ETV Bharat / bharat

ನಂಬಿಸಿ 250 ಕೋಟಿ ರೂ. ವಂಚನೆ: ಮಹಿಳೆ ಬಂಧಿಸಿದ ಪೊಲೀಸರು! - ನವದೆಹಲಿಯಲ್ಲಿ ಮಹಿಳೆ ಬಂಧನ

ದ್ವಿಗುಣ ಬಡ್ಡಿ ಆಸೆ ಹುಟ್ಟಿಸಿ ಬರೋಬ್ಬರಿ 250 ಕೋಟಿ ರೂ. ವಂಚನೆ ಮಾಡಿದ್ದ ಮಹಿಳೆಯೊಬ್ಬಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

women arrest
women arrest
author img

By

Published : Oct 12, 2020, 9:09 PM IST

ನವದೆಹಲಿ: ಬರೋಬ್ಬರಿ 900 ಜನರಿಗೆ 250 ಕೋಟಿ ರೂ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯೊಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾ ಮೂಲದ 47 ವರ್ಷದ ಮಹಿಳೆ ಆ್ಯಪ್​ ಆಧಾರಿತ ಟ್ಯಾಕ್ಸಿ ಕಂಪನಿಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ವಂಚನೆ ಮಾಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ತಿಳಿಸಿರುವ ಪ್ರಕಾರ ಮಹಿಳೆ ಮೇಲೆ 2019ರಲ್ಲಿ ದೂರು ದಾಖಲಾಗಿತ್ತು. ಹಲೋ ಟ್ಯಾಕ್ಸಿ ಆ್ಯಪ್​​ನಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಶೇ.200ರಷ್ಟು ಬಡ್ಡಿ ದರ ನೀಡುವುದಾಗಿ ಹೇಳಿದ್ದರು. ಹೀಗಾಗಿ ಬರೋಬ್ಬರಿ 900 ಜನರು 250 ಕೋಟಿ ರೂ ಹೂಡಿಕೆ ಮಾಡಿದ್ದರು. ಇದಾದ ಬಳಿಕ ಹಣ ತೆಗೆದುಕೊಂಡು ಪರಾರಿಯಾಗಿದ್ದರು.

ಇದೀಗ ಕಂಪನಿ ಬ್ಯಾಂಕ್​ ಸ್ಟೇಟ್​ಮೆಂಟ್​​ ಪರಿಶೀಲನೆ ಮಾಡಿದಾಗಿ 3,27,48,495 ರೂ ಇರುವ ಬ್ಯಾಂಕ್​ ಖಾತೆ ಸ್ಥಗಿತಗೊಳಿಸಲಾಗಿದ್ದುಮ 3.5 ಕೋಟಿ ರೂ. ಮೌಲ್ಯದ 60 ಹೊಸ ಕಾರುಗಳನ್ನ ನೋಯ್ಡಾದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.