ಇಡುಕ್ಕಿ(ತಮಿಳುನಾಡು) : ಹಿಂಬಾಲಿಸಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಮಹಿಳೆಯೇ ಹತ್ಯೆಗೈದಿರುವ ಘಟನೆ ತಮಿಳುನಾಡು ಬೋಡಿನಾಯಕನೂರಿನ ಸಂತನಪರಾ ಬಾಲ್ ರಾಮ್ನಲ್ಲಿ ನಡೆದಿದೆ.
ರಾಜನ್ ಎಂಬ ವ್ಯಕ್ತಿ 38 ವರ್ಷದ ವಲರ್ಮತಿ ಎಂಬಾಕೆಯ ಹಿಂದೆ ಬಿದ್ದು ಕಾಡುತ್ತಿದ್ದನಂತೆ. ಇದರಿಂದ ಬೇಸತ್ತ ಮಹಿಳೆ ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕೊಲೆಯಾದ ರಾಜನ್ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರಿಗೂ ವಿಚ್ಛೇದನ ನೀಡಿದ್ದಾನೆ. ಅಲ್ಲದೆ, ವಲರ್ಮತಿಗೆ ಕರೆ ಮಾಡಿ, ಮನೆಗೆ ಹೋಗಿ ತೊಂದರೆ ನೀಡ್ತಿದ್ದನಂತೆ. ಇದನ್ನೆಲ್ಲ ಕಂಡ ಸ್ಥಳೀಯರು ರಾಜನ್ಗೆ ಎಚ್ಚರಿಕೆ ನೀಡಿದ್ರಂತೆ. ಆದ್ರೂ ಆತ ತನ್ನ ಚಾಳಿ ಮುಂದುವರಿಸಿದ್ದನು.
ಈ ಘಟನೆಗಳಿಂದ ಬೇಸತ್ತ ಮಹಿಳೆ ತನ್ನ ಸಂಬಂಧಿಕರ ಮನೆಗೆ ತೆರೆಳಿದ್ದಳು. ರಾಜನ್ ಅಲ್ಲಿಗೂ ಹೋಗಿ ರಂಪಾಟ ಮಾಡ್ತಿದ್ದನಂತೆ. ಇವೆಲ್ಲವುಗಳಿಂದ ಕುಪಿತಳಾದ ಮಹಿಳೆ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಅವನ ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾಳೆ.
ಘಟನೆ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳು ರಾಜನ್ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ಗಾಯಾಳು ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಹಾಗೂ ಆಕೆಯ ಪುತ್ರನನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.