ETV Bharat / bharat

ಇಂದು‘ವಿಶ್ವ ರೋಗಿಗಳ ಸುರಕ್ಷತಾ ದಿನ’::ರೋಗಿಯ ಸುರಕ್ಷತೆಗೆ ಏನೆಲ್ಲಾ ಮಾಡಬಹುದು ? - ಆರೋಗ್ಯ ರಕ್ಷಣೆ

ರೋಗಿಗಳ ಸುರಕ್ಷತೆಗೆ ಬದ್ಧತೆಯನ್ನು ತೋರಿಸಲು ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಆಚರಿಸಲಾಗುತ್ತಿದ್ದು, ರೋಗಿಗಳು, ಕುಟುಂಬಗಳು, ಆರೈಕೆ ಮಾಡುವವರು, ಸಮುದಾಯಗಳು, ಆರೋಗ್ಯ ಕಾರ್ಯಕರ್ತರು, ಆರೋಗ್ಯ ರಕ್ಷಣೆ ನಾಯಕರು ಮತ್ತು ನೀತಿ ನಿರೂಪಕರನ್ನು ಈ ದಿನ ಒಟ್ಟುಗೂಡಿಸಲಿದೆ.

ವಿಶ್ವ ರೋಗಿಗಳ ಸುರಕ್ಷತಾ ದಿನ
ವಿಶ್ವ ರೋಗಿಗಳ ಸುರಕ್ಷತಾ ದಿನ
author img

By

Published : Sep 17, 2020, 6:01 AM IST

ಪ್ರಿಮಮ್ ನಾನ್ ನೊಸೆರೆಯ ಮೊದಲ ತತ್ವವೆಂದರೆ ರೋಗಿಯ ಆರೋಗ್ಯ ರಕ್ಷಣೆ. ರೋಗಿಯ ಆರೋಗ್ಯ ತಪಾಸಣೆ ಮಾಡುವಾಗ ಯಾವುದೇ ತೊಂದರೆ ಆಗದಂತೆ ತಡೆಯುವುದು ಇದರ ಉದ್ದೇಶವಾಗಿದೆ. ರೋಗಿಗಳ ಸುರಕ್ಷತೆಯನ್ನು ಜಾಗತಿಕ ಆರೋಗ್ಯ ಆದ್ಯತೆಯೆಂದು ಗುರುತಿಸಿ, 72ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಎಲ್ಲಾ 194 ಡಬ್ಲ್ಯುಎಚ್‌ಒ ಸದಸ್ಯ ರಾಷ್ಟ್ರಗಳು, 2019 ರ ಮೇ ತಿಂಗಳಲ್ಲಿ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು (ರೆಸಲ್ಯೂಶನ್ ಡಬ್ಲ್ಯುಎಚ್‌ಎ 72.6) ಆಚರಿಸಲು ಅನುಮೋದಿಸಿದವು. ಬಳಿಕ ಪ್ರತಿವರ್ಷ ಸೆಪ್ಟೆಂಬರ್ 17ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ರೋಗಿಗಳ ಸುರಕ್ಷತಾ ದಿನದ ಪ್ರಮುಖ ಉದ್ದೇಶವೆಂದರೇ, ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರು ತೊಡಗಿಕೊಳ್ಳುವಂತೆ ಮಾಡುವುದು.

ರೋಗಿಯ ಸುರಕ್ಷತೆ:

ರೋಗಿಗೆ ಚಿಕಿತ್ಸೆಯನ್ನು ನೀಡುವಾಗ ಸುರಕ್ಷಿತವಾಗಿ ನೀಡುವುದು, ಜೊತೆಗೆ ಆಗಬಹುದಾದ ಹಾನಿಯನ್ನು ತಡೆಗಟ್ಟುವುದು, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಅನಗತ್ಯ ಹಾನಿಯ ಅಪಾಯವನ್ನು ತಗ್ಗಿಸುವುದು.

ಆರೈಕೆ ಮಾಡುವ ಪ್ರಕ್ರಿಯೆಯ ಪ್ರತಿಯೊಂದು ಹಂತವು ಒಂದು ನಿರ್ದಿಷ್ಟ ಮಟ್ಟದ ಅಂತರ್ಗತ ಅಸುರಕ್ಷಿತತೆಯನ್ನು ಹೊಂದಿರುತ್ತದೆ.

ಸ್ಪಷ್ಟ ನೀತಿಗಳು, ಸಾಂಸ್ಥಿಕ ನಾಯಕತ್ವದ ಸಾಮರ್ಥ್ಯ, ಸುರಕ್ಷತಾ ಸುಧಾರಣೆಗಳನ್ನು ಹೆಚ್ಚಿಸುವ ದತ್ತಾಂಶ, ನುರಿತ ಆರೋಗ್ಯ ವೃತ್ತಿಪರರು ಮತ್ತು ಅವರ ಆರೈಕೆಯಲ್ಲಿ ರೋಗಿಗಳು ಪರಿಣಾಮಕಾರಿಯಾಗಿ ಒಳಗೊಳ್ಳುವುದು.

ರೋಗಿಯ ಸುರಕ್ಷತೆಗೆ ಇರುವ ಸಮಸ್ಯೆಗಳು:

ರೋಗನಿರ್ಣಯದ ದೋಷಗಳು: ತಪ್ಪು ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ರೋಗಿಗೆ ಚಿಕಿತ್ಸೆ ನೀಡುವುದು.

ಆರೋಗ್ಯ-ಸ್ವಾಧೀನಪಡಿಸಿಕೊಂಡಿರುವ ಸೋಂಕುಗಳು: ರೋಗಿಯು ಆಸ್ಪತ್ರೆಗೆ ದಾಖಲಾಗುವ ಮೊದಲೇ ಕೆಲವು ಸೋಂಕುಗಳು ಆತನ ದೇಹವನ್ನು ಸ್ವಾಧೀನ ಪಡಿಸಿಕೊಂಡಿರುತ್ತವೆ. ಈ ವೇಳೆ ರೋಗಿ ತಪ್ಪಾದ ಅಥವಾ ಸರಿಯಾದ ಸಮಯಕ್ಕೆ ಔಷಧಿ ಪಡೆಯದಿದ್ದಾಗ, ಅಲ್ಲದೇ ಸರಿಯಾದ ಪ್ರಮಾಣದಲ್ಲಿ ಔಷಧಿ ಪಡೆಯದಿದ್ದಾಗ ಆತನ ದೇಹದಲ್ಲಿ ತೊಂದರೆಗಳು ಉಂಟಾಗುತ್ತವೆ.

ಮರುಪರಿಶೀಲನೆಗಳು: ರೋಗಿಯು ಡಿಸ್ಚಾರ್ಜ್ ಆಗಿ 30 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೆ ಆಸ್ಪತ್ರೆಗೆ ಸೇರಬೇಕಾದ್ದಲ್ಲಿ, ರೋಗಿಯ ಖಾಯಿಲೆ ಕುರಿತ ಇತಿಹಾಸ ತಿಳಿಯುವುದು ಅತ್ಯಗತ್ಯ.

ತಪ್ಪಾದ ಸೈಟ್ ಶಸ್ತ್ರಚಿಕಿತ್ಸೆ: ತಪ್ಪಾದ ಸೈಟ್ ಶಸ್ತ್ರಚಿಕಿತ್ಸೆ ಎಂದರೆ ದೇಹದ ಒಂದು ಭಾಗಕ್ಕೆ ತಪ್ಪಾಗಿ ಅಥವಾ ತಪ್ಪಾದ ವ್ಯಕ್ತಿಯ ಮೇಲೆ ಆಪರೇಷನ್​ ಮಾಡುವುದು.

ಸಂವಹನ: ಆಸ್ಪತ್ರೆಯ ನೌಕರರ ನಡುವೆ, ರೋಗಿ ಮತ್ತು ವೈದ್ಯರ ನಡುವೆ ಸರಿಯಾದ ಸಂವಹನ ಇರಬೇಕು.

ಥೀಮ್ 2020:

ವಿಶ್ವ ರೋಗಿಗಳ ಸುರಕ್ಷತಾ ದಿನದ ಉದ್ದೇಶವೆಂದರೇ ಆರೋಗ್ಯ ಕಾರ್ಯಕರ್ತರ ಸುರಕ್ಷತೆ: ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡುವುದು. ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ವೈದ್ಯರು, ದಾದಿಯರು ಮತ್ತು ಇತರ ಮುಂಚೂಣಿಯ ಆರೋಗ್ಯ ರಕ್ಷಣಾ ಕಾರ್ಯಕರ್ತರನ್ನು ಅನೇಕ ದೇಶಗಳಲ್ಲಿ ವೀರರಂತೆ ಪರಿಗಣಿಸಲಾಗುತ್ತಿದೆ. ಪ್ರತಿಯೊಬ್ಬರೂ ಅವರ ಪ್ರಯತ್ನ ಮತ್ತು ಕೊಡುಗೆಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಆರೋಗ್ಯ-ಆರೈಕೆ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಹಲವು ದಾಳಿಗಳನ್ನು ಎದುರಿಸುತ್ತಿದ್ದಾರೆ.

ಮೆಕ್ಸಿಕೊದಲ್ಲಿ ದಾದಿಯರು ಮತ್ತು ವೈದ್ಯರನ್ನು ಮೊಟ್ಟೆಗಳಿಂದ ಹೊಡೆದು ದೈಹಿಕವಾಗಿ ಹಲ್ಲೆ ಮಾಡಲಾಗಿದೆ. ಫಿಲಿಪೈನ್ಸ್‌ನಲ್ಲಿ, ನರ್ಸ್‌ಗೆ ಮುಖದ ಮೇಲೆ ಬ್ಲೀಚ್ ಸುರಿದು ಪುರುಷರು ಹಲ್ಲೆ ಮಾಡಿದ್ದು, ಇದರಿಂದ ಅವರ ದೃಷ್ಟಿಗೆ ಹಾನಿಯಾಗಿದೆ. ಭಾರತದಾದ್ಯಂತ ಆರೋಗ್ಯ ಕಾರ್ಯಕರ್ತರ ಮೇಲೆ ಕಲ್ಲು ಎಸೆಯುವುದು, ಉಗುಳುವುದು, ಬೆದರಿಕೆ ಹಾಕುವುದು ಮತ್ತು ಅವರ ಮನೆಗಳಿಂದ ಹೊರಹಾಕಲಾಗುತ್ತಿದೆ. ಯುಎಸ್ಎ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಇವುಗಳಲ್ಲಿ ಕೆಲವೇ ಉದಾಹರಣೆಗಳಿವೆ.

ಈ ಅಭೂತಪೂರ್ವ ಕಾಲದಲ್ಲಿ ಸೆಪ್ಟೆಂಬರ್‌ನಲ್ಲಿ ಈ ದಿನವನ್ನು ಆಚರಿಸಲು WHOಯಿಂದ ಅನೇಕ ಕಾರ್ಯಕ್ರಮಗಳನ್ನು ಮತ್ತು ಇತರ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ ಸ್ಮಾರಕಗಳ ಮುಂದೆ ಕ್ಯಾಂಡಲ್​ ಹಚ್ಚುವುದು, ಸಾರ್ವಜನಿಕ ಸ್ಥಳಗಳನ್ನು ಕಿತ್ತಳೆ ಬಣ್ಣದಲ್ಲಿ ಜಾಗತಿಕ ಸಹಿ ಅಭಿಯಾನ ನಡೆಸುವುದು. ಈ ಮೂಲಕ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುವುದು.

ಘೋಷಣೆ: ಸುರಕ್ಷಿತ ಆರೋಗ್ಯ ಕಾರ್ಯಕರ್ತರು, ಸುರಕ್ಷಿತ ರೋಗಿಗಳು

ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಬಗ್ಗೆ ಧ್ವನಿ ಎತ್ತಿ

ಈ ದಿನದ ಪ್ರಾಮುಖ್ಯತೆ: Who ಪ್ರಕಾರ _

ಕಡಿಮೆ ಮತ್ತು ಮಧ್ಯಮ-ಆದಾಯ ದೇಶಗಳ ಆಸ್ಪತ್ರೆಗಳಲ್ಲಿ (ಭಾರತವೂ ಸೇರಿದೆ) ಅಸುರಕ್ಷಿತ ಆರೈಕೆಯಿಂದಾಗಿ ಪ್ರತಿವರ್ಷ 134 ಮಿಲಿಯನ್ ರೋಗಿಗಳ ಸಾವು ಸಂಭವಿಸುತ್ತಿದೆ. ಇದು ವಾರ್ಷಿಕವಾಗಿ 2.6 ಮಿಲಿಯನ್ ಸಾವುಗಳಿಗೆ ಕಾರಣವಾಗಿದೆ.

10 ರೋಗಿಗಳಲ್ಲಿ 4 ರೋಗಿಗಳು ಪ್ರಾಥಮಿಕ ಮತ್ತು ಆಂಬ್ಯುಲೇಟರಿ ಸೆಟ್ಟಿಂಗ್‌ಗಳಲ್ಲಿ ಹಾನಿಗೊಳಗಾಗುತ್ತಾರೆ. ಈ ಸೆಟ್ಟಿಂಗ್‌ಗಳಲ್ಲಿ ಶೇ.80ರಷ್ಟು ಹಾನಿಯನ್ನು ತಪ್ಪಿಸಬಹುದು.

ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಬದಲಾವಣೆಯನ್ನು ತಂದಿದೆ. ಈ ಸಂಕೀರ್ಣತೆಯು ರೋಗಿಯನ್ನು ಸುರಕ್ಷಿತವಾಗಿರಿಸಲು, ಆರೋಗ್ಯ ಸಿಬ್ಬಂದಿಗೆ ಅನೇಕ ಸವಾಲುಗಳನ್ನು ತರುತ್ತದೆ. ಆದರೂ, ಬಹಳಷ್ಟು ಜನರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ಬಾರಿ ತಪ್ಪಾಗಬಹುದು.

ಆಸ್ಪತ್ರೆ ಎಂಬುದು 24 ಗಂಟೆಯೂ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುವ ಸ್ಥಳವಾಗಿದೆ. ರೋಗಿಗಳ ಆರೈಕೆ ಸುರಕ್ಷತೆಯ ಪ್ರತಿಯೊಂದು ಪ್ರಕ್ರಿಯೆಯು ಒಂದು ನಿರ್ದಿಷ್ಟ ಮಟ್ಟದ ಅನಿಶ್ಚಿತತೆಯನ್ನು ಒಳಗೊಂಡಿರುತ್ತದೆ.

ರೋಗಿಗಳ ಸುರಕ್ಷತೆಯ ಜಾಗತಿಕ ತಿಳುವಳಿಕೆಯನ್ನು ಹೆಚ್ಚಿಸುವುದು, ಆರೋಗ್ಯ ರಕ್ಷಣೆಯ ಸುರಕ್ಷತೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಮತ್ತು ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ರೋಗಿಗಳ ಹಾನಿಯನ್ನು ಕಡಿಮೆ ಮಾಡಲು ಜಾಗತಿಕ ಕ್ರಮಗಳನ್ನು ಉತ್ತೇಜಿಸುವುದು ವಿಶ್ವ ರೋಗಿಗಳ ಸುರಕ್ಷತಾ ದಿನದ ಒಟ್ಟಾರೆ ಉದ್ದೇಶವಾಗಿದೆ.

ಹೆಚ್ಚಿನ ಆದಾಯದ ದೇಶಗಳಲ್ಲಿ ಆಸ್ಪತ್ರೆಯ ಆರೈಕೆ ಪಡೆಯುವಾಗ ಪ್ರತಿ 10 ರೋಗಿಗಳಲ್ಲಿ ಒಬ್ಬರಿಗೆ ಹಾನಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಾನಿಯು ಹಲವಾರು ಪ್ರತಿಕೂಲ ಘಟನೆಗಳಿಂದ ಉಂಟಾಗಬಹುದು. ಅವುಗಳಲ್ಲಿ ಸುಮಾರು ಶೇ.50 ರಷ್ಟು ತಡೆಗಟ್ಟಬಹುದು.

ಪ್ರತಿವರ್ಷ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿನ (ಎಲ್‌ಎಂಐಸಿ) ಆಸ್ಪತ್ರೆಗಳಲ್ಲಿ 134 ಮಿಲಿಯನ್ ಪ್ರತಿಕೂಲ ಘಟನೆಗಳು ಸಂಭವಿಸುತ್ತವೆ. ಅಸುರಕ್ಷಿತ ಕಾಳಜಿಯಿಂದಾಗಿ, 2.6 ಮಿಲಿಯನ್ ಸಾವುಗಳು ಸಂಭವಿಸುತ್ತವೆ.

ಮತ್ತೊಂದು ಅಧ್ಯಯನದ ಪ್ರಕಾರ ಅಸುರಕ್ಷಿತ ಆರೈಕೆಯ ಪರಿಣಾಮವಾಗಿ ಉಂಟಾಗುವ ಎಲ್ಲಾ ಪ್ರತಿಕೂಲ ಘಟನೆಗಳಲ್ಲಿ ಮೂರನೇ ಎರಡರಷ್ಟು ಅಂಗವೈಕಲ್ಯ ಹಾಗೂ ಸಾವಿಗೆ ಕಾರಣವಾಗುತ್ತದೆ.

ಜಾಗತಿಕವಾಗಿ, ಪ್ರಾಥಮಿಕ ಮತ್ತು ಹೊರರೋಗಿಗಳ ಆರೋಗ್ಯ ರಕ್ಷಣೆಯಲ್ಲಿ 10 ರಲ್ಲಿ 4 ರೋಗಿಗಳಿಗೆ ಹಾನಿಯಾಗಿದೆ. ಶೇ.80ರವರೆಗೆ ಹಾನಿಯನ್ನು ತಡೆಯಬಹುದು.

2019 ರಲ್ಲಿ ಆರೋಗ್ಯ ರಕ್ಷಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ 1,203 ಸಂಘರ್ಷ ಘಟನೆಗಳನ್ನು ಸುರಕ್ಷಿತ ಸಂರಕ್ಷಣೆ (ಎಸ್‌ಎಚ್‌ಸಿಸಿ) ಎಂದು ದಾಖಲಿಸಲಾಗಿದೆ.

ಏಪ್ರಿಲ್ 15 ರ ಬುಧವಾರ ಆ್ಯಂಬುಲೆನ್ಸ್​​ ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ಜನಸಮೂಹ ಕಲ್ಲು ತೂರಾಟ ನಡೆಸಿತ್ತು. ಮೃತ ಕೋವಿಡ್​-19 ರೋಗಿಯ ಪ್ರಾಥಮಿಕ ಸಂಪರ್ಕಿತರನ್ನು ಕರೆದೊಯ್ಯಲು ಬಂದಾಗ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತಂಡದ ಮೇಲೆ ಮೊರಾದಾಬಾದ್ ನವಾಬಗಂಜ್ ಪ್ರದೇಶದಲ್ಲಿ ಹಲ್ಲೆ ನಡೆಸಲಾಗಿತ್ತು.

ಏಪ್ರಿಲ್ 14 ರ ಮಂಗಳವಾರ ದೆಹಲಿಯ ಲೋಕ ನಾಯಕ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರು ಶಸ್ತ್ರಚಿಕಿತ್ಸಕ ವಾರ್ಡ್ ಒಳಗೆ, ರೋಗಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಇಬ್ಬರು ಮಹಿಳಾ ವೈದ್ಯರ ಮೇಲೆ ಏಪ್ರಿಲ್ 8 ರ ಬುಧವಾರ ತಡರಾತ್ರಿ ಅವರ ನೆರೆಹೊರೆಯವರು ಹಲ್ಲೆ ಮಾಡಿದ್ದಾರೆ. ಅವರು ಗೌತಮ್ ನಗರ ಪ್ರದೇಶದಲ್ಲಿ ಕೋವಿಡ್​​-19 ಅನ್ನು "ಹಬ್ಬಿದ್ದಾರೆ" ಎಂದು ಆರೋಪಿಸಲಾಗಿತ್ತು.

ಏಪ್ರಿಲ್ 1 ರ ಬುಧವಾರ ಹೈದರಾಬಾದ್‌ನ ಗಾಂಧಿ ವೈದ್ಯಕೀಯ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಮೇಲೆ ಕೊರೊನಾ ವೈರಸ್​ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಹಲ್ಲೆ ನಡೆಸಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ, ಮಾರ್ಚ್ 23 ರಂದು ನ್ಯೂ ಸಿವಿಲ್ ಆಸ್ಪತ್ರೆಯ ಆರೋಗ್ಯ ವೃತ್ತಿಪರರೊಬ್ಬರು ತಮ್ಮ ಅಪಾರ್ಟ್‌ಮೆಂಟ್ ನಿವಾಸಿಗಳು ಕೆಲಸಕ್ಕೆ ಪ್ರಯಾಣಿಸುತ್ತಿರುವುದಾಗಿ ಆರೋಪಿಸಿ ಬೆದರಿಕೆ ಹಾಕಿದ್ದರು.

ಏಪ್ರಿಲ್ 14 ರಂದು, ಹೈದರಾಬಾದ್​ನ ಉಸ್ಮೇನಿಯಾ ಜನರಲ್ ಆಸ್ಪತ್ರೆಯ ವೈದ್ಯರೊಬ್ಬರು ಜಗಳವಾಡಿದ ನಂತರ ಆಸ್ಪತ್ರೆಯಲ್ಲಿ ಮೂಲೆಗುಂಪಾಗಿರುವ ವ್ಯಕ್ತಿಯ ಮಗನ ಮೇಲೆ ಹಲ್ಲೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.