ETV Bharat / bharat

ಭಾರತೀಯ ಫುಟ್ಬಾಲ್ ಲೋಕದ 'ದುರ್ಗಿ'ಯ ಸಾಧನೆಯ ಹಾದಿ

author img

By

Published : Mar 4, 2020, 2:22 AM IST

ಸಾವಿರ ಸವಾಲುಗಳನ್ನು ಮೆಟ್ಟಿನಿಂತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡ ಮಹಿಳೆ ಓನಮ್ ಬೆಂಬೆಮ್ ದೇವಿ. ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿದ ಈ ಪಟು ಪದ್ಮಶ್ರೀ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರನ್ನು ಭಾರತೀಯ ಫುಟ್ಬಾಲ್‌ನ ‘ದುರ್ಗಿ’ ಎಂದು ಕರೆಯುತ್ತಾರೆ.

Oinum Bembem Devi
ಭಾರತೀಯ ಫುಟ್‌ಬಾಲ್‌ನ ‘ದುರ್ಗಾ’ ಗಳ ಸಾಧೆನೆಯ ಹಾದಿ

ಓನಮ್ ಬೆಂಬೆಮ್ ದೇವಿ. 1980 ರ ಏಪ್ರಿಲ್ 4ರಂದು ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಜನಿಸಿದ ಭಾರತೀಯ ಫುಟ್ಬಾಲ್ ಆಟಗಾರ್ತಿ. ಭಾರತೀಯ ಮಹಿಳಾ ಲೀಗ್‌ನಲ್ಲಿ ಮೊದಲ ಮಹಿಳಾ ವ್ಯವಸ್ಥಾಪಕರಾಗಿ ನೇಮಕಗೊಂಡ ಇವರು, ಪ್ರಸ್ತುತ ಮಹಿಳೆಯರ ಫುಟ್ಬಾಲ್ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ.

1988 ರಲ್ಲಿ ಫುಟ್ಬಾಲ್ ಲೋಕಕ್ಕೆ ಕಾಲಿಟ್ಟ ಬೆಂಬೆಮ್ ದೇವಿ, 1991 ರಲ್ಲಿ ಅಂದ್ರೆ ತಮ್ಮ 11 ನೇ ವಯಸ್ಸಿನಲ್ಲಿ 13 ವರ್ಷದೊಳಗಿನ ಸಬ್ ಜೂನಿಯರ್​ನಲ್ಲಿ ಪಂದ್ಯದಲ್ಲಿ ಮಣಿಪುರವನ್ನು ಪ್ರತಿನಿಧಿಸಿದ್ರು. 1993 ರಲ್ಲಿ ಮಣಿಪುರ ಮಹಿಳಾ ಫುಟ್ಬಾಲ್ ರಾಜ್ಯ ತಂಡಕ್ಕೆ ಸೇರಿದ್ದ ದೇವಿ, 13ನೇ ವಯಸ್ಸಿನಲ್ಲಿ 32ನೇ ರಾಷ್ಟ್ರೀಯ ಫುಟ್ಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಬಳಿಕ ಆಂಧ್ರಪ್ರದೇಶ ತಂಡದ ನಾಯಕಿರಾಗಿ ನೇಮಕಗೊಂಡಿದ್ದರು.

1995ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ಬೆಂಬೆಮ್ ಏಷ್ಯನ್ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಂಡರು. ಈ ಮೂಲಕ ಗುವಾಮ್ ವಿರುದ್ಧದ ಪಂದ್ಯವೊಂದರಲ್ಲಿ ಅಂತಾರಾಷ್ಟ್ರೀಯ ಪಂದ್ಯಾಟಕ್ಕೆ ಚೊಚ್ಚಲ ಪ್ರವೇಶ ಮಾಡಿದರು.

ಓನಮ್ ಬೆಂಬೆಮ್ ದೇವಿ ಸಾಧನೆಯ ಪಟ್ಟಿ:

- 2001 ರಲ್ಲಿ ವರ್ಷದ ಎಐಎಫ್ಎಫ್ ಮಹಿಳಾ ಫುಟ್ಬಾಲ್ ಆಟಗಾರ್ತಿಯಾಗಿ ಆಯ್ಕೆ

- 13 ವರ್ಷಗಳ ನಂತರ ಮತ್ತೆ ವರ್ಷದ ಮಹಿಳಾ ಫುಟ್ಬಾಲ್ ಆಟಗಾರ್ತಿಯಾಗಿ ಆಯ್ಕೆ

- 2017 ರಲ್ಲಿ ಅರ್ಜುನ ಪ್ರಶಸ್ತಿ

- 2020 ರಲ್ಲಿ ಪದ್ಮಶ್ರೀ ಪುರಸ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.