ಮಿರ್ಜಾಪುರ(ಯುಪಿ): ಸೋನಭದ್ರಾ ಗುಂಡಿನ ದಾಳಿ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರನ್ನು ಭೇಟಿ ಮಾಡಲು ಹೊರಟಿದ್ದ ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಒಟ್ಟಾರೆ ವಿಚಾರದ ಬಗ್ಗೆ ಸ್ವತಃ ಪ್ರಿಯಾಂಕ ಗಾಂಧಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಸೋನಭದ್ರಾ ಪ್ರಕರಣ... ಮೃತರ ಕುಟುಂಬ ಭೇಟಿಗೆ ಹೊರಟಿದ್ದ ಪ್ರಿಯಾಂಕಾ ವಶಕ್ಕೆ
ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದೇ ಹಿಂತಿರುಗುವ ಪ್ರಶ್ನೆಯೇ ಇಲ್ಲ ಎಂದಿರುವ ಪ್ರಿಯಾಂಕ, ವಾರಣಾಸಿಗೆ ತೆರಳುವಂತೆ ಮಿರ್ಜಾಪುರದ ಎಸ್ಪಿ ಮಾಡಿರುವ ಮನವಿಯನ್ನೂ ತಿರಸ್ಕರಿಸಿದ್ದಾರೆ.
ಮಿರ್ಜಾಪುರದಲ್ಲಿ ಯಾವುದೇ ಹವಾನಿಯಂತ್ರಿತ ಸ್ಥಳಗಳಿಲ್ಲ ಎಂದಿರುವ ಮಿರ್ಜಾಪುರದ ಎಸ್ಪಿಗೆ, ನನಗೆ ಯಾವುದೇ ಎಸಿ ಅಥವಾ ವಿದ್ಯುತ್ ಅವಶ್ಯಕತೆ ಇಲ್ಲ ಎಂದು ಪ್ರಿಯಾಂಕ ಖಡಕ್ಕಾಗಿ ಹೇಳಿದ್ದಾರೆ.
ಸೋನಭದ್ರಾದಲ್ಲಿ ನಡೆದಿರುವ ಘಟನೆ ನಿಜಕ್ಕೂ ಹತ್ಯಾಕಾಂಡ ಎಂದು ಉಲ್ಲೇಖಿಸಿರುವ ಪ್ರಿಯಾಂಜ ಗಾಂಧಿ, ನಾನು ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರ ಭೇಟಿ ಆಗಮಿಸಿದ್ದೇನೆ ಮತ್ತು ಇದು ಅಪರಾಧವಲ್ಲ ಎಂದಿದ್ದಾರೆ.
ಪ್ರಿಯಾಂಕ ಬಂಧನ ಕಾನೂನು ಬಾಹಿರ: ಯೋಗಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ
ಸೋನಭದ್ರಾದಲ್ಲಿ ಶುಕ್ರವಾರ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಇದನ್ನು ನಾನು ಉಲ್ಲಂಘಿಸುವ ಕಾರ್ಯ ಮಾಡುವುದಿಲ್ಲ, ನನ್ನ ಜೊತೆ ಇಬ್ಬರು ಮಾತ್ರ ಬರುತ್ತಾರೆ ಎಂದು ಪೊಲೀಸರಿಗೆ ತಿಳಿಸಿದ್ದೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಪ್ರಿಯಾಂಕ ಗಾಂಧಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಾಸ್ತವ್ಯಕ್ಕೆ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಗೆಸ್ಟ್ ಹೌಸ್ ನೀಡಲಾಗಿದ್ದರೂ ವಿದ್ಯುತ್ ಸಮಸ್ಯೆ ತೀವ್ರವಾಗಿದೆ ಎಂದು ಪ್ರಿಯಾಂಕ ಗಾಂಧಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.