ETV Bharat / bharat

ಕೊರೊನಾ ಹರಡುತ್ತಿರುವ ಪರಿ, ಸುನಾಮಿಗಿಂತಲೂ ಭೀಕರ - ಜಗತ್ತಿನ ಮೇಲೆ ಕೊರೊನಾ ಪರಿಣಾಮ

ಜಗತ್ತಿನಾದ್ಯಂತ ಕೋವಿಡ್‌ ವೈರಸ್‌ ಪೀಡಿತರ ಸಂಖ್ಯೆ ಮೊದಲ ಒಂದು ಲಕ್ಷ ತಲುಪಲು 67 ದಿನಗಳ ಕಾಲ ತೆಗೆದುಕೊಂಡಿದ್ದರೆ, ಎರಡು ಲಕ್ಷ ತಲುಪಲು ಕೇವಲ 11 ದಿನಗಳು ಹಾಗೂ ಮತ್ತೊಂದು ಲಕ್ಷ ಹೆಚ್ಚಾಗಲು ನಾಲ್ಕೇ ದಿನಗಳನ್ನು ತೆಗೆದುಕೊಂಡಿದೆ ಎಂಬುದನ್ನು ನೋಡಿದರೆ ಈ ಭೀಕರ ಸಾಂಕ್ರಾಮಿಕ ರೋಗ ಅದೆಷ್ಟು ವೇಗವಾಗಿ ಹಬ್ಬುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ!

world-need-to-fight-against-killer-corona-virus
ಕೋವಿಡ್‌ ವೈರಸ್‌
author img

By

Published : Mar 28, 2020, 4:18 PM IST

ಇಡೀ ಜಗತ್ತನ್ನೇ ಸುನಾಮಿಯಂತೆ ಆವರಿಸಿರುವ ಕೋವಿಡ್‌ ಸಾಂಕ್ರಾಮಿಕ ರೋಗ ಶೀತಲ ಸಮರವನ್ನೇ ಸಾರಿಬಿಟ್ಟಿದೆ. ಈ ರೋಗ ಅಮೆರಿಕದಲ್ಲಿಯೂ ಅತ್ಯಂತ ವೇಗವಾಗಿ ಹಬ್ಬತೊಡಗಿದ್ದು, ರಾಷ್ಟ್ರೀಯ ದಿಗ್ಬಂಧನ ಹೇರುವಂತೆ ವೈದ್ಯರು ಅಧ್ಯಕ್ಷ ಟ್ರಂಪ್‌ ಅವರಿಗೆ ಶಿಫಾರಸು ಮಾಡಿದ್ದಾರೆ. ಆದರೆ, ಪೂರ್ಣ ಪ್ರಮಾಣದ ದಿಗ್ಬಂಧನ ವಿಧಿಸಲು ಅಧ್ಯಕ್ಷರಿಗೆ ಮನಸ್ಸಿಲ್ಲ. ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟವನ್ನು ಎದುರಿಸುವುದು ಕಷ್ಟವಾಗುತ್ತದೆ ಎಂಬುದೇ ಇದಕ್ಕೆ ಕಾರಣ. ಹೀಗಿದ್ದರೂ, ಭಾರತದ ಪ್ರಧಾನಮಂತ್ರಿ ಮೋದಿ ಅವರು ಮಾತ್ರ ಇಡೀ ದೇಶಕ್ಕೆ ಮೂರು ವಾರಗಳ ದಿಗ್ಬಂಧನವನ್ನು ವಿಧಿಸುವ ಮೂಲಕ, ಜನರ ಜೀವ ಮತ್ತು ಸುರಕ್ಷತೆ ಸರಕಾರದ ಮೊದಲ ಆದ್ಯತೆ ಎಂದು ತೋರಿಸಿಕೊಟ್ಟಿದ್ದಾರೆ.

ಜಗತ್ತಿನಾದ್ಯಂತ ಕೋವಿಡ್‌ ವೈರಸ್‌ ಪೀಡಿತರ ಸಂಖ್ಯೆ ಮೊದಲ ಒಂದು ಲಕ್ಷ ತಲುಪಲು 67 ದಿನಗಳ ಕಾಲ ತೆಗೆದುಕೊಂಡಿದ್ದರೆ, ಎರಡು ಲಕ್ಷ ತಲುಪಲು ಕೇವಲ 11 ದಿನಗಳು ಹಾಗೂ ಮತ್ತೊಂದು ಲಕ್ಷ ಹೆಚ್ಚಾಗಲು ನಾಲ್ಕೇ ದಿನಗಳನ್ನು ತೆಗೆದುಕೊಂಡಿದೆ ಎಂಬುದನ್ನು ನೋಡಿದರೆ ಈ ಭೀಕರ ಸಾಂಕ್ರಾಮಿಕ ರೋಗ ಅದೆಷ್ಟು ವೇಗವಾಗಿ ಹಬ್ಬುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ! ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ತಲುಪಲು 40 ದಿನಗಳ ಅವಧಿ ಹಿಡಿದಿತ್ತು. ಆದರೆ, ಮತ್ತೆ ಐವತ್ತು ಹೆಚ್ಚಳವಾಗಲು ತೆಗೆದುಕೊಂಡ ಅವಧಿ ಕೇವಲ ಐದು ದಿನಗಳು ಮಾತ್ರ. ಈ ರೋಗಪೀಡಿತರ ಸಂಖ್ಯೆ ದ್ವಿಗುಣವಾಗಲು ಭಾರತದಲ್ಲಿ ಐದೇ ದಿನಗಳು ಸಾಕಾಗಿರುವುದು ಈ ಸಾಂಕ್ರಾಮಿಕ ರೋಗದ ವೇಗಕ್ಕೆ ನಿದರ್ಶನ.

ಈ ಹಿನ್ನೆಲೆಯಲ್ಲಿ, ಕೊರೊನಾ ಸರಣಿಯನ್ನು ತುಂಡರಿಸಲು ದೇಶಾದ್ಯಂತ 21 ದಿನಗಳ ಕಾಲ ದಿಗ್ಬಂಧನ ವಿಧಿಸಿರುವುದು ಕೇಂದ್ರ ಸರಕಾರ ಅನುಸರಿಸಿದ ಅತ್ಯುತ್ತಮ ತಂತ್ರವಾಗಿದೆ. ಕೊರೊನಾ ವೈರಸ್‌ ಲಕ್ಷಣಗಳು ಅಭಿವೃದ್ಧಿಯಾಗುವುದೇ ಸೋಂಕು ತಗಲಿದ ಹದಿನಾಲ್ಕು ದಿನಗಳಲ್ಲಿ. ಈ ಅವಧಿಯಲ್ಲಿ ರೋಗಿ ಮನೆಯಲ್ಲಿಯೇ ಇದ್ದರೆ, ರೋಗಲಕ್ಷಣಗಳನ್ನು ಗುರುತಿಸುವುದು ಮನೆಯವರಿಗೆ ಸುಲಭವಾಗಿ, ರೋಗಿಯ ಚಿಕಿತ್ಸೆಯನ್ನು ನಿಖರವಾಗಿ ನಡೆಸಲು ಸಾಧ್ಯ. ಅದೇ ಸಮಯದಲ್ಲಿ, ಸಮಾಜದ ಇತರ ಜನ ಸೋಂಕಿಗೆ ಒಳಗಾಗುವುದನ್ನು ತಡೆಗಟ್ಟಬಹುದು.

ಈ ಹಿಂದೆ ಸಿಡುಬು ಮತ್ತು ಪೊಲಿಯೊ ರೋಗಗಳನ್ನು ತೊಡೆದು ಹಾಕುವಲ್ಲಿ ಭಾರತ ಸಮರ್ಥವಾಗಿರುವ ಹಿನ್ನೆಲೆಯಲ್ಲಿ, ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ಹೋರಾಡುವ ನೇತೃತ್ವವನ್ನು ಭಾರತವೇ ವಹಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಬಯಸಿದೆ. ಈ ರೋಗದ ವಿರುದ್ಧ ನಡೆಸಿರುವ ಹೋರಾಟ ಯಶಸ್ವಿಯಾಗಬೇಕೆಂದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸಿರುವ ದಿಗ್ಬಂಧನದಂತಹ ಕ್ರಮಗಳಿಗೆ ಜನತೆ ಬದ್ಧರಾಗಬೇಕು. ಆ ಮೂಲಕ ದೇಶ ಈ ಹೋರಾಟದಲ್ಲಿ ಜಯಶಾಲಿಯಾಗಲು ನೆರವಾಗಬೇಕು.

ಕೋವಿಡ್‌ ಹರಡದಂತೆ ತಡೆಗಟ್ಟುವ ಸಲುವಾಗಿ ವಿಧಿಸಿರುವ ರಾಷ್ಟ್ರವ್ಯಾಪಿ ದಿಗ್ಬಂಧನದಿಂದ ಉಂಟಾಗಬಹುದಾದ ಆರ್ಥಿಕ ನಷ್ಟ ರೂ. 9 ಲಕ್ಷ ಕೋಟಿ ಎಂದು ಕೇಂದ್ರ ಸರಕಾರ ಅಂದಾಜಿಸಿದೆ. ಹಣಕಾಸಿನ ನಷ್ಟಕ್ಕಿಂತ ದೇಶವ್ಯಾಪಿ ದಿಗ್ಬಂಧನ ವಿಧಿಸುವ ಮೂಲಕ ಮನುಷ್ಯರ ಜೀವ ಉಳಿಸುವುದು ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ದಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌ ಐಸಿಎಂಆರ್‌) ಅಂಕಿಅಂಶಗಳು ಸಹ ದೃಢಪಡಿಸಿವೆ. ಈ ತಿಂಗಳ 15ರವರೆಗೆ ಕೊರೊನಾ ಸೋಂಕಿನ ಕೇವಲ 100 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದರೆ, ಮುಂದಿನ ಹದಿನೈದು ದಿನಗಳಲ್ಲಿ ಆ ಪ್ರಮಾಣ ಒಂಬತ್ತು ಪಟ್ಟು ಹೆಚ್ಚಾಗಿದೆ ಎಂದು ಐಸಿಎಂಆರ್‌ ಹೇಳಿದೆ.

ಒಂದು ವೇಳೆ ಎಲ್ಲಾ ಕುಟುಂಬಗಳು ತಮ್ಮನ್ನು ಮನೆ ವ್ಯಾಪ್ತಿಗೆ ಸೀಮಿತಗೊಳಿಸಿಕೊಂಡಿದ್ದೇ ಆದಲ್ಲಿ ಕೊರೊನಾ ಪ್ರಕರಣಗಳ ತೀವ್ರತೆಯನ್ನು ಶೇಕಡಾ 69ರಷ್ಟು ತಗ್ಗಿಸಲು ಸಾಧ್ಯ. ಇದರಿಂದಾಗಿ ಪ್ರಕರಣಗಳ ಸಂಖ್ಯೆ ದಿಢೀರನೇ ಹೆಚ್ಚುವುದನ್ನು ಹಾಗೂ ಆ ಮೂಲಕ ಆರೋಗ್ಯ ವಲಯದಲ್ಲಿ ಉಂಟಾಗಬಹುದಾದ ಅನಗತ್ಯ ಒತ್ತಡವನ್ನು ತಪ್ಪಿಸಬಹುದು. ಒಂದು ವೇಳೆ ಯಾವುದೇ ರೋಗ ಲಕ್ಷಣಗಳು ಇಲ್ಲದ ಶೇಕಡಾ 75ರಷ್ಟು ಧನಾತ್ಮಕ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾದರೂ, ಈ ರೋಗ ಸಾಂಕ್ರಾಮಿಕವಾಗಿ ಹೊಮ್ಮುವುದನ್ನು ನಿಯಂತ್ರಿಸಬಹುದು ಎಂದು ಅದು ಹೇಳಿದೆ.

ಕೋವಿಡ್‌ ರೋಗವನ್ನು ಯಾರೂ ನಿರ್ಲಕ್ಷ್ಯಿಸಬಾರದು ಎಂಬುದನ್ನು ದಕ್ಷಿಣ ಕೊರಿಯಾ ಮತ್ತು ಅಮೆರಿಕದಲ್ಲಿ ನಡೆದಿರುವ ಬೆಳವಣಿಗೆಗಳು ತೋರಿಸಿಕೊಟ್ಟಿವೆ. ಶಂಕಿತ ಸೋಂಕಿತರನ್ನು ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ರೋಗ ಪತ್ತೆ ಪರೀಕ್ಷೆಗಳಂತಹ ಸಂಘಟಿತ ಪ್ರಯತ್ನಗಳ ಹೊರತಾಗಿಯೂ ಮತ್ತು ಕೋವಿಡ್‌ ಸಾಂಕ್ರಾಮಿಕವಾಗದಂತೆ ತಡೆಯುವ ಪ್ರಯತ್ನಗಳ ನಂತರವೂ, ಕೇವಲ ಒಬ್ಬ ಸೋಂಕಿತ ವ್ಯಕ್ತಿ (ರೋಗಿ ನಂ. 31) ಬೇಕಾಬಿಟ್ಟಿಯಾಗಿ ಚರ್ಚ್‌ ಮತ್ತು ಆಸ್ಪತ್ರೆಗಳಿಗೆ ಓಡಾಡಿದ್ದೇ ಕಾರಣವಾಗಿ ಇಡೀ ರೋಗ ಆ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಹರಡಲು ಕಾರಣವಾಗಿಬಿಟ್ಟಿತು. ಇಂತಹ ಭಯಾನಕ ಸೋಂಕನ್ನು ತಡೆಗಟ್ಟಬೇಕೆಂದರೆ, ದೇಶಕ್ಕೆ ದೇಶವೇ ದಿಗ್ಬಂಧನಕ್ಕೆ ಒಳಗಾಗುವುದು ಇವತ್ತಿನ ಪ್ರಮುಖ ಅವಶ್ಯಕತೆಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ದೈತ್ಯ ಎನಿಸಿಕೊಂಡಿರುವ ಅಮೆರಿಕ ತನ್ನಲ್ಲಿರುವ 55,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿಂದ ಚಿಂತಿತವಾಗಿದ್ದು, ದಕ್ಷಿಣ ಕೊರಿಯಾದ ಸಹಕಾರವನ್ನು ಕೋರಿದೆ. ಕೊರೊನಾ ವೈರಸ್‌ ನಿರ್ಬಂಧ ಪ್ರಯತ್ನದಲ್ಲಿ, ಪ್ರತಿಯೊಬ್ಬ ನಾಗರಿಕನೂ ಬದ್ಧ ಸೈನಿಕನಾಗಬೇಕಿದೆ!

ಜಾಗತಿಕವಾಗಿ ಕೊರೊನಾ ಮಾಡಿರುವ ದಾಂಧಲೆಗಳನ್ನು ವಿಶ್ಲೇಷಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಭಾರತವೂ ಇದರಿಂದ ಹೊರತಾಗಿಲ್ಲ, ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದೆ! ಸರಕಾರ ವಿಧಿಸಿರುವ ದಿಗ್ಬಂಧನವು ದೇಶದ ಶೇಕಡಾ 30ರಷ್ಟು ಜನರನ್ನು ಬಾಧಿಸುತ್ತದೆ. ಆದ್ದರಿಂದ ಸರಕಾರ ತನ್ನ ನಾಗರಿಕರ ನೆರವಿಗೆ ಮುಂದಾಗುವ ಮೂಲಕ ಅವರ ಸಮಸ್ಯೆಗಳನ್ನು ನಿವಾರಿಸಲು ಕಾಳಜಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಸರಕಾರ ಹಲವಾರು ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಕ್ತ ಮಾರುಕಟ್ಟೆಯಲ್ಲಿ ರೂ.37ಕ್ಕೆ ಕೆ.ಜಿ. ಇರುವ ಅಕ್ಕಿಯನ್ನು ತನ್ನ 80 ಕೋಟಿ ಜನರಿಗೆ ಕೆಜಿಗೆ ಕೇವಲ ರೂ.3ಕ್ಕೆ ವಿತರಿಸುವುದಾಗಿ ಘೋಷಿಸಿದೆ. ಅಂದಾಜು 130 ಕೋಟಿಗೂ ಹೆಚ್ಚು ಜನ ಗೃಹಬಂಧನದ ಪರಿಸ್ಥಿತಿಯಲ್ಲಿದ್ದು, ಜೀವನಾವಶ್ಯಕ ವಸ್ತುಗಳನ್ನು ಪಡೆಯುವ ಅವಕಾಶ ಜನರಿಗೆ ಇರುವಂತೆ ನೋಡಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಿಗಿ ಕ್ರಮ ಕೈಗೊಳ್ಳಬೇಕು. ಆ ಮೂಲಕ, ಅಪೌಷ್ಠಿಕತೆಯಿಂದ ನರಳದಂತೆ ಜನರನ್ನು ರಕ್ಷಿಸಬೇಕು.

ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಕೇರಳ ಸರಕಾರ, ಮಧ್ಯಾಹ್ನದ ಬಿಸಿಯೂಟವನ್ನು ರಾಜ್ಯದ ಶಾಲಾ ಮಕ್ಕಳ ಮನೆಗೇ ತಲುಪಿಸಲು ಯೋಜನೆ ರೂಪಿಸುತ್ತಿದೆ. ಇಡೀ ಸಾರಿಗೆ ವ್ಯವಸ್ಥೆಯೇ ಸ್ಥಗಿತವಾಗಿರುವ ಈ ಪರಿಸ್ಥಿತಿಯಲ್ಲಿ, ನಿತ್ಯದ ಜೀವನಾವಶ್ಯಕ ವಸ್ತುಗಳನ್ನು ದಾಸ್ತಾನು ಸ್ಥಳದಿಂದ ದೂರದ ಹಳ್ಳಿಗಳಿಗೂ ತಲುಪಿಸುವ ಅಬಾಧಿತ ಸರಣಿ ವ್ಯವಸ್ಥೆಯನ್ನು ರೂಪಿಸಬೇಕಿದೆ. ಮಾಧ್ಯಮದ ವರದಿಗಳ ಪ್ರಕಾರ, ಇ-ವಾಣಿಜ್ಯ ತಾಣಗಳಿಂದ ಶೇಕಡಾ 79ರಷ್ಟು ಜೀವನಾವಶ್ಯಕ ವಸ್ತುಗಳು ಹಾಗೂ ಚಿಲ್ಲರೆ ಮಾರುಕಟ್ಟೆಗಳಿಂದ ಶೇಕಡಾ 32ರಷ್ಟು ವಸ್ತುಗಳನ್ನು ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ, ಔಷಧ ಉದ್ಯಮ ಕೂಡಾ ದಾಸ್ತಾನು ಪೂರೈಕೆ ಕೊರತೆಯನ್ನು ಎದುರಿಸುತ್ತಿದೆ.

ಆದ್ದರಿಂದ, ಜನರನ್ನು ಕಾಡುತ್ತಿರುವ ಇಂತಹ ಸಮಸ್ಯೆಗಳನ್ನು ಎದುರಿಸಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಯಾವೊಬ್ಬ ವ್ಯಕ್ತಿಯೂ ಆಹಾರದ ಕೊರತೆಯಿಂದ ನರಳದಂತೆ ನೋಡಿಕೊಳ್ಳಬೇಕು. ಜಗತ್ತಿನ ಮೂರನೇ ಒಂದು ಭಾಗದ ಕೊಳೆಗೇರಿ ನಿವಾಸಿಗಳು ಭಾರತದಲ್ಲಿದ್ದಾರೆ ಎಂಬ ವಾಸ್ತವದ ಹಿನ್ನೆಲೆಯಲ್ಲಿ, ಸಂಭವನೀಯ ಸಮಸ್ಯೆಗಳನ್ನು ಅಂದಾಜಿಸಬೇಕು. ಸುಮಾರು 7 ಲಕ್ಷ ಜನರು ಅತ್ಯಂತ ಹತ್ತಿರದಲ್ಲಿ ಬದುಕುವ ಧಾರಾವಿಯಂತಹ (ಮುಂಬೈ) ಬೃಹತ್‌ ಕೊಳೆಗೇರಿಗಳ ಜನರು ಸೂಕ್ತ ಅಂತರದಲ್ಲಿ ಇರುವಂತೆ ಸರಕಾರ ನೋಡಿಕೊಳ್ಳಬೇಕು. ಕೊರೊನಾ ತಂದಿರುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಲೇ ಕೋವಿಡ್‌ ವಿರುದ್ಧ ಹೋರಾಡಲು ಜನರು ಶಕ್ತರಾಗುವಂತೆ ಸರಕಾರ ಕ್ರಮ ಕೈಗೊಳ್ಳಬೇಕು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.