ETV Bharat / bharat

ಬೀಳುತ್ತಿದ್ದ ಎಐಎಡಿಎಂಕೆ ಬ್ಯಾನರ್​ ತಪ್ಪಿಸಲು ಹೋಗಿ ಟ್ರಕ್‌ನಡಿ ಬಿದ್ದ ಯುವತಿ!

author img

By

Published : Nov 12, 2019, 12:23 PM IST

ತಮಿಳುನಾಡಿನಲ್ಲಿ ಬ್ಯಾನರ್​​ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದೀಗ ಮಹಿಳೆಯೋರ್ವಳು ಬೀಳುತ್ತಿದ್ದ ಬ್ಯಾನರ್​ ತಪ್ಪಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಅನುರಾಧ ರಾಜೇಶ್ವರಿ

ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ತಲೆ ಮೇಲೆ ಎಐಎಡಿಎಂಕೆ ಪಕ್ಷದ ಬ್ಯಾನರ್​ ಬಿದ್ದು 23 ವರ್ಷದ ಯುವತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹದ್ದೇ ದುರ್ಘಟನೆ ನಡೆದಿದೆ.

ತಮಿಳುನಾಡಿನ ಕೊಯಂಬತ್ತೂರಿನ ರೋಡ್​​ನಲ್ಲಿ ಸ್ಕೂಟಿ ಮೇಲೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, 30 ವರ್ಷದ ಮಹಿಳೆ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ.

ಅನುರಾಧ ರಾಜೇಶ್ವರಿ ನಿನ್ನೆ ಬೆಳಗ್ಗೆ ಸ್ಕೂಟರ್​​ನಲ್ಲಿ ಆಫೀಸ್​ಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿ ಹಾಕಿದ್ದ ಎಐಎಡಿಎಂಕೆ ಪಕ್ಷದ ಬ್ಯಾನರ್​ ಆಕೆಯ ಮೇಲೆ ಬೀಳುತ್ತಿತ್ತು. ಈ ವೇಳೆ ಬೀಳುತ್ತಿರುವ ಬ್ಯಾನರ್‌ ತಪ್ಪಿಸಲು ಹೋದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟ್ರಕ್​ ಆಕೆಗೆ ಗುದ್ದಿದೆ. ಈ ವೇಳೆ ಆಕೆಯ ಎರಡೂ ಕಾಲುಗಳ ಮೇಲೆ ಲಾರಿ ಚಕ್ರ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಗೆ ಟ್ರಕ್‌ ಚಾಲಕನ ಅಜಾಗರೂಕತೆಯೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿನ್ನೆ ಮುಖ್ಯಮಂತ್ರಿ ಪನ್ನೀರ್​ ಸೆಲ್ವಂ ಕೊಯಂಬತ್ತೂರಿಗೆ ಆಗಮಿಸಿದ್ದು, ಅವರನ್ನು ಸ್ವಾಗತಿಸಲು ಹೆದ್ದಾರಿಯಲ್ಲಿ ಪಕ್ಷದ ಧ್ವಜ ಹಾಗು ಬ್ಯಾನರ್ ಹಾಕಲಾಗಿತ್ತು.

Intro:Body:

ಬೀಳುತ್ತಿದ್ದ ಎಐಎಡಿಎಂಕೆ ಬ್ಯಾನರ್​ ತಪ್ಪಿಸಲು ಹೋಗಿ ಟ್ರಕ್​ಗೆ ಗುದ್ದಿದ ಯುವತಿ! 

ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ತಲೆ ಮೇಲೆ ಎಐಎಡಿಎಂಕೆ ಪಕ್ಷದ ಬ್ಯಾನರ್​ವೊಂದು ಬಿದ್ದು 23 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿತ್ತು, ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹ ದುರ್ಘಟನೆ ನಡೆದಿದೆ. 

ತಮಿಳುನಾಡಿನ ಕೊಯಂಬತ್ತೂರಿನ ರೋಡ್​​ನಲ್ಲಿ ಸ್ಕೂಟಿ ಮೇಲೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, 30 ವರ್ಷದ ಮಹಿಳೆ ಇದೀಗ ಎರಡು ಕಾಲು ಕಳೆದುಕೊಂಡಿದ್ದಾಳೆ. 

ಅನುರಾಧ ರಾಜೇಶ್ವರಿ ನಿನ್ನೆ ಬೆಳಗ್ಗೆ ಸ್ಕೂಟರ್​​ನಲ್ಲಿ ಆಫೀಸ್​ಗೆ ತೆರಳುತ್ತಿದ್ದ ವೇಳೆ ರೋಡ್​​ನಲ್ಲಿ ಅಳವಡಿಕೆ ಮಾಡಲಾಗದ್ದ ಎಐಎಡಿಎಂಕೆ ಪಕ್ಷದ ಬ್ಯಾನರ್​ ಆಕೆಯ ಮೇಲೆ ಬೀಳುತ್ತದೆ ಎಂಬುದನ್ನು ಅರಿತು ತಪ್ಪಿಸಲು ಹೋದಾಗ ಹಿಂದೆ ಬರುತ್ತಿದ್ದ ಟ್ರಕ್​ ಆಕೆಗೆ ಗುದ್ದಿದೆ. ಈ ವೇಳೆ ಆಕೆಯ ಕಾಲುಗಳ ಮೇಲೆ ಲಾರಿ ಚಕ್ರ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಈಗಾಗಲೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಇದೀಗ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಟ್ರಕ್​ ಚಾಲಕನ ಅಜಾಗರೂಕತೆ ಇದಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ನಿನ್ನೆ ಮುಖ್ಯಮಂತ್ರಿ ಪನ್ನೀರ್​ ಸೆಲ್ವಂ ಕೊಯಂಬತ್ತೂರಿಗೆ ಆಗಮಿಸಿದ್ದು, ಅವರನ್ನ ಸ್ವಾಗತ ಮಾಡಲು ಹೆದ್ದಾರಿಯಲ್ಲಿ ಧ್ವಜ ಬ್ಯಾನರ್ ಹಾಕಲಾಗಿತ್ತು. ಘಟನೆಗೆ ಇದು ಸಹ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.