಿಳೆಯ ಸರಾಸರಿ ಸಂತಾನೋತ್ಪತ್ತಿ ಪ್ರಮಾಣ

Average number of live births per woman
ಪ್ರದೇಶ1990201920502100
ಜಗತ್ತು3.22.52.21.9
ಉಪ-ಸಹಾರಾ ಆಫ್ರಿಕಾ6.34.63.12.1
ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ4.42.92.21.9
ಮಧ್ಯ ಹಾಗೂ ದಕ್ಷಿಣ ಏಷ್ಯಾ4.32.41.91.7
ಪೂರ್ವ ಹಾಗೂ ಆಗ್ನೇಯ ಏಷ್ಯಾ2.51.81.81.8
ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳು3.321.71.7
ಆಸ್ಟ್ರೇಲಿಯಾ, ನ್ಯೂಜೆಲೆಂಡ್​1.91.81.71.7
ಓಶಿಯಾನಿಯಾ* 4.53.42.62
ಯುರೋಪ್ ಮತ್ತು ಉತ್ತರ ಅಮೆರಿಕ1.81.71.71.8
ಅತಿ ಹಿಂದುಳಿದ ದೇಶಗಳು63.92.82.1
ಗಡಿ ಮುಚ್ಚಿದ ಅಭಿವೃದ್ಧಿಶೀಲ ದೇಶಗಳು5.73.92.72
ಚಿಕ್ಕ ದ್ವೀಪ ರಾಜ್ಯಗಳು3.22.42.11.8

(Data source: United Nations, Department of Economic and Social Affairs, Population Division (2019). World Population Prospects 2019)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.