ಹೈದರಾಬಾದ್: ಏಷ್ಯಾದಲ್ಲಿಯೇ ಅತೀದೊಡ್ಡ ಕೊಳಗೇರಿ ಪ್ರದೇಶ ಎಂಬ ಕುಖ್ಯಾತಿ ಪಡೆದುಕೊಂಡಿದ್ದ ಮುಂಬೈನ ಧಾರಾವಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಅಟ್ಟಹಾಸ ಜೋರಾಗಿತ್ತು. ಆದ್ರೆ ಇದೀಗ ಪ್ರಕರಣ ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಇತರೆ ಎಲ್ಲ ರಾಜ್ಯ ಹಾಗೂ ಪ್ರಮುಖ ಪ್ರದೇಶಗಳಿಗೆ ಮಾದರಿಯಾಗಿದೆ.
ಮಹಾರಾಷ್ಟ್ರದಲ್ಲಿ ಪ್ರತಿದಿನ ಸಾವಿರಾರು ಹೊಸ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಅದೇ ರೀತಿ ಲಕ್ಷಾಂತರ ಜನರು ವಾಸ ಮಾಡಿರುವ ಕೊಳಗೇರಿ ಪ್ರದೇಶ ಧಾರಾವಿಯಲ್ಲೂ ಈ ಹಿಂದೆ ಪ್ರತಿದಿನ ಅನೇಕ ಹೊಸ ಕೊರೊನಾ ಕೇಸ್ ಪತ್ತೆಯಾಗುತ್ತಿದ್ದವು. ಆದರೆ ರಾಜ್ಯ ಸರ್ಕಾರ, ಕೇಂದ್ರ ಹಾಗೂ ಎನ್ಜಿಓಗಳ ಮಹತ್ವದ ಕೆಲಸದಿಂದ ಇದೀಗ ಸೋಂಕಿತ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗಿವೆ. ಕಟ್ಟುನಿಟ್ಟಿನ ನಿರ್ಧಾರ, ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿ ಪಾಲನೆ ಮಾಡುವುದರಿಂದ ಮಹಾಮಾರಿ ವಿರುದ್ಧ ಜಯ ಸಾಧಿಸಬಹುದು ಎಂಬುದನ್ನ ಎಲ್ಲರಿಗೂ ತೋರಿಸಿಕೊಟ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಮೆಚ್ಚುಗೆ!
ಮುಂಬೈನ ಧಾರಾವಿಯಲ್ಲಿ ಕೊರೊನಾ ಸಂಪೂರ್ಣವಾಗಿ ಹತೋಟಿಗೆ ಬಂದಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
-
"In 🇻🇳🇰🇭🇹🇭🇳🇿🇮🇹🇪🇸 & 🇰🇷 & even in Dharavi, a densely packed area in Mumbai, a strong focus on community engagement & the basics of testing, tracing, isolating & treating all those that are sick is key to breaking the chains of transmission & suppressing the virus"-@DrTedros
— World Health Organization (WHO) (@WHO) July 10, 2020 " class="align-text-top noRightClick twitterSection" data="
">"In 🇻🇳🇰🇭🇹🇭🇳🇿🇮🇹🇪🇸 & 🇰🇷 & even in Dharavi, a densely packed area in Mumbai, a strong focus on community engagement & the basics of testing, tracing, isolating & treating all those that are sick is key to breaking the chains of transmission & suppressing the virus"-@DrTedros
— World Health Organization (WHO) (@WHO) July 10, 2020"In 🇻🇳🇰🇭🇹🇭🇳🇿🇮🇹🇪🇸 & 🇰🇷 & even in Dharavi, a densely packed area in Mumbai, a strong focus on community engagement & the basics of testing, tracing, isolating & treating all those that are sick is key to breaking the chains of transmission & suppressing the virus"-@DrTedros
— World Health Organization (WHO) (@WHO) July 10, 2020
ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಡೋಸ್ ಅಧನೊಮ್ ಗೆಬ್ರೆಯೋಸಿಸ್, ಆಕ್ರಮಣಕಾರಿ ನಿರ್ಧಾರ ತೆಗೆದುಕೊಳ್ಳುವುದರಿಂದ ಮಹಾಮಾರಿ ಕೊರೊನಾ ವಿರುದ್ಧದ ಹೋರಾಟ ಗೆಲ್ಲಬಹುದಾಗಿದೆ ಎಂದಿದ್ದು, ವಿಶ್ವದಲ್ಲಿ ಕೆಲ ದೇಶ, ಪ್ರದೇಶಗಳು ಅದಕ್ಕೆ ಮಾದರಿಯಾಗಿವೆ ಎಂದಿದ್ದಾರೆ.
ಥೈಲ್ಯಾಂಡ್, ನ್ಯೂಜಿಲ್ಯಾಂಡ್, ಇಟಲಿ, ಸ್ಪೇನ್, ದಕ್ಷಿಣ ಕೊರಿಯಾ ಹಾಗೂ ಮುಂಬೈನ ಧಾರಾವಿ ಕೂಡ ಇದಕ್ಕೆ ಸ್ಪಷ್ಟ ಉದಾಹರಣೆ ಎಂದಿರುವ ಅವರು, ಕೋವಿಡ್ ಸರಪಳಿ ಹರಡದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿವೆ ಎಂದಿದ್ದಾರೆ. ಧಾರಾವಿಯಲ್ಲಿ ನಿನ್ನೆ ಕೇವಲ 12 ಕೋವಿಡ್ ಪ್ರಕರಣ ದಾಖಲಾಗಿದ್ದು, ಈ ಮೂಲಕ ಒಟ್ಟು ಸಂಖ್ಯೆ 2,359 ಆಗಿದೆ. ಆದರೆ ಸದ್ಯ 166 ಸಕ್ರಿಯ ಪ್ರಕರಣಳಿದ್ದು, 1,952 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.