ETV Bharat / bharat

ಸಿಎಎ ವಿರುದ್ಧ ಮಹಿಳೆಯರು: ಹೊಸ ಬಗೆಯ ಸತ್ಯಾಗ್ರಹಕ್ಕೆ ಮುನ್ನುಡಿ

ದೇಶದ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಕೆಲ ವರ್ಗಗಳ ಅತೃಪ್ತಿಗೆ ಕಾರಣವಾಗಿದೆ. ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ ಆರ್‌ ಸಿ) ಮುಸ್ಲಿಂ ಸಮುದಾಯದ ಪೌರತ್ವ ನಿರಾಕರಿಸುತ್ತದೆ ಎಂಬ ಭಯದ ಅಂಶ ಆಧರಿಸಿ ಈ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ಹೆಚ್ಚಾಗಿವೆ.

Women Against CAA
ಸಿಎಎ ವಿರುದ್ಧ ಮಹಿಳೆಯರು
author img

By

Published : Jan 19, 2020, 11:32 PM IST

2019 ರ ಡಿಸೆಂಬರ್ 11 ರಂದು ಭಾರತದ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿ ಎ ಎ) ಜನಸಂಖ್ಯೆಯ ಕೆಲ ವರ್ಗಗಳ ಅತೃಪ್ತಿಗೆ ಕಾರಣವಾಗಿದೆ. ಜನರಲ್ಲಿ ಮೂಡಿರುವ ಅಸಮಾಧಾನ ದೇಶದಲ್ಲಿ ಹಲವು ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. 2014ರ ಡಿಸೆಂಬರ್ 31ಕ್ಕಿಂತಲೂ ಮೊದಲು ನೆರೆಯ ಮೂರು ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಸಿಎಎ ತ್ವರಿತಗೊಳಿಸುತ್ತದೆ.

ಒಂದೆಡೆ ಈ ಮೂರು ದೇಶಗಳಿಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಪಡೆಯಲು ಅನುಕೂಲ ಕಲ್ಪಿಸುವ ಸಿ ಎ ಎ, ಮತ್ತೊಂದೆಡೆ ಮುಸ್ಲಿಂ ವಲಸಿಗರಿಗೆ ಪೌರತ್ವ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೌನ ತಳೆಯುತ್ತದೆ. ಮುಸ್ಲಿಂ ವಲಸಿಗರಿಗೆ ಸಿಎಎ ಒಳಗೆ ಸ್ಥಾನ ಸಿಗದ ಕಾರಣ, ಅನೇಕರು ಈ ಕಾಯ್ದೆಯ ಸಂವಿಧಾನ ಬದ್ಧತೆಯನ್ನು ಮತ್ತು ಕಾಯ್ದೆ ಅಂಗೀಕರಿಸಿದ ಸರ್ಕಾರದ ಉದ್ದೇಶವನ್ನು ಪ್ರಶ್ನಿಸುತ್ತಿದ್ದಾರೆ. ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ( ಎನ್‌ ಆರ್‌ ಸಿ ) ಮುಸ್ಲಿಂ ಸಮುದಾಯದ ಪೌರತ್ವ ನಿರಾಕರಿಸುತ್ತದೆ ಎಂಬ ಭಯದ ಅಂಶ ಆಧರಿಸಿ ಈ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ಹೆಚ್ಚಾಗಿವೆ. ಭಾರತೀಯ ನಾಗರಿಕರ ಮೇಲೆ ಸಿಎಎ ಪರಿಣಾಮ ಬೀರದು ಎಂಬ ಸರ್ಕಾರದ ಸ್ಪಷ್ಟೀಕರಣ, ಉದ್ವಿಗ್ನತೆ ಶಮನಗೊಳಿಸಲು ಸಹಾಯಕ ಆಗಲಿಲ್ಲ. ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರವಾದ ಒಂದು ತಿಂಗಳಿನಿಂದಲೂ ವಿವಿಧ ಸ್ವರೂಪ ಮತ್ತು ತೀವ್ರತೆಯಿಂದ ಕೂಡಿದ ಪ್ರತಿಭಟನೆಗಳು ನಡೆಯುತ್ತಿವೆ. ಅಸ್ಸೋಂನಿಂದ ನವದೆಹಲಿಯವರೆಗೆ, ವಿದ್ಯಾರ್ಥಿಗಳಿಂದ ಹಿಡಿದು ಕೆಲವು ಸಮಾಜದ ವಿವಿಧ ವರ್ಗಗಳವರೆಗೆ ಪ್ರತಿಭಟನೆಯ ಅಂತಿಮ ಉದ್ದೇಶ ಬೇರೆ- ಬೇರೆಯಾಗಿದ್ದರೂ, ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆದ ಮಹಿಳೆಯರ ಪ್ರತಿಭಟನೆ ಎಲ್ಲರ ಗಮನ ಸೆಳೆದಿದೆ.

ಪ್ರತಿರೋಧದ ತಾಜಾ ವ್ಯಾಕರಣದೊಂದಿಗೆ ಹೊಸ ರೀತಿಯ ‘ಸತ್ಯಾಗ್ರಹ’ ಎಂದು ಕರೆಸಿಕೊಂಡ ಸಿ ಎ ಎ ವಿರುದ್ಧದ ಶಾಹೀನ್ ಬಾಗ್ ಪ್ರತಿಭಟನೆ ಈಗ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿದೆ. ಹೆಚ್ಚಾಗಿ ಮಹಿಳೆಯರು ಭಾಗವಹಿಸಿದ್ದ ಶಾಹೀನ್ ಬಾಗ್ ಪ್ರತಿಭಟನೆ ಈ ಕಾಯ್ದೆಗೆ ಪ್ರಬಲ ವಿರೋಧ ಇದೆ ಎಂಬುದರ ಧ್ಯೋತಕ. ಪ್ರತಿಭಟನೆಯ ಜನಪ್ರಿಯತೆ, ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಆಮ್ ಆದ್ಮಿ(ಎ ಎ ಪಿ) ಮುಖಂಡರು ಮತ್ತು ವಿದ್ಯಾರ್ಥಿ ಸಮುದಾಯಗಳು ಹಾಗೂ ಮೇಧಾ ಪಾಟ್ಕರ್ ಅವರಂತಹ ಸಾಮಾಜಿಕ ಕಾರ್ಯಕರ್ತರನ್ನು ಆಕರ್ಷಿಸಿದೆ. ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡುವ ಯತ್ನಗಳು ವಿಫಲ ಆಗಿದ್ದು, ಘಟನಾ ಸ್ಥಳದಿಂದ ಮಹಿಳೆಯರು ಸ್ಥಳಾಂತರಗೊಳ್ಳಲು ಒಪ್ಪಿಲ್ಲ ಎಂದು ವರದಿಗಳು ತಿಳಿಸಿವೆ.

ಪ್ರತಿಪಕ್ಷಗಳು ಪ್ರತಿಭಟನಾಕಾರರೊಂದಿಗೆ ಒಗ್ಗಟ್ಟು ಪ್ರದರ್ಶಿಸುತ್ತಿದ್ದರೆ, ಆಡಳಿತಾರೂಢ ಬಿಜೆಪಿ ಇದನ್ನು ರಾಜಕೀಯ ವಿರೋಧಿಗಳ ಸಂಘಟಿತ ಕ್ರಿಯೆ ಎಂದು ಹೇಳುವ ಜೊತೆಗೆ ಪ್ರತಿಭಟನಾಕಾರರಿಗೆ ಸಂಬಳ ನೀಡಲಾಗುತ್ತಿದೆ ಎಂದೂ ಆರೋಪಿಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದವರು ತಮ್ಮದು ಸ್ವಯಂಪ್ರೇರಿತ ಚಳವಳಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ಸುದೀರ್ಘವಾಗಿ ನಡೆಯುತ್ತಿರುವ ಹೋರಾಟದಲ್ಲಿ ಮಹಿಳೆಯರ ನಡುವಿನ ಊಹಿಸಲಸಾಧ್ಯವಾದ ಸಮನ್ವಯತೆ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಅದು ಸ್ವಯಂಪ್ರೇರಿತವೋ ಅಥವಾ ಸಂಘಟಿತವೋ ಎಂಬ ಪ್ರಶ್ನೆ ಹುಟ್ಟಲು ಕಾರಣವಾಗಿದೆ. ಸಿ ಎ ಎ ವಿರುದ್ಧ ಮಹಿಳೆಯರ ಭಾಗವಹಿಸುವಿಕೆಯ ಕಾರಣ ಹುಡುಕಿದರೆ ಮೊದಲ ಪ್ರಶ್ನೆಗೆ ಉತ್ತರ ಸಿಗುತ್ತದೆ.

ಸಿ ಎ ಎ ವಿರುದ್ಧ ಮಹಿಳೆಯರ ಭಾಗವಹಿಸುವಿಕೆಗೆ ಮೊದಲ ಕಾರಣ ಭಾವನಾತ್ಮಕ ಅಂಶ ಆಗಿರಬಹುದು. ರಾಜಕೀಯ ಉಪೇಕ್ಷೆಯ ಹೊರತಾಗಿಯೂ, ಮಹಿಳೆಯರು, ಮಕ್ಕಳು ಹಾಗೂ ಇತರರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿರುವುದು ಕಂಡುಬರುತ್ತದೆ. ಇದು ಪ್ರತಿಭಟನೆಯ ಸ್ವರೂಪಕ್ಕೆ ಉತ್ತಮ ಸಾಮಾಜಿಕ ಮನ್ನಣೆ ಬೆಸೆಯುವ ಭಾವನಾತ್ಮಕ ಸಂದೇಶ ರವಾನಿಸುತ್ತಿದೆ. ಈ ಹಿಂದೆ, ಅನೇಕ ಸಂಗತಿಗಳಿಗೆ ಸಂಬಂಧಿಸಿದಂತೆ ಮಹಿಳೆಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಿಗೆ ಜಗತ್ತು ಸಾಕ್ಷಿ ಆಗಿದೆ. 1970- 80ರ ದಶಕಗಳಲ್ಲಿ ನಡೆದಿದ್ದ ‘ಸಮಾನ ಹಕ್ಕುಗಳ ತಿದ್ದುಪಡಿ ಜಾಥ’ ಅಮೆರಿಕದೆಲ್ಲೆಡೆ ಸಮಾನ ಹಕ್ಕುಗಳನ್ನು ಆಗ್ರಹಿಸಿ ಮಹಿಳೆಯರನ್ನು ಸಂಘಟಿಸಿತ್ತು. ಅಂತೆಯೇ ತಮ್ಮ ಮಕ್ಕಳಿಗೆ ಉತ್ತಮ ಭದ್ರತೆ ಒದಗಿಸಲು ಕಠಿಣ ಬಂದೂಕು ನಿಯಂತ್ರಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ, 2000 ರಲ್ಲಿ ವಾಷಿಂಗ್ಟನ್‌ನಲ್ಲಿ ತಾಯಂದಿರ ನೇತೃತ್ವದಲ್ಲಿ ‘ಮಿಲಿಯನ್ ಮಾಮ್ ಮಾರ್ಚ್’ ನಡೆದಿತ್ತು. ಭಾರತದಲ್ಲಿ ಮಣಿಪುರಿ ಮಹಿಳೆಯರ ಪ್ರತಿಭಟನೆ ಸರ್ಕಾರ ಮತ್ತು ಸಮಾಜದ ಮೇಲೆ ನಿರ್ಣಾಯಕ ಪರಿಣಾಮ ಬೀರಿದೆ. ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿ ಇರುವುದರಿಂದ, ಪ್ರತಿಭಟನಾಕಾರರನ್ನು ಚದುರಿಸಲು ದಬ್ಬಾಳಿಕೆಯ ಕ್ರಮಕ್ಕೆ ಮುಂದಾಗುವುದು ಕಾನೂನು ಜಾರಿ ಸಂಸ್ಥೆಗಳಿಗೆ ಕಷ್ಟವಾಗಿದೆ.

ಶಾಹೀನ್ ಬಾಗ್‌ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಿರುವುದರ ಹಿಂದಿನ ಎರಡನೇ ಪ್ರಮುಖ ಕಾರಣ ಎಂದರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿ ಜೆ ಪಿ) ವಿರುದ್ಧದ ದೊಡ್ಡ ರಾಜಕೀಯ ಎಂಜಿನಿಯರಿಂಗ್ ಆಗಿರಬಹುದು. ಜನಪ್ರಿಯ ಗ್ರಹಿಕೆಗೆ ಅನುಗುಣವಾಗಿ, ಬಿಜೆಪಿ ಮತ್ತು ಭಾರತದ ಮುಸ್ಲಿಮರು ಸೈದ್ಧಾಂತಿಕವಾಗಿ ಪರಸ್ಪರ ವಿರೋಧಿ ನೆಲೆಯಲ್ಲಿದ್ದಾರೆ. ರಾಜಕೀಯವನ್ನು ಚುನಾವಣಾ ಲಾಭ ಮತ್ತು ನಷ್ಟಗಳಿಗೆ ಸೀಮಿತಗೊಳಿಸುವ ಸನ್ನಿವೇಶದಲ್ಲಿ, ಮುಸ್ಲಿಮರ ಬೆಂಬಲ ಬಿಜೆಪಿಗೆ ಮುಖ್ಯ ಆಗಿದೆ. ಹೆಚ್ಚು ಚರ್ಚೆಗೆ ಒಳಗಾದ ತ್ರಿವಳಿ ತಲಾಖ್ ಮಸೂದೆಯನ್ನು 2017 ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ್ದು ನಂತರ, 2019ರ ಜುಲೈ 30ರಂದು ಅದನ್ನು ಜಾರಿಗೆ ತರಲಾಯಿತು. ಇದರಿಂದ ಮುಸ್ಲಿಂ ಮಹಿಳೆಯರ ಬೆಂಬಲ ಪಡೆದು ಮುಸ್ಲಿಂ ಸಮುದಾಯವನ್ನು ಒಡೆಯಲು ಬಿಜೆಪಿಗೆ ಸಾಧ್ಯ ಆಗಿದೆ ಎಂದು ನಂಬಲಾಗಿತ್ತು. ತ್ರಿವಳಿ ತಲಾಖ್ ಕಾಯ್ದೆ ಜಾರಿ ಮೂಲಕ ತಾನು ಮುಸ್ಲಿಂ ಮಹಿಳೆಯರ ಪರ ಎಂದು ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮುಂದುವರಿದು ಹೇಳುವುದಾದರೆ, ಮುಸ್ಲಿಂ ಮಹಿಳೆಯರ ಮೂಲಕ ಬಿಜೆಪಿ ಗಳಿಸಿದ್ದ ಅಂಕವನ್ನು ಪ್ರತಿಭಟನೆ ಮೂಲಕ ಕಸಿದುಕೊಳ್ಳಲು ಪಕ್ಷದ ವಿರೋಧಿಗಳು ಯತ್ನಿಸುತ್ತಿರಬಹುದು.

ಶಾಹೀನ್ ಬಾಗ್ ಮುಸ್ಲಿಂ ಮಹಿಳೆಯರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ರೀತಿಯಲ್ಲಿಯೇ ಪ್ರಯಾಗ್ ರಾಜ್ ನಂತಹ ಸ್ಥಳಗಳಲ್ಲಿ ಮಹಿಳಾ ಚಳವಳಿಗಳು ಪುನರಾವರ್ತನೆಯಾಗಿರುವುದು ಮತ್ತು ಒಗ್ಗಟ್ಟು ಪ್ರದರ್ಶನ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಮಟ್ಟಿಗೆ, ಪ್ರತಿಭಟನೆ ಸ್ವಯಂಪ್ರೇರಿತ ಎಂದು ಹೇಳುವುದಕ್ಕಿಂತ ವಿರುದ್ಧ ರೀತಿಯಲ್ಲಿ ಸಂಘಟಿತ ಎಂದು ತೋರುತ್ತಿದೆ. ಸಂಘಟಿತವೇ ಆಗಿರಲಿ ಸ್ವಯಂಪ್ರೇರಿತವೇ ಇರಲಿ, ಆದರೂ ಪ್ರತಿಭಟನೆ ವೇಳೆ ದೊಡ್ಡ ಮಟ್ಟದಲ್ಲಿ ಮಹಿಳೆಯರು ಭಾಗವಹಿಸಿದ್ದು ನೀತಿ ನಿರೂಪಕರಿಗೆ ಅಂತೆಯೇ ಸಮಾಜಕ್ಕೆ ಪ್ರಮುಖ ಸಂದೇಶ ರವಾನೆ ಮಾಡುತ್ತಿದೆ. ತಮ್ಮ ಪ್ರಾಣಕ್ಕೆ ಆಪತ್ತು ಇದೆ ಎಂಬ ಸಂದರ್ಭದಲ್ಲಿ ಕೂಡ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರು ವಹಿಸಿದ ನಿರ್ಣಾಯಕ ಪಾತ್ರ ಎಂಥಹದ್ದು ಎಂಬುದನ್ನು ಇದು ಅನಿವಾರ್ಯವಾಗಿ ಎತ್ತಿ ತೋರಿಸುತ್ತದೆ. ಅದಕ್ಕಿಂತ ಮುಖ್ಯವಾಗಿ, ಸರ್ಕಾರ ಕಾಯ್ದೆಯ ಪರವಾಗಿ ನಿಂತಾಗ ಶಾಹೀನ್ ಬಾಗ್ ಮಹಿಳಾ ಪ್ರತಿಭಟನೆ ನೀತಿಗಳಿಗೆ ಪ್ರತಿರೋಧವೊಡ್ಡುವ ಮತ್ತು ಸಾಮಾಜಿಕ ಸಂವಹನಗಳ ಮೇಲೆ ಪ್ರಭಾವ ಬೀರುವ ನಿರ್ಣಾಯಕ ಅಂಶವಾಗಿ ಕಾಣುತ್ತಿದೆ.

ಲೇಖಕರು: ಡಾ. ಅನ್ಶುಮಾನ್ ಬೆಹೆರ್​, ಸಹಾಯಕ ಪ್ರಾಧ್ಯಾಪಕ, ಎನ್ ಐ ಎ ಎಸ್- ಬೆಂಗಳೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.