ಹೈದರಾಬಾದ್: ವಿಶ್ವ ಬೈಸಿಕಲ್ ದಿನವನ್ನು ಜೂನ್ 3ರಂದು ಆಚರಿಸಲಾಗುತ್ತದೆ. ಮೊದಲ ವಿಶ್ವ ಬೈಸಿಕಲ್ ದಿನವನ್ನು ಜೂನ್ 3, 2018ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಚರಿಸಿತು.
ಸೈಕ್ಲಿಂಗ್ ಮಕ್ಕಳಿಗೆ ಮತ್ತು ಯುವಜನರಿಗೆ ಸುಸ್ಥಿರ ಆರೋಗ್ಯ ನೀಡುವುದರ ಜೊತೆಗೆ ದೈಹಿಕ ಸಾಮರ್ಥ್ಯವನ್ನು ಬಲಪಡಿಸುತ್ತದೆ. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಬಲಪಡಿಸುತ್ತದೆ.
ಸೈಕ್ಲಿಂಗ್ನ ದೈಹಿಕ ಪ್ರಯೋಜನಗಳು:
- ಸೈಕ್ಲಿಂಗ್ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
- ಡಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
- ಹೆಚ್ಚುವರಿ ತೂಕ ಇಳಿಸುತ್ತದೆ.
- ಲೈಂಗಿಕ ಆರೋಗ್ಯ ಉತ್ತಮಗೊಳಿಸುತ್ತದೆ.
ವಿಶ್ವ ಬೈಸಿಕಲ್ ದಿನದ ಮಹತ್ವ:
ಸೈಕ್ಲಿಂಗ್ ಹೃದಯ ಕಾಯಿಲೆ, ಪಾರ್ಶ್ವವಾಯು, ಕೆಲವು ರೀತಿಯ ಕ್ಯಾನ್ಸರ್, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಬೈಸಿಕಲ್ ಉತ್ತಮ ಸಾರಿಗೆ ಸಾಧನವಾಗಿಯೂ ಕಾರ್ಯ ನಿರ್ವಹಿಸುತ್ತದೆ.
ಕಡಿಮೆ ಬೆಲೆಯಲ್ಲಿ ಸೈಕಲ್ನಲ್ಲಿ ಸಂಚರಿಸುವುದರ ಜೊತೆಗೆ ಆರೋಗ್ಯವನ್ನು ಕೂಡಾ ಕಾಪಾಡಿಕೊಳ್ಳಬಹುದಾಗಿದೆ. ಬೈಸಿಕಲ್ ಸವಾರಿ ಪರಿಸರಕ್ಕೆ ಯಾವುದೇ ಹಾನಿಯುಂಟುಮಾಡದೆ, ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತದೆ.