ETV Bharat / bharat

ಜಗತ್ತಿನಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು, 4 ಲಕ್ಷಕ್ಕೂ ಹೆಚ್ಚು ಬಲಿ - ಪ್ರಪಂಚದಾದ್ಯಂತ ಕೊರೊನಾ ಕೇಸ್​

ಪ್ರಪಂಚದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 75,83,833ಕ್ಕೆ ಏರಿಕೆಯಾಗಿದ್ದು, 4,23,081 ಮಂದಿ ವೈರಸ್​ಗೆ ಬಲಿಯಾಗಿದ್ದಾರೆ.

Global COVID-19 tracker
ಕೊರೊನಾ
author img

By

Published : Jun 12, 2020, 11:53 AM IST

ಹೈದರಾಬಾದ್​: ಕೊರೊನಾ ಅಬ್ಬರಕ್ಕೆ ಜಗತ್ತು ತತ್ತರಿಸಿದ್ದು, ಸೋಂಕಿತರ ಸಂಖ್ಯೆ 75,83,833ಕ್ಕೆ ಏರಿಕೆಯಾಗಿದೆ. 4,23,081 ಮಂದಿ ವೈರಸ್​ಗೆ ಬಲಿಯಾಗಿದ್ದಾರೆ. 38,35,104 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ.

ಕೋವಿಡ್​ ಕೇಂದ್ರಬಿಂದುವಾಗಿದ್ದ ಚೀನಾದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದ್ದು, ಹೊಸದಾಗಿ 7 ಕೇಸ್​ಗಳು ಪತ್ತೆಯಾಗಿವೆ. ಯಾವುದೇ ಸಾವು ವರದಿಯಾಗಿಲ್ಲ. ಈ ಪೈಕಿ ಆರು ಸೋಂಕಿತರು ವಿದೇಶದಿಂದ ಬಂದ ಚೀನಾ ಪ್ರಜೆಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ​ ಕೇಸ್​ಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ಈವರೆಗೆ 20,89,701 ಮಂದಿಗೆ ಸೋಂಕು ತಗುಲಿದ್ದು, ಬರೋಬ್ಬರಿ 1,16,034 ಜನರು ಮೃತಪಟ್ಟಿದ್ದಾರೆ. ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ ಒಟ್ಟು 8,05,649 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ ಹಾಗೂ ಮೃತರ ಸಂಖ್ಯೆ 41,058ಕ್ಕೆ ಏರಿಕೆಯಾಗಿದೆ. ಮೂರನೇ ಸ್ಥಾನದಲ್ಲಿ ರಷ್ಯಾ (ಪ್ರಕರಣಗಳು-502,436) ಇದೆ. ಅಮೆರಿಕದ ಬಳಿಕ ಇಂಗ್ಲೆಂಡ್​ನಲ್ಲಿ ಅತಿ ಹೆಚ್ಚು ಸಾವು (40,261) ಸಂಭವಿಸಿದೆ.

ಬ್ರಿಟನ್​ ಹಿಂದಿಕ್ಕಿ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದ ಭಾರತದಲ್ಲಿ ಸೋಂಕಿತರ ಸಂಖ್ಯೆ 2,97,535ಕ್ಕೆ ಹಾಗೂ ಮೃತರ ಸಂಖ್ಯೆ 8498ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.